ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಟೆಕ್ಕಿಗಳು ಬೇಕು: ಯೋಗಾನಂದ
ಕ.ಪ್ರ.ವಾರ್ತೆ ಮೈಸೂರು ಜು. 16
ಕಂಪ್ಯೂಟರ್ನಲ್ಲಿ ಸಮಪರ್ಕವಾಗಿ ಕನ್ನಡ ಬಳಸಲು ತಂತ್ರಾಂಶದ ಅವಶ್ಯಕತೆ ಇದೆ. ಅದನ್ನು ಅಭಿವೃದ್ಧಿಪಡಿಸಲು ಮಾತೃ ಭಾಷೆಯಲ್ಲಿ ಶಿಕ್ಷಣ ಮುಗಿಸಿದ ಟೆಕ್ಕಿಗಳ ಮುಂದಾಗಬೇಕು ಎಂದು ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಗಣಿತ ಪ್ರಾಧ್ಯಾಪಕ ಸಿ.ಎಸ್. ಯೋಗಾನಂದ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಪ್ರಸಾರಾಂಗ ಹಾಗೂ ಸುಮಿತ್ರಾ ಎಜುಕೇಷನ್ ಟ್ರಸ್ಟ್ ಮಂಗಳವಾರ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ನಾನೋದಿದ್ದು ಕನ್ನಡದಲ್ಲೆ ಇಂಗ್ಲಿಷ್ ಕಲಿಯಬಹುದು, ಭಯ ಬೇಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟೈಪ್ರೈಟರ್ನಿಂದ ಹಾಳು: ಹಿಂದೆ ರಾಜ್ಯದ ನ್ಯಾಯಾಲಯಗಳ ನ್ಯಾಯಾಧೀಶರು ಕನ್ನಡದಲ್ಲೆ ವ್ಯವಹರಿಸುತ್ತಿದ್ದರು. ನಂತರ ಬಂದ ಟೈಪ್ರೈಟರ್ ತಂತ್ರಜ್ಞಾನ ಕನ್ನಡ ವ್ಯವಹಾರಕ್ಕೆ ಧಕ್ಕೆ ತಂದಿತು ಎಂದು ವಕೀಲರಾಗಿದ್ದ ನಿಟ್ಟೂರು ಶ್ರೀನಿವಾಸರಾಯರು ಹೇಳಿದ್ದರು. ಅವರ ಮಾತು ಈಗ ಅಕ್ಷರಶಃ ನಿಜವಾಗಿದೆ. ನ್ಯಾಯಾಲಯಗಳಲ್ಲಿನ ಕೆಲಸ ಬೇಗ ಮುಗಿಯುತ್ತವೆ ಎಂಬ ಕಾರಣಕ್ಕೆ ಟೈಪ್ರೈಟರ್ ಆಶ್ರಯಿಸಲಾಗಿದೆ ಎಂದು ತಿಳಿಸಿದರು.
ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ರಾಮನರಸಿಂಹ ಮತ್ತು ಎನ್.ಎನ್. ಸೌಂದರಾಜನ್ ಅವರು ಇಂಗ್ಲಿಷ್ ಕಲಿಯಬಹುದು, ಭಯ ಬೇಡ ವಿಷಯ ಕುರಿತು ಮಾತನಾಡಿದರು. ಮಹಾಜನ ಪಿಯು ಕಾಲೇಜು ಪ್ರಾಂಶುಪಾಲ ಜಿ. ಕೃಷ್ಣಸ್ವಾಮಿ, ರಾಮಾನುಜ, ಟಿ. ಕಮಲಮ್ಮ, ಸ.ರ. ಸುದರ್ಶನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

