ಮೈಸೂರು

ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ

Published On :

ಮೈಸೂರು: ಬಂಧಿತರಾಗಿರುವ 5 ಕಿರಿಯರ ವಯೋವಾನ ಪ್ರಮಾಣ ಪತ್ರಗಳನ್ನು ಕೂಡಲೇ ಬಾಲನ್ಯಾಯ ಮಂಡಳಿ ಮುಂದೆ ಸಲ್ಲಿಸುವಂತೆ ನಂಜನಗೂಡು ಉಪ ಕಾರಾಗೃಹ ಅಧೀಕ್ಷಕರಿಗೆ ಮಂಡಳಿ ಸದಸ್ಯ ಪಿ.ಪಿ. ಬಾಬುರಾಜ್ ಸೂಚಿಸಿದ್ದಾರೆ. ನಂಜನಗೂಡಿನ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ವಿಚಾರಣಾಧೀನ ಕೈದಿಗಳಲ್ಲಿ ಐದು ಮಂದಿಯ ವಿವರಗಳನ್ನು ಕಲೆ ಹಾಕಿದರು. ಎಲ್ಲರೂ 20 ವರ್ಷದೊಳಗಿನವರೆಂದು ನಮೂದಿಸಲಾಗಿದ್ದು, ಬಾಲಕರಂತೆ ಕಾಣುತ್ತಿದ್ದರು. ಅವರಲ್ಲಿ ಇಬ್ಬರು 18 ವರ್ಷಕ್ಕೊಳಪಟ್ಟವರು. ಇವರು ಬಾಲಕರೆ ಅಲ್ಲವೇ ಎಂದು ಖಚಿತಪಡಿಸಲು ಈ ಐದು ಮಂದಿಯ ವಯೋವಾನ ಪ್ರಮಾಣ ಪತ್ರ ಅಥವಾ ಜನನ ಪ್ರಮಾಣ ಪತ್ರ ಸಂಗ್ರಹಿಸಿ ಕೂಡಲೇ ಮಂಡಳಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ. 18 ವರ್ಷಕ್ಕೊಳಪಟ್ಟವರು ಇದ್ದರೆ ಅವರನ್ನು ಯಾವುದೇ ಕಾರಣಕ್ಕೂ ಜೈಲಿನಲ್ಲಿ ಇರಿಸಲು ಅವಕಾಶವಿಲ್ಲ. ಅವರನ್ನು ಕೂಡಲೇ ಸರ್ಕಾರಿ ವೀಕ್ಷಣಾಲಯಕ್ಕೆ ವರ್ಗಾಯಿಸಬೇಕು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. 19 ಅಥವಾ 20 ವರ್ಷ ಎಂದು ನಮೂದಿಸಿ ಬಾಲಕರನ್ನು ಜೈಲಿಗೆ ತಳ್ಳುವ ಪ್ರವೃತ್ತಿ ಕಂಡು ಬರುತ್ತಿದೆ. 18 ರಿಂದ 21 ವರ್ಷದೊಳಗಿನವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಾಗ ಅವರ ವಯೋವಾನ ಖಚಿತಪಡಿಸುವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಕಡ್ಡಾಯಗೊಳಿಸಿದೆ. ಜೈಲು ಪರಿಶೀಲನೆ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋಮಲತಾ, ವೀಕ್ಷಣಾಲಯದ ಆಧೀಕ್ಷಕರು ಎಂ.ಕೆ. ಕುಮಾರಸ್ವಾಮಿ, ಮೈಸೂರು ವಿವಿಯ ಡಾ. ಉಷಾರಾವ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಾಲಸುಬ್ರಹ್ಮಣ್ಯ,  ವೆಂಕಟೇಶ್ ಇದ್ದರು.

