ರೈತರ ಬದುಕು ಬಿಂಬಿಸುವ ಚೆರ್ರಿ ತೋಪು: ಸುಮತಿ
ಮೈಸೂರು: ಆಂಟನ್ ಚೆಕಾಫ್ ಅವರ ದಿ ಚೆರ್ರಿ ಆರ್ಚ್‌ರ್ಡ್‌ನ ಕನ್ನಡ ಅವತರಣಿಕೆಯಾದ ಚೆರ್ರಿ ತೋಪು ನಾಟಕ ಕೃತಿಯು ರೈತರ ಬದುಕನ್ನು ಬಿಂಬಿಸಿದೆ. ಮೂಲ ಕೃತಿ ರಚನೆಯಾಗಿ 100 ವರ್ಷ ಕಳೆದಿದ್ದರೂ ಇಂದಿಗೂ ಪ್ರಸ್ತುತವಾಗಿದೆ ಎಂದು ರಂಗಕರ್ಮಿ ಕೆ.ಆರ್. ಸುಮತಿ ಹೇಳಿದರು.
ಚಿಂತನ ಚಿತ್ತಾರ ಸಂಸ್ಥೆಯು ಭಾನುವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಏರ್ಪಡಿಸಿದ್ದ ಚೆರ್ರಿ ತೋಪು ಪುಸ್ತಕ ಓದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ವಿ. ಅಕ್ಷರ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿಯು ರೈತರ ಜೀವನವನ್ನು ಕೇಂದ್ರೀಕರಿಸಿದೆ.
ಜಮೀನು ಮಾರಿಕೊಂಡ ರೈತರು ತಮ್ಮ ಬದುಕನ್ನು ಕಳೆದುಕೊಂಡು ಹೇಗೆ ಅನಾಥವಾಗುತ್ತಾರೆ ಎಂಬುದು ಇದರ ಕಥಾ ವಸ್ತುವಾಗಿದೆ. ಕನ್ನಡಕ್ಕೆ ಅನುವಾದಿಸಿರುವ ಕೆ.ವಿ. ಅಕ್ಷರ ಅವರ ಸಾಹಿತ್ಯವೂ ಚೆನ್ನಾಗಿದೆ ಎಂದರು. ಈ ನಾಟಕ ಕೃತಿಯನ್ನು ಓದುತ್ತಿದ್ದರೆ ಚಲನೆ ಇಲ್ಲದಿರುವುದು ಭಾಸವಾಗುತ್ತದೆ. ಆದರೆ, ಕಥೆಯ ಕೊನೆ ತಲುಪವಷ್ಟರಲ್ಲಿ ಎಲ್ಲವೂ ಅರ್ಥವಾಗುತ್ತದೆ.
ಆಗ ಗತಿಯ ಚಲನೆ ಸಿಕ್ಕಿದೆ ಎಂಬುದೂ ಗೊತ್ತಾಗುತ್ತದೆ. ಬದಲಾವಣೆ ಸೂಕ್ಷ್ಮ ವಿಷಯವಾಗಿದ್ದು, ಮಾನವನ ಪ್ರಜ್ಞೆ ಮತ್ತು ಪರಿಸರದಿಂದ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಪ್ರತಿಕ್ರಿಯೆ ನೀಡಿದರು.ಭಾಷಾ ತಜ್ಞ ಪ್ರೊ.ಸಿ.ಎಸ್. ರಾಮಚಂದ್ರ ಅತಿಥಿಯಾಗಿದ್ದರು. ಅಧ್ಯಾಪಕ ಗೋವಿಂದರಾಜು ಲಕ್ಷ್ಮೀಪುರ ನಿರೂಪಿಸಿದರು. ರಾಜೇಶ್‌ಪುಸ್ತಕ ಓದಿದರು. ರವಿಚಂದ್ರ ಚಿಕ್ಕಯ್ಯನಂಹುಡಿ ಭಾವಗೀತೆ ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

