ವಿದ್ಯಾರ್ಥಿಗಳಿಗೆ ನಿಘಂಟು ವಿತರಣೆ
ಕ.ಪ್ರ.ವಾರ್ತೆ ಹುಣಸೂರು ಜು. 15
ಬೆಂಗಳೂರಿನ ಮೆಂಡೆ ಫೌಂಡೇಶನ್ ವತಿಯಿಂದ ಒಂದು ಲಕ್ಷ ವಿದ್ಯಾರ್ಥಿಗಳಿಗೆ ನಿಘಂಟು ವಿತರಿಸಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಚತ್ರು ಮುಂಡಾ ಹೇಳಿದರು.
ಬೆಂಗಳೂರಿನ ಪಶ್ಚಿಮ ರೋಟರಿ ಸಂಸ್ಥೆ, ಮೆಂಡೆ ಫೌಂಡೇಶನ್ ಹಾಗೂ ಹುಣಸೂರು ರೋಟರಿ ಕ್ಲಬ್ ಸಹಯೋಗದಲ್ಲಿ ತಾಲೂಕಿನ ಗಾವಡಗೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್- ಕನ್ನಡ ನಿಘಂಟು ಹಾಗೂ ಸೋಲಾರ್ ದೀಪ ವಿತರಿಸಿದ ಬಳಿಕ ಮಾತನಾಡಿ, ತಮ್ಮ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ಒಂದು ಲಕ್ಷ ಬಡ ವಿದ್ಯಾರ್ಥಿಗಳಿಗೆ ರೋಟರಿ ಮತ್ತಿತರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಇಂಗ್ಲಿಷ್- ಕನ್ನಡ ನಿಘಂಟು ವಿತರಿಸಲಾಗುವುದು. ಇದರ ಸದ್ಬಳಕೆಯಾದಾಗ ಮಾತ್ರ ತಮ್ಮ ಕೊಡುಗೆ ಸಾರ್ಥಕವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು ರೋಟರಿ ಸಂಸ್ಥೆ ಅಧ್ಯಕ್ಷ ಶಾಂತಾರಾಮು, ಬಿಇಒ ರಾಜಶೇಖರ್ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಬಿ.ಸಿ. ಚಿನ್ನೇಗೌಡರು ರೋಟರಿ ಸಂಸ್ಥೆಯ ನೆರವಿನಿಂದ ವಿದ್ಯಾರ್ಥಿಗಳು ಪ್ರಗತಿ ಸಾಧಿಸಿದ್ದಾರೆ. ಗ್ರಾಮದ ದಿ. ಸುಬ್ಬರಾವ್ ಘಾಟ್ಕೆ ಕುಟುಂಬದವರು ಶಾಲೆಗೆ 6 ಎಕರೆ ಭೂಮಿ ಕೊಡುಗೆಯಾಗಿ ನೀಡಿರುವುದಲ್ಲದೆ ಪ್ರಗತಿಗೆ ಕಾರಣರಾಗಿದ್ದಾರೆಂದು ಶ್ಲಾಘಿಸಿದರು.
8ನೇ ತರಗತಿಯ 126 ವಿದ್ಯಾರ್ಥಿಗಳಿಗೆ ನಿಘಂಟು ಹಾಗೂ ಎಸ್ಸೆಸ್ಸೆಲ್ಸಿಯ 120 ವಿದ್ಯಾರ್ಥಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು.
ಹುಣಸೂರು ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಮಂಜುನಾಥ್, ಮಾಜಿ ಅಧ್ಯಕ್ಷ ಆನಂದ್, ಸದಸ್ಯರಾದ ಅನಂತರಾಜೇ ಅರಸ್, ಟಿ.ಎಸ್. ರಾಮಚಂದ್ರ, ಹನಗೋಡು ನಟರಾಜು, ಜಿಪಂ ಮಾಜಿ ಸದಸ್ಯ ಕೃಷ್ಣಬಾಯಿ, ಬೆಂಗಳೂರಿನ ಪ್ರಸನ್ನಕುಮಾರ್ ಮಾತನಾಡಿದರು. ಕಳೆದ ವರ್ಷ ಸೋಲಾರ್ ದೀಪದ ಸೌಲಭ್ಯ ಪಡೆದಿದ್ದ ವಿದ್ಯಾರ್ಥಿಗಳಾದ ಪೂರ್ಣಿಮಾ, ನಾಗರಾಜ್, ಪ್ರಸನ್ನಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