ಮೊಬೈಲ್ ಕಸಿದು ಪರಾರಿ
ಮೈಸೂರು:
ಬೈಕಿನಲ್ಲಿ ಬಂದ ಮೂವರು ಬಾಲಕನೊಬ್ಬನನ್ನು ಬೆದರಿಸಿ ಬೆಲೆ ಬಾಳುವ ಮೊಬೈಲ್ ಕಸಿದುಕೊಂಡು ಹೋಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ನಜರ್‌ಬಾದ್ ಬ್ರಿಗೇಡ್ ಅಪಾರ್ಟ್‌ಮೆಂಟ್ ಬಳಿ ಉದಯ್ ಜೈನ್ (15) ಎಂಬವರು ರಸ್ತೆಬದಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು 30 ಸಾವಿರ ಮೌಲ್ಯದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಚ್ಚಿನೊಂದಿಗೆ ಓಡಾಡುತ್ತಿದ್ದವ ವಶಕ್ಕೆ
ಮೈಸೂರು:
ಮಚ್ಚು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಜರ್‌ಬಾದ್ ಠಾಣೆ ಪೊಲೀಸರು ಬುಧವಾರ ಸಂಜೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಶೋಕ್ ಎಂಬಾತನು ಟೆರೀಷಿಯನ್ ಕಾಲೇಜು ವೃತ್ತದ ಬಳಿ ರಸ್ತೆಯಲ್ಲಿ ಮಚ್ಚು ಹಿಡಿದುಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಸಿಆರ್ ವಾಹನದಲ್ಲಿ ಆಗಮಿಸಿದ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮುಂದುವರಿಸಿದ್ದಾರೆ.

ಆಶ್ರಮ ಬಗ್ಗೆ ಅಪಪ್ರಚಾರ ಸಲ್ಲ
ಮೈಸೂರು:
ಕಳೆದ ಆರು ತಿಂಗಳಿನಿಂದ ಶ್ರೀರಾಮಕೃಷ್ಣ ಆಶ್ರಮದ ಬಗ್ಗೆ ನಿರಂತರವಾಗಿ ನಡೆದಿರುವ ಅಪಪ್ರಚಾರ ನಮ್ಮೆಲ್ಲರನ್ನು ಘಾಸಿಗೊಳಿಸಿದೆ ಎಂದು ಹಲವು ನಾಗರಿಕರು ವಿಷಾದಿಸಿದ್ದಾರೆ. ಸಿ.ಬಿ. ಲಕ್ಷ್ಮಣರಾವ್, ಪಿ.ಕೆ. ಶ್ರೀಧರ್, ಆರ್. ಪಾರ್ಥಸಾರಥಿ, ಅಜಿತ್ ಆರ್. ಪೈ, ಡಾ.ಸಿ.ಪಿ. ತಿಮ್ಮಯ್ಯ. ಕೆ. ನರೇಂದ್ರ, ರಾಘವನ್, ಡಾ.ಬಿ. ಸುಜಯಕುಮಾರ್ ಸೇರಿದಂತೆ 31 ಮಂದಿ ಗಣ್ಯ ನಾಗರಿಕರು ಜಂಟಿ ಹೇಳಿಕೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು 1892 ರಲ್ಲಿ ಮೈಸೂರಿಗೆ ಭೇಟಿ ನೀಡಿದಾಗ ತಂಗಿದ್ದ ನಿರಂಜನ ಮಠದಲ್ಲಿ ಸ್ವಾಮಿ ವಿವೇಕಾನಂದರಿಗೆ ಸಮರ್ಥ ಕೊಡುಗೆಯಾಗಬಲ್ಲ ಸ್ಮಾರಕವೊಂದನ್ನು ನಿರ್ಮಿಸಲು ಸರ್ಕಾರವು ನಿರ್ಧರಿಸಿ, ಈ ಜವಾಬ್ದಾರಿಯನ್ನು ಜಗತ್ತಿನಾದ್ಯಂತ ಸೇವಾ ಕಾರ್ಯಗಳಿಗೆ ಮಾದರಿಯಾದ ರಾಮಕೃಷ್ಣ ಮಿಷನ್‌ಗೆ ನೀಡಿರುವುದು ಸಮರ್ಥನೀಯವಾಗಿದೆ ಎಂದು ತಿಳಿಸಿದ್ದಾರೆ. ನಿರಂಜನ ಮಠದ ಜಾಗ ಚಿಕ್ಕದು. ಹೀಗಾಗಿ ಪಕ್ಕದ ಶಾಲೆಯಲ್ಲಿ ಕೇವಲ 19 ಮಕ್ಕಳಿರುವುದರಿಂದ ಅದನ್ನು ಸಮೀಪದ ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸಿ, ಮಠಕ್ಕೆ ನೀಡಿದ್ದಾರೆ. ಜ್ಞಾನಬುತ್ತಿ ಸಂಸ್ಥೆಯ ತರಗತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದ್ದಾರೆ.

