ಮೈಸೂರು

ಆದರ್ಶ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ: ಎಚ್.ಸಿ. ಮಂಜುನಾಥ್

Published On :

ಕ.ಪ್ರ.ವಾರ್ತೆ ಹುಣಸೂರು ಜು. 24
ಆದರ್ಶ ಶಾಲೆಗೆ ಈಗಾಗಲೇ ಮಂಜೂರಾತಿಯಾಗಿರುವ ಭೂಮಿಯ ಪಕ್ಕದಲ್ಲಿ ಇನ್ನು ಎರಡು ಎಕರೆ ಭೂಮಿ ಪಡೆದು ಎರಡು ಅಂತಸ್ತಿನ ಸುಸಜ್ಜಿತ ಶಾಲೆ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಇಲ್ಲಿನ ಸಮೀಪದ ಚಿಕ್ಕಹುಣಸೂರಿನ ಬಳಿಯ ಬಾಚಹಳ್ಳಿ ರಸ್ತೆಯ ಬದಿಯ ಮೂರು ಎಕರೆ ವಿಸ್ತೀರ್ಣದಲ್ಲಿ 3.40 ಕೋಟಿ ವೆಚ್ಚದಲ್ಲಿ ಕೇಂದ್ರೀಯ ಆದರ್ಶ ವಸತಿ ಶಾಲೆಗಾಗಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಶಾಲೆ ನಿರ್ಮಿಸಲಾಗುವುದು. ಆದರೆ, ವಸತಿಶಾಲೆಗಾಗಿ ಒತ್ತಾಯ ಹೆಚ್ಚುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಗಳೊಂದಿಗೆ ಚರ್ಚಿಸಿ, ಈ ಭೂಮಿಯ ಪಕ್ಕದಲ್ಲಿ ಇನ್ನು ಎರಡು ಎಕರೆ ಭೂಮಿ ಪಡೆದು ವಿದ್ಯಾರ್ಥಿಗಳಿಗೆ ವಸತಿ ಕಟ್ಟಡ ನಿರ್ಮಿಸಲಾಗುವುದು. ಈವರೆಗೆ ಒಂದರಿಂದ ಐದನೆ ತರಗತಿಯವರೆಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. ಈ ಬಾರಿಯಿಂದ 6 ರಿಂದ 9ನೇ ತರಗತಿಯವರೆಗೆ ಶಿಕ್ಷಣ ಮುಂದುವರಿಸಲಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ತರಗತಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಬಿಇಒ ರಾಜಶೇಖರ್, ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ಪುರಸಭಾ ಸದಸ್ಯರಾದ ಸುನೀತಾ ಜಯರಾಮೇಗೌಡ, ಯೋಗೀಶ್, ಮುಖ್ಯ ಶಿಕ್ಷಕ ಮೋಹನ್‌ರಾಜ್, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದೇಗೌಡ, ಸದಸ್ಯ ಬೋಗಪ್ಪ, ರಾಯನಹಳ್ಳಿಸ್ವಾಮಿ ಹಾಗೂ ಪೋಷಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.