ಠಾಣೆಗಳಲ್ಲಿ ಇಂದುಕುಂದುಕೊರತೆ ಸಭೆ
ಮೈಸೂರು: ನಗರದಲ್ಲಿ ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಹೀಗಾಗಿ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಅವಹಾಲು ಸ್ವೀಕರಿಸಿ ಪರಿಹಾರ ಕಂಡುಕೊಳ್ಳಬಹುದಾದ ಸಾರ್ವಜನಿಕ ಕುಂದುಕೊರತೆ ಸಭೆಗಳು ಜು.21ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಯಲಿದ್ದು, ಇನ್ಸ್ಪೆಕ್ಟರ್, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲು ಸ್ವಿಕರಿಸಿ ಪರಿಹಾರ ನೀಡಲಿದ್ದಾರೆ. ಸಾರ್ವಜನಿಕರಿಗೆ ಪೊಲೀಸರ ಸಹಾಯ, ನೆರವು ಬೇಕಾಗಿದ್ದಲ್ಲಿ ತಮ್ಮ ವಾಸ ವಿಳಾಸದ ವ್ಯಾಪ್ತಿಗೆ ಬರುವ ಠಾಣೆಗಳಲ್ಲಿ ಅಹವಾಲು ನೀಡಿ ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಯುಕ್ತರು ಕೋರಿದ್ದಾರೆ.
ನಾಳೆ ಯಕ್ಷಗಾನ ಪ್ರದರ್ಶನ
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಭಾರತೀಯ ಜನಪದ ಚಾವಡಿ ಸಂಯುಕ್ತವಾಗಿ ಜು.22ರ ಬೆಳಗ್ಗೆ 11ಕ್ಕೆ ವಿವೇಕಾನಂದ ಸಭಾಂಗಣದಲ್ಲಿ ನಿಡ್ಲೆ ಗಣಪತಿ ಯಕ್ಷಗಾನ ಮಂಡಳಿಯವರಿಂದ ಪಂಚವಟಿ ಪ್ರಸಂಗ ಯಕ್ಷಗಾನ ಪ್ರದರ್ಶನ ಆಯೋಜಿಸಿದೆ.
ನಾಳೆ ಗುರು ನಮನ
ಮೈಸೂರು: ವ್ಯಕ್ತಿ ವಿಕಾಸ ಕೇಂದ್ರವು ಗುರು ಪೂರ್ಣಿಮೆ ಅಂಗವಾಗಿ ಜು.22ರ ಸಂಜೆ 6.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತಸಭಾದಲ್ಲಿ ಗುರು ನಮನ ಆಯೋಜಿಸಿದೆ. ಜತೆಗೆ ಜಿಲ್ಲಾ ಅಭಿವೃದ್ಧಿ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ ನಡೆಯಲಿದೆ. ಗಾಯಕ ಸುದರ್ಶನ್ ತಂಡದಿಂದ ಭಕ್ತಿ ಸಂಗೀತ ಆಯೋಜಿಸಲಾಗಿದೆ. ವಿವರಗಳಿಗೆ ಮೊ. 94484 86678 ಸಂಪರ್ಕಿಸಬಹುದು. ನಿಜಗುಣ ಸತ್ಸಂಗ ಬಳಗವು ಗುರು ಪೂರ್ಣಿಮೆ ಅಂಗವಾಗಿ ಜು.22ರ ಬೆಳಗ್ಗೆ 10.30ಕ್ಕೆ ಸಯ್ಯಾಜಿರಾವ್ ರಸ್ತೆ ಒಕ್ಕಲಗೇರಿ ಶ್ರೀರಾಮಮಂದಿರದಲ್ಲಿ ಸತ್ಸಂಗ ಕಾರ್ಯಕ್ರಮ ಏರ್ಪಡಿಸಿದೆ. ಕರುಣಾಕರಾನಂದ ಸ್ವಾಮೀಜಿ ಆಧ್ಯಾತ್ಮಿಕ ಪ್ರವಚನ ನೀಡುವರು.
ನಾಳೆ ಉಪನ್ಯಾಸ
ಮೈಸೂರು ವಿವಿ ಪ್ರಸಾರಾಂಗ ಮತ್ತು ಸುಮಿತ್ರಾ ಎಜುಕೇಷನ್ ಟ್ರಸ್ಟ್ ಸಂಯುಕ್ತವಾಗಿ ಜು.22ರ ಬೆಳಗ್ಗೆ 11ಕ್ಕೆ ವಿದ್ಯಾವರ್ಧಕ ಪಿಯು ಕಾಲೇಜಿನಲ್ಲಿ ನಾನೋದಿದ್ದು ಕನ್ನಡದಲ್ಲೆ ಮತ್ತು ಇಂಗ್ಲಿಷ್ ಕಲಿಯಬಹುದು ಭಯ ಬೇಡ ಎಂಬ ವಿಷಯ ಕುರಿತು ಶ್ರೀಕಂಠಶರ್ಮ, ರಾಮನರಸಿಂಹ ಉಪನ್ಯಾಸ ಮಾಡುವರು.
ಚಾತುರ್ಮಾಸ್ಯ ವ್ರತ
ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠಂನ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಜು.22 ರಿಂದ ಸೆ.19 ರವೆರೆಗೆ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸಲಿದ್ದಾರೆ.
ಸರ ಅಪಹರಣ
ಮನೆಯಿಂದ ಹೊರಗೆ ಹೋಗುತ್ತಿದ್ದ ಶಿಕ್ಷಕಿಯ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಎಗರಿಸಿಕೊಂಡು ಹೋಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೋಗಾದಿ ಸಿಎಫ್ಟಿಆರ್ ಬಡಾವಣೆ ನಿವಾಸಿ ಹಾಗೂ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಆಶಾರಾಣಿ (55) ಮನೆ ಬಳಿಯ ರಸ್ತೆಯಲ್ಲಿ ಹೋಗುತ್ತಿದ್ದರು. ರಸ್ತೆಬದಿಯಲ್ಲಿ ಬೈಕ್ ನಿಲ್ಲಿಕೊಂಡಿದ್ದ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು 60 ಗ್ರಾಂ. ತೂಕದ ಚಿನ್ನದ ಸರ ಅಪಹರಿಸಿಕೊಂಡು ಹೋಗಿದ್ದಾನೆ. ಈ ಕುರಿತು ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