ನಾಳೆ ಪ್ರಮಾಣ ಪತ್ರ ಪ್ರದಾನ
ಮೈಸೂರು:
ಪರಿಸರ ಫೌಂಡೇಷನ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಹುಲಿ ಯೋಜನೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಪತ್ರಕರ್ತರಿಗಾಗಿ ಬಂಡೀಪುರದಲ್ಲಿ ನಡೆದ ಪ್ರಕೃತಿ ಶಿಬಿರದ ಶಿಬಿರಾರ್ಥಿಗಳಿಗೆ ಜು. 5ರ ಬೆಳಗ್ಗೆ 10.30ಕ್ಕೆ ಪತ್ರಕರ್ತರ ಭವನದಲ್ಲಿ ಪ್ರಮಾಣಪತ್ರ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ರಾಮೇಗೌಡ ಪ್ರಮಾಣ ಪತ್ರ ಪ್ರದಾನ ಮಾಡುವರು.

ಭಗವದ್ಗೀತೆ ಕುರಿತು ಉಪನ್ಯಾಸ
ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜು. 5ರ ಸಂಜೆ 5.30 ಗೋಕುಲಂ 3ನೇ ಹಂತದಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀರಾಮಕೃಷ್ಣಶ್ರಮದ ಸ್ವಾಮಿ ಕರುಣಾಕರಾನಂದಜೀ ಅವರು ಶ್ರೀಮದ್ ಭಗವದ್ಗೀತಾ ಕುರಿತು ಉಪನ್ಯಾಸ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ರಾಮಸ್ವಾಮಿ ವೃತ್ತದ ಬಳಿಯ ವಿದ್ಯಾಭವನದಲ್ಲಿ ಜು. 5 ರಿಂದ ಮಧ್ಯಾಹ್ನ 3ರವರೆಗೆ ಐಪಿಬಿಎಸ್ ಹಾಗೂ ಇತರೆ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಆರಂಭಿಸಲಿದೆ. ಆಸಕ್ತ ಅಭ್ಯರ್ಥಿಗಳು ಪ್ರೊ. ಕುಮಾರ್ ಮೊ. 9448654913, ದೂ. 2481873 ಸಂಪರ್ಕಿಸಬಹುದು. ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ವಿವಿಧ ಬ್ಯಾಂಕ್‌ಗಳ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಿದೆ. ಆಸಕ್ತರು ಜು. 9ರೊಳಗಾಗಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು ವಿವಿಯ ಪ್ರಭಾರ ಕುಲಸಚಿವ ಪ್ರೊ. ಎಸ್.ಎನ್. ವಿಕ್ರಂರಾಜೇಅರಸ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ. 2515944 ಸಂಪರ್ಕಿಸಬಹುದು.

