ಮೀರ್ಸಾದಕ್ಗಳಿದ್ದರೆ ಪಕ್ಷ ತೊರೆಯಿರಿ: ತಾಕೀತು
ಹುಣಸೂರು: ಪಕ್ಷದಲ್ಲಿದ್ದುಕೊಂಡು ಪಕ್ಷವಿರೋಧಿ ಚಟುವಟಿಕೆ ಮಾಡುವ ಮೀರ್ಸಾದಕ್ಗಳಿದ್ದಲ್ಲಿ ಅಂತವರು ಪಕ್ಷ ತೊರೆಯುವುದು ಒಳ್ಳೆಯದು ಎಂದು ಶಾಸಕ ಎಚ್.ಪಿ. ಮಂಜುನಾಥ್ ತಾಕೀತು ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಹಾಗೂ ಟಿಕೆಟ್ ಆಕಾಂಕ್ಷಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಗಂಗಾನದಿಯಂತೆ. ಇಲ್ಲಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರೂ ಇದ್ದಾರೆ. ಬೇಸರಗೊಂಡವರೂ ಇದ್ದಾರೆ. ಬೇಸರಗೊಂಡವರನ್ನು ಸಮಾಧಾನಿಸಿ ಪಕ್ಷದ ಮುಖ್ಯವಾಹಿನಿಗೆ ಕರೆತರುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಆದರೆ, ಕೆಲವರು ಪಕ್ಷದಲ್ಲಿದ್ದುಕೊಂಡು ಅನ್ಯ ಪಕ್ಷದ ಮುಖಂಡರೊಂದಿಗೆ ಸಂಪರ್ಕವಿರಿಸಿಕೊಂಡು ಬೆನ್ನಿಗೆ ಚೂರಿ ಹಾಕುವ ಮೀರ್ಸಾದಕ್ ಕೆಲಸ ಮಾಡುತ್ತಿದ್ದಾರೆ. ಅಂತಹವರು ಪಕ್ಷ ಬಿಟ್ಟು ಹೋಗಬೇಕೆಂದು ತಾಕೀತು ಮಾಡಿದರು. ಪಕ್ಷದಲ್ಲಿ ಸಾಕಷ್ಟು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅರ್ಜಿ ಸಲ್ಲಿಸಿದ ನಂತರ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ, ಪಕ್ಷ ನಿಷ್ಠೆ ಪರಿಗಣಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾರ್ಯಕರ್ತರು, ಮುಖಂಡರು ಸೂಕ್ತವಾಗಿ ಸ್ಪಂದಿಸಿ ಸಹಕರಿಸಿದಲ್ಲಿ ಯಾವುದೇ ಗೊಂದಲವಿಲ್ಲದೆ ನಮ್ಮ ಗುರಿ ತಲುಪಬಹುದು ಎಂದರು. ಇದೇ ವೇಳೆ ಪುರಸಭೆ ಮಾಜಿ ಸದಸ್ಯರಾದ ಜಾ.ದಳದ ರಿಜ್ವಾನ್ ಪಾಷ, ಕಣ್ಣಯ್ಯ, ಧರ್ಮರಾಜ್, ಬಿಜೆಪಿಯ ಸುರೇಶ್ ಕಾಂಗ್ರೆಸ್ ಸೇರಿದರು.
ಜಿಪಂ ಸದಸ್ಯರಾದ ಡಾ. ಪುಷ್ಪಾವತಿ ಅಮರನಾಥ್, ರಮೇಶ್, ಪಕ್ಷದ ಮುಖಂಡರಾದ ಎನ್.ಎಸ್. ಚಂದ್ರಶೇಖರ್, ಕುಮಾರಸ್ವಾಮಿ, ಬಸವರಾಜು, ಲೋಕೇಶ್, ಗಣೇಶ್ಗೌಡ, ನಳಿನಿ, ಸೋಮಶೇಖರ್, ಚಿಕ್ಕಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

