ಶಿಕ್ಷಕರಿಂದ ಪ್ರಗತಿಪತ್ರ ಭರ್ತಿ
ಮೇಲುಕೋಟೆ: ಸಿ.ಆರ್.ಸಿಯಲ್ಲಿ ಶನಿವಾರ ನಡೆದ ಮಾಸಿಕ ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಕಾಶ್ ಪ್ರಗತಿಪತ್ರಗಳ ನಿರ್ವವಣೆ ಮತ್ತು ದಾಖಲೀಕರಣಗಳ ಬಗ್ಗೆ ಸಮಗ್ರಮಾಹಿತಿ ನೀಡಿ ಶಿಕ್ಷಕರಿಂದ ಪ್ರಗತಿಪತ್ರ ತುಂಬಿಸಿದರು. ಸಭೆಯ ಅಧ್ಯಕ್ಷತೆ ಬಾಲಕಿಯರ ಶಾಲೆಯ ಮುಖ್ಯಶಿಕ್ಷಕ ಸಣ್ಣಬೋರೇಗೌಡ ವಹಿಸಿದ್ದರು. ಸಂಯೋಜಕಿ ಗೀತ ಹಾಗೂ ಮೇಲುಕೋಟೆ ಕ್ಲಸ್ಟರ್ನ ಎಲ್ಲಾ ಶಾಲೆಗಳ ಶಿಕ್ಷಕರು ಇದ್ದರು.
'ವಿವೇಕಾನಂದರ ಸಿದ್ಧಾಂತ ಪಾಲಿಸಿ'
ಕೆ.ಆರ್.ಪೇಟೆ: ದೇಶ ಅಭಿವೃದ್ಧಿಯಾಗಬೇಕಾದರೆ ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ವೃತ್ತ ನಿರೀಕ್ಷಕ ಎಸ್.ಎನ್. ಸಂದೇಶ್ಕುಮಾರ್ ಕರೆ ನೀಡಿದರು. ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150 ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ ದೇಶದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತ ದೇಶದ ಸಂಸ್ಕೃತಿ ಬಗ್ಗೆ ವಿಶ್ವದ ಗಮನ ಸೆಳೆದ ಸ್ವಾಮಿ ವಿವೇಕಾನಂದರ ದೇಶದ ಸಂಸ್ಕೃತಿಯ ಪ್ರೇಮ ಅಜರಾಮರವಾಗಿದೆ ಎಂದರು. ವಸತಿ ಶಾಲೆಯ ಹಿರಿಯ ಶಿಕ್ಷಕ ಎಚ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಶಿಕ್ಷಕರಾದ ಕೆ.ಎಸ್.ಚಂದ್ರು, ಎಂ.ಎಸ್. ಸುನೀಲ್ಕುಮಾರ್, ಕೆ.ಆರ್. ಬೇಬಿರೇಖಾ, ಬಿ.ಕೆ.ಪುಷ್ಪಾವತಿ, ಶ್ವೇತಾರಾಜ್, ಕೆ.ಆರ್.ಮಮತ, ಸಿ.ಎಸ್.ಮಂಜು, ಶಂಕರ್ ನಾಯಕ್, ನಿಲಯ ಪಾಲಕ ಎಂ.ಎಸ್. ಶಿವಕುಮಾರ್, ಹೊಸಹೊಳಲು ರಘು, ಸೈಯ್ಯದ್ ಖಲೀಲ್ ಇದ್ದರು.