ನೆಟ್‌ವರ್ಕಿಂಗ್ ತರಬೇತಿ

ಕುವೆಂಪುನಗರದ ಐಐಎಚ್‌ಟಿ ಶಾಖೆಯು ಡಿಪ್ಲೊಮಾ ಪದವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ನೆಟ್‌ವರ್ಕಿಂಗ್ ಮತ್ತು ಸಿಸಿಎನ್‌ಎ ಕುರಿತ 30 ದಿನದ ವಿಶೇಷ ತರಬೇತಿ ಆಯೋಜಿಸಿದೆ. ಜು. 10 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಶಾಖೆಯಲ್ಲಿ ಅರ್ಜಿ ಪಡೆಯಬಹುದು. ಮಾಹಿತಿಗಾಗಿ ಮೊ. 9141768494 ಸಂಪರ್ಕಿಸಬಹುದು.

ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ
ಮೈಸೂರು:
ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರಿಗೆ ಮೈಸೂರಿನ ಜೈ ಜೀನೇಂದ್ರ ಯುವ ಸಂಘಟನೆಯವರು ಮಂಗಳವಾರ ಸಂಜೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಗಾಂಧಿ ಚೌಕದವರೆಗೆ ಮೇಣದ ಬತ್ತಿ ಮೆರವಣಿಗೆ ಹಮ್ಮಿಕೊಂಡಿದ್ದರು. ಸಂಘಟನೆಯ ಪದಾಧಿಕಾರಿಗಳಾದ ದೀಪಕ್ ರಂಕ, ರಾಜೇಶ್ ರಾಥೋಡ್, ಆಕಾಶ್ ಚೌಹಾನ್, ಮನೀಶ್ ಮುನೋತ್, ಜಿತು ಭಂಡಾರಿ, ದೀಕ್ಷಿತ್ ಚೌಹಾನ್ ಇದ್ದರು.

7ರಂದು ಹ್ಯಾಪಿ ಆ್ಯಕ್ಟೀವ್ ಕಿಡ್ ಅವಾರ್ಡ್ ಸ್ಪರ್ಧೆ
ಕ.ಪ್ರ.ವಾರ್ತೆ ಮೈಸೂರು ಜು. 3

ಮೈಸೂರು ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಜು. 7 ರಂದು 5 ವರ್ಷದೊಳಗಿನ ಮಕ್ಕಳಿಗೆ ಐದು ಹಂತಗಳಲ್ಲಿ ಹ್ಯಾಪಿ ಆ್ಯಕ್ಟೀವ್ ಕಿಡ್ ಅವಾರ್ಡ್ ಸ್ಪರ್ಧೆ ಏರ್ಪಡಿಸಿದೆ.
ಕುವೆಂಪುನಗರ, ಅಮ್ಮ ಕಾಂಪ್ಲೆಕ್ಸ್ ಹಿಂಭಾಗದ ಟ್ರಸ್ಟ್‌ನ ಆವರಣದಲ್ಲಿ ಈ ಸ್ಪರ್ಧೆ ನಡೆಯಲಿದ್ದು, 1 ವರ್ಷದೊಳಗಿನ ಮಕ್ಕಳಿಗೆ, 1 ರಿಂದ 2 ವರ್ಷ, 2 ರಿಂದ 3 ವರ್ಷ, 3 ರಿಂದ 4 ವರ್ಷ ಮತ್ತು 4 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸ್ಪರ್ಧೆ ನಡೆಯಲಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎಚ್. ಲೀಲಾವತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸಕ್ತರು 150 ಶುಲ್ಕ ನೀಡಿ ಅರ್ಜಿ ಪಡೆದು ಹ್ಯಾಪಿ ಕಿಡ್ಸ್ ಅಕಾಡೆಮಿ, ನಂ. 460, ರಾಜಮಹಲ್, ಅಮ್ಮ ಕಾಂಪ್ಲೆಕ್ಸ್ ಹಿಂಭಾಗ, ಕುವೆಂಪುನಗರ, ಮೈಸೂರು ಇಲ್ಲಿಗೆ ಜು. 6ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9242049921 ಸಂಪರ್ಕಿಸಬಹುದು. ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಸುರೇಶ್, ಸಂಚಾಲಕಿ ಜನ್ನಿಫರ್ ಇದ್ದರು.

