ಜೀವನ ಗಣಿತದಲ್ಲಿ ಗೆಳೆಯರನ್ನು ಕೂಡಿ, ಕೆಟ್ಟ ಗುಣ ಬಿಡಿ: ಸಲಹೆ
ಕ.ಪ್ರ.ವಾರ್ತೆ , ಬನ್ನೂರು , ಜು. 23
ಜೀವನ ಎಂಬ ಗಣಿತದಲ್ಲಿ ಗೆಳೆಯರನ್ನು ಕೂಡಿ, ಹೀನಗುಣವನ್ನು ಕಳೆಯಬೇಕು ಎಂದು ಪ್ರಾಧ್ಯಾಪಕ ಕೆ. ಅನಂತರಾಮು ಹೇಳಿದರು. ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜೀವನ ಎಂಬುದು ಗಣಿತದಂತೆ. ಗೆಳೆಯರನ್ನು ಕೂಡಬೇಕು, ಹೀನಗುಣವನ್ನು ಕಳೆಯಬೇಕು. ಸಂತೋಷವನ್ನು ಗುಣಿಸಬೇಕು, ಪಾಪ-ಪುಣ್ಯವನ್ನು ಭಾಗಿಸಬೇಕು. ತಲೆ- ಬುದ್ಧಿ ವಿವೇಕದಿಂದಲೂ, ಮುಖ- ಮಂದಹಾಸದಿಂದಲೂ, ತುಟಿ- ಹಿತಮಿತ ಮೃದು ವಚನದಿಂದಲೂ, ಹೃದಯ- ವಿಶಾಲತೆಯಿಂದಲೂ ತುಂಬಿರಬೇಕು. ಕೆಲವರು ಜೀವನದಲ್ಲಿ ಕತ್ತಲಿನಿಂದ ಕತ್ತಲಿನೆಡೆಗೆ, ಕೆಲವರು ಕತ್ತಲಿನಿಂದ ಬೆಳಕಿನೆಡೆಗೆ, ಕೆಲವರು ಬೆಳಕಿನಿಂದ ಕತ್ತಲೆಗೆ, ಮತ್ತೆ ಕೆಲವರು ಬೆಳಕಿನಿಂದ ಬೆಳಕಿನೆಡೆಗೆ ಹೋಗುತ್ತಾರೆ. ನಾವು ನಮ್ಮ ಜೀವನ ಸಾರ್ಥಕವಾಗಿಸಿಕೊಳ್ಳಲು ಬೆಳಕಿನಿಂದ ಬೆಳಕಿನೆಡೆಗೆ ಹೋಗೋಣ ಎಂದರು.
ಬಳಿಕ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ. ಚಾಮೇಗೌಡ, ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎಂ. ಪ್ರಕಾಶ್, ಕೆ.ಜೆ. ಚಿಕ್ಕಜವರಪ್ಪಗೌಡ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

