ಮೈಸೂರು

ಹುಟ್ಟುವಾಗ ಎಲ್ಲರೂ ಶೂದ್ರರೆ: ಚಿಮೂ

Published On :

ಮೈಸೂರು: ಹುಟ್ಟುವಾಗ ಎಲ್ಲರೂ ಶೂದ್ರರಾಗಿರುತ್ತಾರೆ. ತದನಂತರ ಜ್ಞಾನ ಪಡೆಯುತ್ತ ಬ್ರಹ್ಮವನ್ನು ಪಡೆಯುತ್ತಾರೆ. ಉದಾತ್ತ ಚಿತ್ತದಿಂದ ಅತಿ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಪ್ರತಿಪಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ಅವರು ಸಂಪಾದಿಸಿರುವ ಶ್ರೀ ನೀಲಕಂಠ ಮಲ್ಲಿಕಾರ್ಜುನ ಮಹಾಪುರಾಣ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶೂದ್ರ ಜೀವನ ನಡೆಸಿದ ಮೇಲೆ ತಮಗೆ ಬೇಕಾದ ವೃತ್ತಿ ಆಯ್ಕೆ ಮಾಡಿಕೊಂಡು ಬ್ರಾಹ್ಮಣರಾಗುತ್ತಾರೆ ಎಂದರು.
ಶ್ರೇಷ್ಠ ಪರಂಪರೆ: ಕುರುಹಿನಶೆಟ್ಟಿ ಜನಾಂಗದ ಬಗ್ಗೆ ಹೇಳಬೇಕೆಂದರೆ, ಕುರುಹು ಎಂದರೆ ಗುರುತು ಎಂಬ ಅರ್ಥವಿದೆ. ವ್ಯಾಪಾರಿಗಳು, ನೇಯ್ಗೆಕಾರರು ಮುದ್ರಾಂಕಿತವಾಗಿ ಕುರುಹನ್ನು ನೀಡುತ್ತಿದ್ದರು. ಇವರ ಇತಿಹಾಸ ವೀರಶೈವ ಧರ್ಮದಂತೆ 12ನೇ ಶತಮಾನಕ್ಕೆ ಹೋಗುತ್ತದೆ. ಇದೇ ಜನಾಂಗದವರು ನೆರೆಯ ಮಹಾರಾಷ್ಟ್ರದಲ್ಲಿದ್ದು, ಅಲ್ಲಿ ಕೋಷ್ಠಿ, ಲಿಂಗಿಗಳು ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಜನಾಂಗವು ಅತ್ಯಂತ ಶ್ರೇಷ್ಠ ಸಾಂಸ್ಕೃತಿಕ ಪರಂಪರೆ ಹೊಂದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಪುರಾಣಗಳಿಂದ ಮೌಲ್ಯ ಗಳಿಸಿಕೊಳ್ಳಬಹುದಾಗಿದೆ. ಇಂದು ಮೌಲ್ಯ ಕುಸಿಯುತ್ತಿದ್ದು, ಇದನ್ನು ತಪ್ಪಿಸಲು ಧರ್ಮ ಆಧಾರದ ಮೇಲೆ ಜೀವನ ನಡೆಸಬೇಕಿದೆ. ಧರ್ಮದ ಬಗ್ಗೆ ವಿಚಾರ ತಿಳಿದುಕೊಳ್ಳಲು ಯುವಜನತೆ ಮುಂದಾಗಬೇಕು. ವಿಶ್ವಸಂಸ್ಥೆಯು ಭಾರತವನ್ನು ವಿಶ್ವದ ನಂ. 1 ಬುದ್ಧಿವಂತ ದೇಶ ಎಂದು ಹೇಳಿದೆ. ಈ ಸ್ಥಾನವನ್ನು ಕಾಯ್ದುಕೊಂಡು ಭಾರತಮಾತೆಗೆ ವಿಶ್ವಮಟ್ಟದಲ್ಲಿ ಘನತೆ ತಂದುಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸಂಪಾದಕ ಡಾ.ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ದಂಪತಿಯನ್ನು ಸನ್ಮಾನಿಸಲಾಯಿತು.
ಓಜಸ್ ಪ್ರತಿಷ್ಠಾನದ ಬಸವಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ಐದು ಸಂಶೋಧನಾ ಗ್ರಂಥಗಳನ್ನು ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಬಿಡುಗಡೆಗೊಳಿಸಿದರು. ಪತ್ರಕರ್ತ ಸ. ಗಿರಿಜಾಶಂಕರ ಐದು ಕೃತಿಗಳನ್ನು ಪರಿಚಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.