ನೀಡಲ್ ವರ್ಕ್ಸ್‌ನಿಂದ ಫ್ಯಾಶನ್ ಶೋ
ಕ.ಪ್ರ.ವಾರ್ತೆ ಮೈಸೂರು ಜು. 3

ಫ್ಯಾಶನ್ ಡಿಸೈನರ್ ನೀಡಲ್ ವರ್ಕ್ಸ್ ಸಂಸ್ಥೆಯು ಜು. 6 ಮತ್ತು 7 ರಂದು ನಗರದಲ್ಲಿ ಮೊದಲ ಬಾರಿಗೆ ಮೈಸೂರು ಫ್ಯಾಷನ್ ಶೋ ಕಾರ್ಯಕ್ರಮವನ್ನು ಕಂಠೀರವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಏರ್ಪಡಿಸಿದೆ ಎಂದು ಫ್ಯಾಸನ್ ಡಿಸೈನರ್ ಜಯಂತಿ ಬಲ್ಲಾಳ್ ಹೇಳಿದರು.
ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ರ್ಯಾಂಪ್ ಮೇಲೆ ನಡೆಯಲಿದ್ದಾರೆ. ಜು. 6 ರಂದು ಬಾಲಿವುಡ್ ಬ್ರೂನಾ ಅಬ್ದುಲ್ಲಾ ಮತ್ತು ಜು. 7 ರಂದು ಸ್ಯಾಂಡಲ್‌ವುಡ್‌ನ ನೆನಪಿರಲಿ ಪ್ರೇಮ್ ರ್ಯಾಂಪ್ ಮೇಲೆ ಬರಲಿದ್ದಾರೆ. ಬೆಂಗಳೂರು, ಕಲ್ಕತ್ತಾ ಹಾಗೂ ಮುಂಬೈಯಿಂದ 29 ಮಂದಿ ಮಾಡೆಲ್‌ಗಳು ಭಾಗವಹಿಸಲಿದ್ದಾರೆ. ಈ ಪೈಕಿ 19 ಮಂದಿ ಸ್ತ್ರೀಯರು ಹಾಗೂ 10 ಮಂದಿ ಪುರುಷರಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಫ್ಯಾಶನ್ ಶೋ ಬಗ್ಗೆ ಮಾಹಿತಿ ಪಡೆಯಲು 9741971632 ಸಂಪರ್ಕಿಸಬಹುದು ಎಂದರು.

ಗ್ರಂಥಾಲಯ ಉದ್ಘಾಟನೆ ಮುಂದಕ್ಕೆ
ಮೈಸೂರು:
ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಮಕೃಷ್ಣನಗರದ ವಾರ್ಡ್ ನಂ. 16ರಲ್ಲಿ ಜು. 4ರ ಬೆಳಗ್ಗೆ 10ಕ್ಕೆ ನಡೆಯಬೇಕಿದ್ದ ನೂತನ ಶಾಖಾ ಗ್ರಂಥಾಲಯದ ಉದ್ಘಾಟನಾ ಸಮಾರಂಭವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದ ದಿನಾಂಕವನ್ನು ನಂತರ ತಿಳಿಸಲಾಗುವುದು. ಸಾರ್ವಜನಿಕರು, ಓದುಗರು ಸಹಕರಿಸುವಂತೆ ಅವರು ಕೋರಿದ್ದಾರೆ.

ಪ್ರತಿಭಾ ಪುರಸ್ಕಾರ
ವಿಜಯನಗರದ ಪ್ರೇಮಾನಂದ ಚೈತನ್ಯ ಧಾಮದ ವತಿಯಿಂದ ಬಡ ಮೇಧಾವಿ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ, ಲಿಂಗಗಳ ತಾರತಮ್ಯವಿಲ್ಲದೆ ಪಿ. ಆನಂದರಾವ್ ವಿದ್ಯಾ ವರದಾನ ನಿಧಿ ಹೆಸರಿನಲ್ಲಿ ಶಿಷ್ಯವೃತ್ತಿಗಾಗಿ ಜು. 31 ರವರೆಗೆ ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ ಆ. 31 ರವರೆಗೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ವಿವರಗಳಿಗೆ ಮೊ. 9448842529.

