ಮೀನಿನಿಂದ ದೇಹಕ್ಕೆ ಅಗತ್ಯ ಪೌಷ್ಟಿಕಾಂಶ: ವೆಂಕಟೇಶ್
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜು. 8
ಮೀನು ಒಂದು ಉತ್ತಮ ಆಹಾರವಾಗಿದ್ದು, ಅದನ್ನು ಉಪಯೋಗಿಸುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು ಲಭ್ಯವಾಗುತ್ತವೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಕರ್ನಾಟಕ ಸಹಕಾರ ಮೀನುಗಾರಿಕೆ ಮಹಾಮಂಡಳಿ ವತಿಯಿಂದ ಗ್ರಾಮದ ವಿನಾಯಕ ವೃತ್ತದ ಬಳಿ ನಿರ್ಮಿಸಿರುವ ಮೀನು ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿ, ಮೀನಿನಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದ್ದು, ಮಂಗಳೂರು, ಕೇರಳ ಕಡೆಗಳಲ್ಲಿ ಹೆಚ್ಚಾಗಿ ಮೀನನ್ನು ಸೇವಿಸುತ್ತಾರೆ. ಮೀನು ಮಾರಾಟ ಕೇಂದ್ರಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದವು, ಮಹಾಮಂಡಳಿಯು ಗ್ರಾಮಾಂತರ ಪ್ರದೇಶಗಳಲ್ಲಿಯೂ ಮೀನು ಮಾರಾಟ ಕೇಂದ್ರ ನಿರ್ಮಿಸಿ ಗ್ರಾಮೀಣ ಪ್ರದೇಶದ ಜನರಿಗೂ ಮೀನು ದೊರೆಯುವಂತೆ ಮಾಡಿದೆ ಎಂದು ತಿಳಿಸಿದರು.
ರಾಜ್ಯ ಮೀನುಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಎಸ್. ಮಾದೇಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 100 ಮೀನು ಮಾರಾಟ ಕೇಂದ್ರ ತೆರೆಯಲು ಉದ್ದೇಶಿಸಿದೆ. ಮೈಸೂರಿನಿಂದ ಮಡಿಕೇರಿವರೆಗೂ ಇನ್ನು ಹಲವು ಮಾರಾಟ ಕೇಂದ್ರ ತೆರೆಯಲಿದ್ದೇವೆ. ಮೀನಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ದೇಶದಲ್ಲಿ ಒಬ್ಬ ಮನುಷ್ಯ ವರ್ಷಕ್ಕೆ ಸರಾಸರಿ 5 ಕೆಜಿ ಮೀನು ಉಪಯೇಗಿಸುತ್ತಿರುವುದಾಗಿ ಹೇಳಿದರು.
ಜಿಪಂ ಮಾಜಿ ಸದಸ್ಯೆ ಕೆ.ಆರ್. ಜಯಲಕ್ಷ್ಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ. ರಮೇಶ್, ಗ್ರಾಪಂ ಸದಸ್ಯ ಪ್ರಕಾಶ್ಗೌಡ, ರಾಮಲಿಂಗಂ, ಮಾಜಿ ಉಪಾಧ್ಯಕ್ಷ ಎಂ. ಲಕ್ಷ್ಮಣ್, ಕೆ.ಪಿ. ನಿಂಗರಾಜು, ಸಿದ್ದೇಗೌಡ, ಕೃಷ್ಣ, ಕೆ.ಟಿ. ಪಾಪಣ್ಣ, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

