'ಧರ್ಮಾತೀತ, ಜಾತ್ಯತೀತ ಅಭಿವೃದ್ಧಿ'
ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಜಾತ್ಯತೀತ ಮತ್ತು ಧರ್ಮಾತೀತವಾಗಿ ಅಭಿವೃದ್ಧಿ ಕೆಲಸ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು. ವಿಶ್ವೇಶ್ವರನಗರದ ಚಂದ್ರವಿಹಾರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕೆ.ಆರ್. ಕ್ಷೇತ್ರ ಘಟಕ ಏರ್ಪಡಿಸಿದ್ದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಅವಧಿಯಲ್ಲಿ ನಡೆದ ಅನೇಕ ಅಭಿವೃದ್ಧಿ ಕಾಮಗಾರಿ ಕಂಡು ಸಹಿಸಲಾಗದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಾರಿ ವಿಭಿನ್ನ ರೀತಿಯ ಚುನಾವಣೆಯನ್ನು ತಮ್ಮ ಅನುಮತಿಯ ಮೇರೆಗೆ ಮಾಡಬೇಕು. ಒಂದೇ ವೇದಿಕೆಯಲ್ಲಿ ಕೆ.ಆರ್. ಕ್ಷೇತ್ರದ ವಿವಿಧ ಪಕ್ಷದ ಅಭ್ಯರ್ಥಿಗಳನ್ನು ಕೂರಿಸಿ, ಯಾರು ತಮ್ಮ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂದು ಬಹಿರಂಗವಾಗಿ ಜನರಿಗೆ ತಿಳಿಸುವುದು. ಆಗ ಜನ ಯಾರಿಗೆ ಬೆಂಬಲ ಸೂಚಿಸುತ್ತಾರೋ ನೋಡೋಣ ಎಂದ ಅವರು ನಾನು ಮಾಡಿದ ಅಭಿವೃದ್ಧಿಯ ಪುಸ್ತಕ ತೆರೆದಿಟ್ಟು ಮತ ಕೇಳುತ್ತೇನೆ ಎಂದರು.
ಸಂವಿಧಾನ ಬಾಹಿರ: ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಸಂವಿಧಾನ ಬಾಹಿರವಾದದ್ದು. ಕೆ.ಆರ್. ಕ್ಷೇತ್ರದ ಎಲ್ಲಾ ಮಹಿಳೆಯರು ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಂಡು ಶೇ. 50 ರಷ್ಟು ಮೀಸಲಾತಿ ಕೇಳಬೇಕು ಎಂದರು. ಸ್ಥಳೀಯ ಮುಖಂಡ ಯೋಗಾ ಶ್ರೀನಿವಾಸ್ ಮತ್ತು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.
ಪರೀಕ್ಷಾ ತರಬೇತಿ
ದೇವನಹಳ್ಳಿ: ಇಲ್ಲಿನ ಲಯನ್ಸ್ ಸಂಸ್ಥೆ ಹಾಗೂ ದೇವನಹಳ್ಳಿ ಖಾಸಗಿ ಶಾಲೆಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಶಿಬಿರವನ್ನು ಫೆ.18 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಶ್ರೀನಿವಾಸ್ ತಿಳಿಸಿದ್ದಾರೆ. ವ್ಯಕ್ತಿ ವಿಕಸನ ತರಬೇತುದಾರರಾದ ಜಿ.ಎಸ್. ಫಣಿಭೂಷಣ್ ಹಾಗೂ ಮಾನವ ಕಂಪ್ಯೂಟರ್ ಮತ್ತು ಕೈಬರಹ ವಿಶ್ಲೇಷಕರಾದ ಎಂ.ಕುಮಾರಸ್ವಾಮಿ ಅವರು ಪರೀಕ್ಷಾ ತರಬೇತಿ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕಾರ್ಯದರ್ಶಿ ಕಿರ್ಲೋಸ್ಕರ್ ನಾಗರಾಜ್ ತಿಳಿಸಿದ್ದಾರೆ. ಉದ್ಘಾಟನೆಯನ್ನು ವಿಜಯಪುರ ನಂದಿನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಚೇತನ್ ಕುಮಾರ್ ನೆರವೇರಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

