ಮೈಸೂರು ಪಾಲಿಕೆ: ಒಟ್ಟಾರೆ 678 ನಾಮಪತ್ರ ಸಲ್ಲಿಕೆ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 678 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಾಲಿಕೆಯ 65 ವಾರ್ಡ್ಗಳಿಗೆ ಕಾಂಗ್ರೆಸ್ನಿಂದ 104, ಬಿಜೆಪಿಯಿಂದ 102, ಜೆಡಿಎಸ್ನಿಂದ 108, ಸಿಪಿಐ(ಎಂ)ನಿಂದ 1, ಸ್ವತಂತ್ರವಾಗಿ 228, ಜೆಡಿಯುನಿಂದ 4, ಸೋಷಿಯಲ್ ಡೆಮಾಕ್ರಟಿಕ್ ಪಕ್ಷದಿಂದ 18, ಬಿಎಸ್ಆರ್ ಕಾಂಗ್ರೆಸ್ನಿಂದ 47 ಮತ್ತು ಕೆಜೆಪಿಯಿಂದ 66 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಕಡೆ ದಿನವಾದ ಶನಿವಾರ ನೂರಾರು ಮಂದಿ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಡನೆ ಮೆರವಣಿಗೆ, ಪಾದಯಾತ್ರೆ, ಬೈಕ್ ರ್ಯಾಲಿಗಳ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಕಡೆಯ ದಿನವಾದ್ದರಿಂದ ಎಲ್ಲಾ ನಾಮಪತ್ರ ಸ್ವೀಕಾರ ಕೇಂದ್ರಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ: ಉಳಿದಂತೆ ನಂಜನಗೂಡು ಪುರಸಭೆಯ 27 ವಾರ್ಡ್ಗಳಿಗೆ 177 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 46, ಬಿಜೆಪಿ- 34, ಜೆಡಿಎಸ್- 39, ಪಕ್ಷೇತರ- 28, ಬಿಎಸ್ಆರ್-2 ಮತ್ತು ಕೆಜೆಪಿಯಿಂದ 28 ನಾಮಪತ್ರ ಸಲ್ಲಿಕೆಯಾಗಿವೆ.
ಬನ್ನೂರು ಪುರಸಭೆಯ 23 ವಾರ್ಡ್ಗೆ 104 ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ ಕಾಂಗ್ರೆಸ್- 34, ಬಿಜೆಪಿ 17, ಜೆಡಿಎಸ್- 27, ಪಕ್ಷೇತರ- 11, ಬಿಎಸ್ಆರ್- 8 ಮತ್ತು ಕೆಜೆಪಿಯಿಂದ- 7 ನಾಮಪತ್ರ ಸಲ್ಲಿಕೆಯಾಗಿದೆ.
ಹುಣಸೂರು ಪುರಸಭೆಯ 27 ವಾರ್ಡ್ಗಳಿಂದ 320 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್-57, ಬಿಜೆಪಿ- 11, ಜೆಡಿಎಸ್- 86, ಸಿಪಿಐಎಂ- 5, ಪಕ್ಷೇತರರಾಗಿ- 127, ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಕ್ಷ- 14, ಬಿಎಸ್ಆರ್- 11 ಮತ್ತು ಕೆಜೆಪಿ- 9 ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಆರ್. ನಗರ ಪುರಸಭೆಯ 23 ವಾರ್ಡ್ಗಳಿಂದ ಒಟ್ಟು 194 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್- 37, ಬಿಜೆಪಿ- 28, ಜೆಡಿಎಸ್- 47, ಪಕ್ಷೇತರ- 56, ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ- 4, ಬಿಎಸ್ಆರ್- 7 ಮತ್ತು ಕೆಜೆಪಿ- 15 ನಾಮಪತ್ರ ಸಲ್ಲಿಕೆಯಾಗಿದೆ.
ಟಿ. ನರಸೀಪುರ ಪಪಂನ 11 ವಾರ್ಡ್ಗೆ 87 ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ ಕಾಂಗ್ರೆಸ್- 20, ಬಿಜೆಪಿ- 14, ಜೆಡಿಎಸ್- 15, ಪಕ್ಷೇತರ- 23, ಬಿಎಸ್ಆರ್- 3 ಮತ್ತು ಕೆಜೆಪಿಯಿಂದ 12 ನಾಮಪತ್ರ ಸಲ್ಲಿಕೆಯಾಗಿದೆ.
ಪಿರಿಯಾಪಟ್ಟಣ ಪಪಂನ 15 ವಾರ್ಡ್ಗಳಿಂದ 66 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್- 16, ಬಿಜೆಪಿ-12, ಜೆಡಿಎಸ್-17, ಪಕ್ಷೇತರ-5, ಬಿಎಸ್ಆರ್- 9 ಮತ್ತು ಕೆಜೆಪಿಯಿಂದ 7 ನಾಮಪತ್ರ ಸಲ್ಲಿಕೆಯಾಗಿದೆ.
ಎಚ್.ಡಿ. ಕೋಟೆ ಪಪಂನ 13 ವಾರ್ಡ್ಗಳಿಂದ 107 ನಾಮಪತ್ರ ಸಲ್ಲಿಕೆಯಾಗಿದೆ. ಈ ಪೈಕಿ ಕಾಂಗ್ರೆಸ್- 16, ಬಿಜೆಪಿ- 18, ಜೆಡಿಎಸ್- 22, ಪಕ್ಷೇತರ- 21, ಬಿಎಸ್ಆರ್- 15 ಮತ್ತು ಕೆಜೆಪಿ- 15 ನಾಮಪತ್ರ ಸಲ್ಲಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

