ಮೈಸೂರು

ಅದ್ಧೂರಿ ಅರ್ಕೇಶ್ವರಸ್ವಾಮಿ ರಥೋತ್ಸವ

Published On :

ಕೆ.ಆರ್. ನಗರ: ಹಳೆಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ, ರುದ್ರಾಭಿಷೇಕ, ಸೂರ್ಯಮಂಡಲೋತ್ಸವ, ಅರ್ಕಮುಡಿ ಮುಕುಟ ಧಾರಣೆ ಇತ್ಯಾದಿ ಪೂಜಾ ಕೈಕಂರ್ಯ ನಡೆಸಲಾಯಿತು. ನಂತರ ಉತ್ಸವ ಮೂರ್ತಿಗಳನ್ನು ಅಲಂಕೃತಗೊಂಡ ರಥದಲ್ಲಿ ಕುಳ್ಳಿರಿಸಿ ಮಂಗಳವಾದ್ಯ, ಅರ್ಚಕರಿಂದ ವೇದಘೋಷ ಹಾಗೂ ಭಕ್ತರ ಹರ್ಷೋದ್ಗಾರಗಳೊಂದಿಗೆ ಬೆಳಗ್ಗೆ 10.30 ರಿಂದ 11.40 ರವರೆಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥೋತ್ಸವ ಜರುಗಿತು.
ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು, ನವ ದಂಪತಿಗಳು ರಥಕ್ಕೆ ಹಣ್ಣು- ಜವನ ಎಸೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ರಥೋತ್ಸವದ ಅಂಗವಾಗಿ ಪುರಸಭಾ ವತಿಯಿಂದ ಜಾನುವಾರು ಜಾತ್ರೆಯನ್ನು ಮೂರು ದಿನಗಳ ಕಾಲ ಏರ್ಪಡಿಸಲಾಗಿದ್ದು, ತಾಲೂಕಿನ ವಿವಿಧ ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಜಾತ್ರಾವರಣದಲ್ಲಿ ಕಟ್ಟಿದ್ದರು. ಕೊನೆದಿನ ಪುರಸಭೆ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ನೆನಪಿನ ಕಾಣಿಕೆ ನೀಡಲಾಗುತ್ತದೆ.
ಶಾಸಕ ಸಾ.ರಾ. ಮಹೇಶ್, ತಹಸೀಲ್ದಾರ್ ನೂರ್‌ಜಹಾರ್‌ಖಾನಂ, ಪುರಸಭಾಧ್ಯಕ್ಷ ತಮ್ಮನಾಯಕ, ತಾಪಂ ಅಧ್ಯಕ್ಷೆ ಕವಿತಾ ರವಿ, ಕಾಂಗ್ರೆಸ್ ಮುಖಂಡರಾದ ದೊಡ್ಡಸ್ವಾಮಿಗೌಡ, ಅನುರಾಧಾ ಮಹದೇವ್, ಅಹಲ್ಯ ಬ್ಯಾಂಕಿನ ಅಧ್ಯಕ್ಷೆ ಶಾಂತಮ್ಮ ವಿಶ್ವನಾಥ್, ನವನಗರ ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್, ಸರ್ಕಾರಿ ನೌಕರರ ಸಂಘದ ಡಿಂಡಿಂ ಶಂಕರ್, ಪುರಸಭಾ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಸುಬ್ರಮ್ಮಣ್ಯ, ಯೋಗಾನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.