ಸುರಂಗ ಪತ್ತೆ:
ಪರಿಶೀಲನೆ ಸ್ಪಷ್ಟನೆ
ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥನ ಸನ್ನಿಧಿಯ ಗಜೇಂದ್ರ ಮೋಕ್ಷ ಕಲ್ಯಾಣಿಯಲ್ಲಿ ಪತ್ತೆಯಾಗಿದ್ದ ಸುರಂಗದ ಕುರಿತು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್. ಗೋಪಾಲ್ ಗಜೇಂದ್ರ ಮೋಕ್ಷ ಕಲ್ಯಾಣಿ ಪರೀಶೀಲಿಸಿ ಸ್ಟಷ್ಪೀಕರಣ ನೀಡಿದರು. ಪಟ್ಟಣದ ಸುತ್ತಲೂ ಕಾವೇರಿ ನದಿ ಹರಿಯುವ ಕಾರಣದಿಂದ ಇಲ್ಲಿ ಯಾವುದೇ ಗುಪ್ತ ಸುರಂಗ ಮಾರ್ಗಗಳು ಇರಲು ಸಾಧ್ಯವಿಲ್ಲ. ಇದು ಕೇವಲ ಆಗಿನ ಕಾಲದಲ್ಲಿ ಕಲ್ಯಾಣಿಗೆ ಎತ್ತರದ ಪ್ರದೇಶವಾದ ಬಂಗಾರದೊಡ್ಡಿ ನಾಲೆಯಿಂದ ನೀರು ಸರಬರಾಜು ಮಾಡಲು ಬಳಸುತ್ತಿರುವ ಮಾರ್ಗವಿರಬೇಕು. ಮತ್ತೊಂದು ಕಲುಷಿತ ನೀರನ್ನು ಹೊರಸಾಗಿಸಲು ಇರುವ ಮಾರ್ಗ ಎಂದರು. ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್. ಗೋಪಾಲ್ ಜೊತೆಯಲ್ಲಿ ಪರಿಶೀಲನೆಗೆ ಆಗಮಿಸಿದ್ದ ಮೈಸೂರಿನ ಗಂಗೋತ್ರಿಯ ಇತಿಹಾಸ ಉಪನ್ಯಾಸಕ ಸ್ವಾಮಿ ಕೊಳದ ಬಳಿ ಇರುವ ಶಾಸನ ಪರೀಶೀಲಿಸಿ ಅದರ ಲಿಪಿಗಳ ಆಧಾರದ ಮೇಲೆ 1722 ರಲ್ಲಿ ಈ ಕೊಳ ನಿರ್ಮಾಣವಾಗಿದೆ. ಇದು ಮೈಸೂರಿನ ರಾಜನಾಗಿದ್ದ ಕಂಠೀರವ ನರಸರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾಗಿರಬೇಕು ಎಂದು ತಿಳಿಸಿದರು.
ಕಂಪ್ಯೂಟರ್ ತರಬೇತಿ
ಮಂಡ್ಯ: ನಿರುದ್ಯೋಗಿ ಬಡ ಯುವಕರು, ಯುವತಿಯರಿಗೆ ಫೋಟೊ ಮತ್ತು ವಿಡಿಯೊ ಹಾಗೂ ಕಂಪ್ಯೂಟರ್ ಫೋಟೊಶಾಪ್ ವಿಷಯದಲ್ಲಿ ಉಚಿತವಾಗಿ ತರಬೇತಿ ನೀಡಲು ನಗರದ ಉಮಾ ಡಿಜಿಟಲ್ ಸ್ಟುಡಿಯೋ ಆ್ಯಂಡ್ ವಿಡಿಯೊ ಮಿಕ್ಸಿಂಗ್ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಡಿಜಿಟಲ್ ಫೋಟೋ ತರಬೇತಿ, ಫೋಟೋಗ್ರಾಫರ್, ವೀಡಿಯೋ ಗ್ರಾಫರ್, ಮಿಕ್ಸಿಂಗ್, ಕರಿಶ್ಮಾ ಆಲ್ಬಮ್ ಡಿಸೈನಿಂಗ್, ಮಿಕ್ಸಿಂಗ್ ವಿಷಯದಲ್ಲಿ 15 ಮಂದಿ ಯುವಕ - ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಮಧ್ಯಾಹ್ನ ಊಟ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ-94480 49595 ಅವರನ್ನು ಸಂಪರ್ಕಿಸಬಹುದು.
ಇಂದು ಪ್ರತಿಭಟನೆ
ಭಾರತೀನಗರ: ಕಾವೇರಿ ನೀರನ್ನು ನಾಲೆಗಳಿಗೆ ಬಿಡಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಫೆ. 4ರಂದು ಸರ್.ಎಂ. ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಪ್ರತಿಭಟನೆ ನಡೆಸುವರು. ರೈತ ಸಂಘದ ಕಾರ್ಯಕರ್ತರು ಮತ್ತು ರೈತರು ಭಾಗವಹಿಸಬೇಕೆಂದು ರೈತ ಮುಖಂಡ ಅಣ್ಣೂರು ಮಹೇಂದ್ರ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

