ಮೈಸೂರು

ಜೀವನವೇ ಒಂದು ಕಲೆ: ಡಾ. ರಾಜಶೇಖರ್

Published On :

ಕ.ಪ್ರ.ವಾರ್ತೆ ಮೈಸೂರು ಜು. 22
ಮನುಷ್ಯನ ಜೀವನವೇ ಒಂದು ಕಲೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಹೇಳಿದರು.
ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನಲ್ಲಿ (ಕಾವಾ) ಸೋಮವಾರ ಏರ್ಪಡಿಸಿದ್ದ ಕುಂಚ ಕಾವ್ಯ ಸಾಂಸ್ಕೃತಿಕ ಸಮಿತಿ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅನಾದಿ ಕಾಲದಲ್ಲಿ ಪ್ರಾಣಿಗಳು ಮಾತ್ರವೇ ಇದ್ದ ಸಂದರ್ಭದಲ್ಲಿ ಯಾವುದು ಬಲಿಷ್ಠ ಪ್ರಾಣಿ ಅದು ದುರ್ಬಲ ಪ್ರಾಣಿಯನ್ನು ಕೊಂದು ಬದುಕುತ್ತಿತ್ತು. ನಂತರ ಮನುಷ್ಯನ ವಿಕಾಸವಾದ ಮೇಲೆ ಆತ ಬುದ್ಧಿವಂತ ಪ್ರಾಣಿಯಾದ ಕಾರಣ, ತನ್ನ ಸಂಗತಿ ಹಾಗೂ ಮತ್ತಿತರರನ್ನು ಪ್ರೀತಿಸುವ ಹಾಗೂ ಜತೆಯಾಗಿ ಬದುಕುವುದನ್ನು ಕಂಡುಕೊಂಡ. ಹೀಗಾಗಿ ಜೀವನವೇ ಒಂದು ಕಲೆ ಎಂದರು.
ಗುರು ಪೂರ್ಣಿಮೆ: ಗುರು ಎಂದರೆ ಕೇವಲ ಶಿಕ್ಷಕ ಮಾತ್ರವಲ್ಲ. ಅದು ಮಹತ್ವದ ತೂಕವುಳ್ಳ ಪದವಿ. ಕೆಲವರು ಕತ್ತಲೆಯಲ್ಲಿರುವವರನ್ನು ಮತ್ತೆ ಕತ್ತಲೆಗೆ ಕರೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ಬೆಳಕಿನಲ್ಲಿದ್ದೂ ಕತ್ತಲೆಯತ್ತ ಬರುತ್ತಾರೆ. ಮತ್ತೂ ಕೆಲವರು ಬೆಳಕಿನಲ್ಲಿದ್ದರೂ ಮತ್ತಷ್ಟೂ ಬೆಳಕಿನೆಡೆಗೆ ಬರಲು ಬಯಸುತ್ತಾರೆ. ಯಾರು ಅಂಧಕಾರದಿಂದ ಬೆಳಕಿನೆಡೆಗೆ ಕರೆ ತರುತ್ತಾನೋ ಆತನೇ ಗುರು. ಇಂದಿನ ಗುರುಪೂರ್ಣಿಮೆಯ ದಿನ ನಾವೆಲ್ಲರೂ ಗುರುಗಳನ್ನು ಸ್ಮರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚ್ಯ ಹಾಗೂ ಪರಂಪರೆ ಇಲಾಖೆಯ ಆಯುಕ್ತ ಪಿ.ಎಸ್. ವಸ್ತ್ರದ್,  ಯಾವುದೇ ಕಲಿಕೆ ಅಥವಾ ತರಬೇತಿ ಕೇವಲ ಉದ್ಯೋಗ ಪಡೆಯಲು ಮಾತ್ರವೇ ಸೀಮಿತವಾಗಬಾರದು. ಇಲ್ಲಿನ ಕಾಲೇಜಿನಲ್ಲಿ ಕಲಿತವರು ಹೊಸ ಆಲೋಚನೆಗಳಿಂದ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಜ್ಞಾನ ವಿಸ್ತಾರ ಮಾಡಿಕೊಳ್ಳಬೇಕು ಹಾಗೂ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಅತ್ಯಧಿಕ ಅಂಕ ಗಳಿಸಿರುವ ಕಾಲೇಜಿನ ವಿದ್ಯಾರ್ಥಿನಿಯರಾದ ಸಹನಾ ಹಾಗೂ ಅಪರ್ಣಾ ಅವರಿಗೆ ಪುರಸ್ಕಾರ ನೀಡಲಾಯಿತು.
ಕಾವಾ ಮುಖ್ಯಸ್ಥ ಎ.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಸಿ.ಪ್ರವೀಣ್‌ಕುಮಾರ್ ಇದ್ದರು. ಸಿದ್ದೇಶ್ ಜಯಶೇಖರ್ ಸ್ವಾಗತಿಸಿದರು. ತೇಜಸ್ವಿನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಚಿಸಿರುವ ಪ್ರಕೃತಿ ಚಿತ್ರ, ಭಾವಚಿತ್ರ, ರೇಖಾಚಿತ್ರ ಹಾಗೂ ಛಾಯಾಚಿತ್ರ ಸೇರಿದಂತೆ ಕಲಾ ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ನಾಳೆಯಿಂದ ಯೋಗ ಶಿಕ್ಷಣ
ಮೈಸೂರು:
ಜಿಪಂ ಮತ್ತು ಆಯುಷ್ ಇಲಾಖೆಯು ಜು.24 ರಿಂದ 29 ರವರೆಗೆ ಶಾಲಾ ಶಿಕ್ಷಕರಿಗಾಗಿ ಯೋಗ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ತೊಣಚಿಕೊಪ್ಪಲಿನ ಆರ್‌ಟಿಟಿಸಿಯಲ್ಲಿ ಏರ್ಪಡಿಸಿದೆ. ಜು.24ರ ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಯಣ, ಶಾಸಕರಾದ ತನ್ವೀರ್‌ಸೇಠ್, ಸಾ.ರಾ. ಮಹೇಶ್, ಎಚ್.ಪಿ. ಮಂಜುನಾಥ್, ಜಿ.ಟಿ. ದೇವೇಗೌಡ, ಕೆ.ವೆಂಕಟೇಶ್, ಎಸ್. ಚಿಕ್ಕಮಾದು ಮುಖ್ಯ ಅತಿಥಿಗಳಾಗಿ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.