ಜಾಗತಿಕ ಸ್ಪರ್ಧೆಗೆ ಕೌಶಲ ಬಹುಮುಖ್ಯ
ಕ.ಪ್ರ.ವಾರ್ತೆ ಮೈಸೂರು ಜು. 11
ಇಂದಿನ ಜಾಗತಿಕ ಸ್ಪರ್ಧೆಗೆ ಅಗತ್ಯವಾದ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಇನ್ಫೋಸಿಸ್ ಜಾಗತಿಕ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಂ. ಸುಬ್ಬರಾಯ ಹೇಳಿದರು.
ಮಹಾರಾಜ ಶಿಕ್ಷಣ ಸಂಸ್ಥೆಯು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಹಾರಾಜ ಉದ್ಯೋಗ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ನಾನಾ ದೇಶಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕೆಲಸ ಪಡೆಯಲು ಹೆಚ್ಚಿನ ಪೈಪೋಟಿ ಎದುರಿಸಬೇಕಿದೆ. ಅದರಲ್ಲೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಪಡೆಯುವುದು ದುಸ್ತರವಾಗಿದೆ. ಇಂತಹ ಸನ್ನಿವೇಶದಲ್ಲಿ ಅಭ್ಯರ್ಥಿಗಳ ಕೌಶಲ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಪ್ರತಿವರ್ಷ ಸಾವಿರಾರು ಮಂದಿ ಪದವೀಧರರು ಶಿಕ್ಷಣ ಮುಗಿಸಿ ಹೊರಬರುತ್ತಿದ್ದು, ಅವರಲ್ಲಿ ಕೇವಲ ಶೇ. 20- 25 ಮಂದಿಗೆ ಮಾತ್ರ ಉದ್ಯೋಗ ಪಡೆಯುವ ಸಾಮರ್ಥ್ಯ ಇರುತ್ತದೆ. ಜಾಗತಿಕ ಮಟ್ಟದಲ್ಲಿನ ಉದ್ದಿಮೆಗಳಲ್ಲಿ ಹೆಚ್ಚಿನ ನಿರೀಕ್ಷೆ ಇರುವುದರಿಂದ ಸಾಮಾನ್ಯ ಪದವಿಯನ್ನು ಮಾತ್ರ ಗಳಿಸಿರುವ ಅಭ್ಯರ್ಥಿಗಳು ಉಳಿದವರ ಸ್ಪರ್ಧೆ ಎದುರಿಸಿ ಉದ್ಯೋಗ ಪಡೆಯುವುದು ಅಸಾಧ್ಯವಾಗಿದೆ ಎಂದು ಹೇಳಿದರು.
ಪರಿಣತಿ ಕೊರತೆ: ಪದವೀಧರರಲ್ಲಿ ಆಯಾಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಣತಿ ಕೊರತೆ ಇರುವುದು, ತಮ್ಮ ಅನುಭವವನ್ನು ಆಯಾಯ ವಲಯಕ್ಕೆ ಅಳವಡಿಸಿಕೊಳ್ಳುವ ಪರಿಜ್ಞಾನ ಇಲ್ಲದಿರುವುದು, ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಹಾಗೂ ಮೌಲ್ಯಯುತ ಕೌಶಲ ಶಕ್ತಿಯ ಇಲ್ಲದಿರುವುದು ಅಭ್ಯರ್ಥಿಗಳ ವಿಫಲತೆಗೆ ಕಾರಣವಾಗಿದೆ ಎಂದರು.
ಭಾಷೆ, ಬರವಣಿಗೆ ಹಾಗೂ ಸಂವಹನ ಶಕ್ತಿ ಇದ್ದರೆ ಮಾತ್ರ ವ್ಯಕ್ತಿಯ ಬದಲಾವಣೆ ಹಾಗೂ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ. ಕಾಲೇಜುಗಳಲ್ಲಿ ಪಠ್ಯದ ಮೂಲಕ ಶೇ.50 ಮಾತ್ರ ಜ್ಞಾನ ದೊರೆತರೆ, ಉಳಿದ ಶೇ.50 ಜ್ಞಾನವನ್ನು ಸ್ವಸಾಮರ್ಥ್ಯದಿಂದ ಪದವೀಧರರು ರೂಢಿಸಿಕೊಂಡು ಜಾಗತಿಕ ಮಟ್ಟದಲ್ಲಿನ ಯಶಸ್ಸಿಗೆ ಮುನ್ನಡೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಬಿ.ಎನ್. ಬಹದ್ದೂರ್ ನಿರ್ವಹಣಾ ವಿಜ್ಞಾನಗಳ ಸಂಸ್ಥೆಯ ಮುಖ್ಯಸ್ಥ ಪ್ರೊ.ಬಿ.ಶಿವರಾಜ್, ಉದ್ಯಮಿಗಳಾದ ನಾಗರಾಜ ಶೆಟ್ಟಿ, ಸೋಮಯಾಜಿ ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಮುರಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