ನಾಳೆಯಿಂದ ಪುಸ್ತಕ ಮೇಳ
ಮೈಸೂರು:
ಇಲ್ಲಿನ ಜೆಎಲ್‌ಬಿ ರಸ್ತೆಯಲ್ಲಿರುವ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್ ವತಿಯಿಂದ ಜು. 5ರ ಸಂಜೆ 6ಕ್ಕೆ ಬೃಹತ್ ಪುಸ್ತಕ ಮೇಳ ಹಾಗೂ ಹತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದೆ ಎಂದು ವ್ಯವಸ್ಥಾಪಕ ಎನ್.ಕೆ. ಸತ್ಯನಾರಾಯಣ ಹೇಳಿದ್ದಾರೆ.
ಭಾರತೀಯ ಭಾಷಾ ಸಂಸ್ಥಾನದ ಉಪನಿರ್ದೇಶಕ ಪ್ರೊ. ಆರ್. ಸುಬ್ಬಕೃಷ್ಣ ಮೇಳ ಉದ್ಘಾಟಿಸಿ, ಕೃತಿಗಳನ್ನು ಅನಾವರಣ ಮಾಡುವರು. ನವಕರ್ನಾಟಕ ಕನ್ನಡ ಕಲಿಕೆ ಮಾಲೆಯ ಲೇಖಕ ಟಿ.ಎಸ್. ಗೋಪಾಲ್ ಭಾಗವಹಿಸುವರು.  ನವಕರ್ನಾಟಕ ಕನ್ನಡ ಕಲಿಕೆ ಮಾಲೆಯ ನಾಮಪದ, ಕ್ರಿಯಾಪದ, ಕನ್ನಡ ವ್ಯಾಕರಣ ಪದಕೋಶ, ಕನ್ನಡ ನುಡಿಗಟ್ಟುಗಳು, ಪತ್ರಲೇಖನೆ, ವಿರುದ್ಧಾರ್ಥ ಪದಕೋಶ, ತತ್ಸಮ-ತದ್ಭವ ಪದಕೋಶ, ಸಮಾನಾರ್ಥ ಪದಕೋಶ, ನಾನಾರ್ಥ ಪದಕೋಶ, ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ  ಬಿಡುಗಡೆಯಾಗುವ ಕೃತಿಗಳು.
ಶೈಕ್ಷಣಿಕ ಪುಸ್ತಕಗಳು, ಜನಪ್ರಿಯ ವಿಜ್ಞಾನ, ಯೋಗ, ಆರೋಗ್ಯ, ಅಡುಗೆ, ಕಥಾ ಸಾಹಿತ್ಯ, ಕಾನೂನು, ಜೀವನ ಚರಿತ್ರೆ, ವಿಚಾರ ಸಾಹಿತ್ಯ, ಮಾನವಿಕ ಶಾಸ್ತ್ರಗಳು, ಜ್ಞಾನಕೋಶಗಳು, ನಿಘಂಟುಗಳು, ಪರಾಮರ್ಶನ ಗ್ರಂಥಗಳು, ಇತ್ಯಾದಿ ಜ್ಞಾನಾರ್ಜನೆಯ ಎಲ್ಲ ಶಾಖೆಗಳಿಗೆ ಸಂಬಂಧಿಸಿದ ವಿವಿಧ ಭಾರತೀಯ ಮತ್ತು ವಿದೇಶಿ ಪ್ರಕಾಶಕರ ಪುಸ್ತಕಗಳನ್ನು ಪ್ರದರ್ಶಿಸಲಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಹೆಸರಾಂತ ಲೇಖಕರ ಹಾಗೂ ಪ್ರಕಾಶಕರ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಶೀರ್ಷಿಕೆಗಳು ಮಾರಾಟಕ್ಕಿವೆ. ಗ್ರಾಹಕರಿಗೆ ಶೇ. 10 ರಿಂದ 50ರವರೆಗೆ ರಿಯಾಯಿತಿಯನ್ನು ನೀಡಲಾಗುವುದು. ಪುಸ್ತಕ ಮೇಳವು ಜು. 14 ರವರೆಗೆ ನಡೆಯಲಿದೆ.

