ಸಾಮೂಹಿಕ ಸೂರ್ಯ ನಮಸ್ಕಾರ
ಮೈಸೂರು: ಮೈಸೂರು ಯೋಗ ಅಸೋಸಿಯೇಷನ್ ವತಿಯಿಂದ ಫೆ. 17ರ ಬೆಳಗ್ಗೆ 6.15ಕ್ಕೆ ಸುಬ್ಬರಾಯನಕೆರೆಯ ಬ್ಯಾಸ್ಕೆಟ್ಬಾಲ್ ಮೈದಾನದಲ್ಲಿ ರಥ ಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸುವರು.
ರಥಸಪ್ತಮಿ ಆಚರಣೆ
ಬೋಗಾದಿಯಲ್ಲಿರುವ ಯಾಜ್ಞ ವಲ್ಯ್ಕ ಶುಕ್ಲ ಯಜುರ್ವೇದ ಮಹಾಸಭಾದಲ್ಲಿ ಫೆ. 17ರ ಸಂಜೆ 6ಕ್ಕೆ ರಥಸಪ್ತಮಿ ಆಚರಿಸಲಾಗುವುದು ಎಂದು ಗೌ. ಕಾರ್ಯದರ್ಶಿ ಎನ್. ರಾಮಕೃಷ್ಣ ಶರ್ಮಾ ತಿಳಿಸಿದ್ದಾರೆ.
ಸಮ್ಮೋಹಿನಿ ಶಿಬಿರ
ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್ನಲ್ಲಿ ಫೆ. 17ರ ಬೆಳಗ್ಗೆ 9.30ಕ್ಕೆ ರೇಕಿ- 1, 2, ಸಮ್ಮೋಹಿನಿ ಚಿಕಿತ್ಸೆ ಹಾಗೂ ಪಿರಾಮಿಡ್ ದಕ್ಷಣೆ ಮೂಲಕ ಪರಿಹಾರ ನೀಡಲು ಶಿಬಿರ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಮೊ. 94496- 96998 ಸಂಪರ್ಕಿಸಬಹುದು.
ಡೆಮೊ ತರಗತಿ
ಸರಸ್ವತಿಪುರಂನಲ್ಲಿರುವ ಏಸ್ ಎಜುಕೇಷನ್ ಟ್ರಸ್ಟ್ನಲ್ಲಿ ಫೆ. 17ರ ಮಧ್ಯಾಹ್ನ 12ಕ್ಕೆ ಸಿಇಟಿ ಮತ್ತು ಎನ್ಇಇಟಿ ಉಚಿತ ಡೆಮೊ ತರಗತಿ ನಡೆಸಲಿದ್ದು, ಮೊ. 87478- 49060 ಸಂಪರ್ಕಿಸಬಹುದು.
ಬಿಡುಗಡೆ
ಕೂಡಲ ಸಂಗಮ ಶರಣರ ವೇದಿಕೆಯ ಉದ್ಘಾಟನಾ ಸಮಾರಂಭವು ಫೆ. 17ರ ಬೆಳಗ್ಗೆ 10.30ಕ್ಕೆ ಕನಕದಾಸನಗರದಲ್ಲಿ ನಡೆಯಲಿದ್ದು, ಪರಶಿವಮೂರ್ತಿ ಉದ್ಘಾಟಿಸುವರು. ದಂಡಿಕೆರೆ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಮಹದೇವ ಬಿದರಿ, ಬಸವರಾಜು, ಆಲನಹಳ್ಳಿ ಪಿ. ಮಹದೇವಸ್ವಾಮಿ, ಎಚ್.ಎಸ್. ರುದ್ರಸ್ವಾಮಿ, ಇಂದಿರಾ ಮಹೇಶ್ ಚಂದ್ರಶೇಖರ್ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

