22ರಂದು ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ
ಕೆ.ಆರ್. ನಗರ: ತಾಲೂಕು ಸರ್ಕಾರಿ ನೌಕರರ ಸಂಘದ ಆಡಳಿತ ಮಂಡಳಿಯ 35 ಸ್ಥಾನಗಳಿಗೆ ಜು.22 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ನಾಮಪತ್ರ ಸಲ್ಲಿಕೆಗೆ ಜು.15 ಕಡೆ ದಿನವಾಗಿದೆ. ಜು.16 ರಂದು ನಾಮಪತ್ರಗಳ ವಾಪಸಾತಿಗೆ ಅಂತಿಮ ದಿನವಾಗಿದ್ದು, ಅಂದೇ ಪರಿಶೀಲಿಸಲಾಗುತ್ತದೆಯಲ್ಲದೆ, ಜು.22 ರಂದು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಮತದಾನ ನಡೆದು, ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಚುರುಕುಗೊಂಡ ಚುನಾವಣಾ ಪ್ರಕ್ರಿಯೆ: ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿರುವುದರಿಂದ ತಾಲೂಕಿನಾದ್ಯಂತ ಸರ್ಕಾರಿ ನೌಕರರಲ್ಲಿ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದ್ದು, ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಮತದಾರ ನೌಕರರನ್ನು ಭೇಟಿಯಾಗಿ ಬೆಂಬಲ ಯಾಚಿಸುತ್ತಿದ್ದಾರೆ. ತಮ್ಮದೆ ಆದ ತಂಡಗಳನ್ನು ರಚಿಸಿಕೊಂಡಿರುವ ವಿವಿಧ ಗುಂಪುಗಳ ನಾಯಕರು, ಗೆಲುವಿನ ತಂತ್ರ ಹೆಣೆಯುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ ಪ್ರಮುಖ ಇಲಾಖೆಗಳನ್ನು ಹೊರತುಪಡಿಸಿದರೆ ಇತರೆ ಇಲಾಖೆಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಹೊನ್ನಾಪುರದಲ್ಲಿ ದೇಗುಲ ಉದ್ಘಾಟನೆ
ಪಿರಿಯಾಪಟ್ಟಣ: ಮಾನವನ ದೇಹವು ಭಗವಂತನು ನಿರ್ಮಿಸಿರುವ ದೇವಾಲಯ, ಈ ದೇಹದೊಳಗೆ ಉರಿಯುತ್ತಿರುವ ಜ್ಯೋತಿಯೆ ಆತ್ಮ ಎಂದು ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಹೇಳಿದರು.
ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶ್ನಗಾರೇಶ್ವರ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ತಾವೆಲ್ಲರೂ ಒಟ್ಟಾಗಿ ದೇವಾಲಯವನ್ನು ನಿರ್ಮಾಣ ಮಾಡಿದ್ದೀರಾ, ಸರ್ವಶಕ್ತ ಶಿವನು ಸರ್ವರನ್ನು ಸಲಹುವನು, ದೇವರು ನಿರ್ಮಿಸಿರುವ ದೇವಾಲಯ ಈ ಮನುಷ್ಯನ ದೇಹ ಅಂತರಂಗ ಬಹಿರಂಗ ಶುದ್ಧವಾದಲ್ಲಿ ದೇವರ ಅನುಗ್ರಹ ದೊರೆಯುತ್ತದೆ ಎಂದು ತಿಳಿಸಿದರು. ಉಪ್ಪಾರ ಜನಾಂಗದ ಮುಖಂಡ ಪಿ.ಟಿ. ವೇಣುಗೊಪಾಲ್, ಪಿ.ಟಿ. ರವಿ, ಗ್ರಾಪಂ ಸದಸ್ಯ ಎಚ್.ಎಸ್. ಮಂಜು, ಗುರಪ್ಪ ಶೆಟ್ಟರ್, ಬೆಮ್ಮತಿಕೃಷ್ಣ, ಜಗಪಲ್, ಶಶಿ, ರವಿ, ಧರ್ಮಸ್ಥಳ ಯೋಜನಾಧಿಕಾರಿ ಮೋಹನ್, ವಕೀಲ ರಾಜೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