ನಾಳೆ ಪ್ರಮಾಣ ಪತ್ರ ಪ್ರದಾನ
ಮೈಸೂರು:
ಪರಿಸರ ಫೌಂಡೇಷನ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಹುಲಿ ಯೋಜನೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಪತ್ರಕರ್ತರಿಗಾಗಿ ಬಂಡೀಪುರದಲ್ಲಿ ನಡೆದ ಪ್ರಕೃತಿ ಶಿಬಿರದ ಶಿಬಿರಾರ್ಥಿಗಳಿಗೆ ಜು. 5ರ ಬೆಳಗ್ಗೆ 10.30ಕ್ಕೆ ಪತ್ರಕರ್ತರ ಭವನದಲ್ಲಿ ಪ್ರಮಾಣಪತ್ರ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ರಾಮೇಗೌಡ ಪ್ರಮಾಣ ಪತ್ರ ಪ್ರದಾನ ಮಾಡುವರು.

ಭಗವದ್ಗೀತೆ ಕುರಿತು ಉಪನ್ಯಾಸ

ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜು. 5ರ ಸಂಜೆ 5.30 ಗೋಕುಲಂ 3ನೇ ಹಂತದಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀರಾಮಕೃಷ್ಣಶ್ರಮದ ಸ್ವಾಮಿ ಕರುಣಾಕರಾನಂದಜೀ ಅವರು ಶ್ರೀಮದ್ ಭಗವದ್ಗೀತಾ ಕುರಿತು ಉಪನ್ಯಾಸ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆ ತರಬೇತಿ
ರಾಮಸ್ವಾಮಿ ವೃತ್ತದ ಬಳಿಯ ವಿದ್ಯಾಭವನದಲ್ಲಿ ಜು. 5 ರಿಂದ ಮಧ್ಯಾಹ್ನ 3ರವರೆಗೆ ಐಪಿಬಿಎಸ್ ಹಾಗೂ ಇತರೆ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಆರಂಭಿಸಲಿದೆ. ಆಸಕ್ತ ಅಭ್ಯರ್ಥಿಗಳು ಪ್ರೊ. ಕುಮಾರ್ ಮೊ. 9448654913, ದೂ. 2481873 ಸಂಪರ್ಕಿಸಬಹುದು. ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ವಿವಿಧ ಬ್ಯಾಂಕ್‌ಗಳ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಿದೆ. ಆಸಕ್ತರು ಜು. 9ರೊಳಗಾಗಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು ವಿವಿಯ ಪ್ರಭಾರ ಕುಲಸಚಿವ ಪ್ರೊ. ಎಸ್.ಎನ್. ವಿಕ್ರಂರಾಜೇಅರಸ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ. 2515944 ಸಂಪರ್ಕಿಸಬಹುದು.

ನೆಟ್‌ವರ್ಕಿಂಗ್ ತರಬೇತಿ
ಕುವೆಂಪುನಗರದ ಐಐಎಚ್‌ಟಿ ಶಾಖೆಯು ಡಿಪ್ಲೊಮಾ ಪದವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ನೆಟ್‌ವರ್ಕಿಂಗ್ ಮತ್ತು ಸಿಸಿಎನ್‌ಎ ಕುರಿತ 30 ದಿನದ ವಿಶೇಷ ತರಬೇತಿ ಆಯೋಜಿಸಿದೆ. ಜು. 10 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಶಾಖೆಯಲ್ಲಿ ಅರ್ಜಿ ಪಡೆಯಬಹುದು. ಮಾಹಿತಿಗಾಗಿ ಮೊ. 9141768494 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.