ಸಾಗುವಳಿ ಹಕ್ಕುಪತ್ರ ವಿತರಣೆ: ಜಿಟಿಡಿಗೆ ಅಭಿನಂದನೆ
ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕನಸನ್ನು ನನಸು ಮಾಡಿದ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರಿಗೆ 738 ರೈತ ಫಲಾನುಭವಿಗಳಿಂದ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದೆ.
ತಾಲೂಕಿನ ಉದ್ದೂರುಕಾವಲ್ ಸೊಸೈಟಿ ಜಮೀನಿನ ಸಾಗುವಳಿ ಹಕ್ಕುಪತ್ರದ ವಿವಾದ ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರ ವಿತರಣೆ ಪ್ರಕ್ರಿಯೆಗೆ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡರು ಸರ್ಕಾರದ ಮೇಲೆ ಒತ್ತಡ ಹಾಕಿ ಜ.31ರ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಹಕ್ಕು ಪತ್ರ ಮಂಜೂರಾತಿ ಮಾಡಿಸಿರುವುದಕ್ಕೆ ಸೊಸೈಟಿ ಜಮೀನಿನ ರೈತರಾದ ಗ್ರಾಪಂ ಮಾಜಿ ಅಧ್ಯಕ್ಷ ಕುಪ್ಪಸ್ವಾಮಿ, ಮಾಜಿ ಜಿಪಂ ಸದಸ್ಯ ಬಿ.ಕೆ. ಪರಮೇಶ್, ಮುಖಂಡ ಆರ್. ಸ್ವಾಮಿ, ವೆಂಕಟೇಶ್‌ಗೌಡ, ರಾಮಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಹಜರಾತ್ ಜಾನ್ ಹಾಗೂ ಹಲವು ಮುಖಂಡರು ಮಾತನಾಡಿ ಅಭಿನಂದಿಸಿದರು.
ಜಿಟಿಡಿ ಫೌಂಡೇಶನ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಮಾತನಾಡಿ, ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಉದ್ದೂರು ಕಾವಲ್ ಸೊಸೈಟಿ ಜಮೀನಿನ ಹಕ್ಕು ಪತ್ರ ಕೊಡಿಸುವಲ್ಲಿ ಜಿ.ಟಿ. ದೇವೇಗೌಡರು, ಹಂತ-ಹಂತವಾಗಿ ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯಮಟ್ಟದ ತನಕ ಅಧಿಕಾರಿಗಳು ಮತ್ತು ಸಚಿವ ಸಂಪುಟದಲ್ಲಿ ಮಂಜೂರಾತಿ ಮಾಡಿಸಿ, ದಾಖಲೆ ಮಾಡಿ ಬಡವರ ಬದುಕಿಗೆ ಆಶಾಕಿರಣವಾಗಿದ್ದಾರೆ. ಮುಂಬರುವ ದಿನಗಳಲ್ಲಿ ಜಿಟಿಡಿ ಅವರ ಕೈ ಬಲಪಡಿಸಿದರೆ, ಈ ಜಮೀನಿನ ಅಭಿವೃದ್ಧಿ ಮತ್ತು ಸೊಸೈಟಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದರು.
ಸಂಭ್ರಮ: ಜ.31ರ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಸೊಸೈಟಿ ಜಮೀನಿನ ಹಕ್ಕುಪತ್ರ ಮಂಜೂರಾತಿ ವಿಷಯವನ್ನು ಗೃಹಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡರು ದೂರವಾಣಿ ಮೂಲಕ ಗ್ರಾಮಸ್ಥರಿಗೆ ತಿಳಿಸುತ್ತಿದ್ದಂತೆ, ಗ್ರಾಮದಲ್ಲಿ ಹಬ್ಬದ ಸಡಗರ ಸಂಭ್ರಮ ಎಲ್ಲರಲ್ಲೂ ಮನೆಮಾಡಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಜಿ.ಟಿ. ದೇವೇಗೌಡರಿಗೆ ಜೈಕಾರ ಕೂಗಿದರು. ಪುತ್ರ ಜಿ.ಟಿ.ಹರೀಶ್‌ಗೌಡರ ಹುಟ್ಟುಹಬ್ಬ ಮತ್ತಷ್ಟು ಮೆರಗು ನೀಡಿತು. ಈ ಮಹತ್ವದ ನಿರ್ಣಯ ಅಂಗೀಕರಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಕ್ಷೇತ್ರದ ರೈತರ ಪರವಾಗಿ ಅಭಿನಂದಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಸದಸ್ಯ ನಾಗಣ್ಣ, ಬಸವಲಿಂಗಯ್ಯ, ತಾಪಂ ಸದಸ್ಯ ಪ್ರಭಾಕರ್, ಗ್ರಾಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ಸೋಮಣ್ಣ, ಗೌರಿಪುರ ಮಹದೇವ್, ಸ್ವತಂತ್ರಿಗೌಡ, ಮಹದೇವ್, ಜೈಶಂಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

