ಗ್ರೀನ್ಬಡ್ಸ್ ಮೋಸ ಮಾಡಲ್ಲ: ಭರವಸೆ
ಕ.ಪ್ರ.ವಾರ್ತೆ ಮೈಸೂರು ಜು. 25
ಗ್ರೀನ್ ಬಡ್ಸ್ ಆಗ್ರೋಫಾರಂನಲ್ಲಿ ಹಣ ಹೂಡಿರುವ ಠೇವಣಿದಾರರಿಗೆ ಮೋಸ ಆಗದು ಎಂದು ಕೊಪ್ಪಳದ ಗ್ರೀನ್ ಬಡ್ಸ್ ಆಗ್ರೋಫಾರಂ ಹಿರಿಯ ಮುಖ್ಯ ಸಹಾಯಕ ವಿ. ಶಿವಕುಮಾರ್ ಭರವಸೆ ನೀಡಿದರು.
ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು ಕಳೆದ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ 72 ಶಾಖಾ ಕಚೇರಿಗಳಿದ್ದು, ಸುಮಾರು 40 ಸಾವಿರ ನಿರುದ್ಯೋಗಿಗೆ ಸ್ವಾವಲಂಬನೆಯ ಉದ್ಯೋಗವಕಾಶವನ್ನು ಹಾಗೂ 2 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 3- 4 ತಿಂಗಳಿಂದ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ ಮೆಚ್ಯೂರಿಟಿ ನೀಡುವಲ್ಲಿ ವಿಳಂಬವಾಗಿದೆ. ಮೆಚ್ಯೂರಿಟಿ ಹಣ ವಿಳಂಬವಾದ ಕಾರಣ ಮೈಸೂರು ಭಾಗದಲ್ಲಿ ಗ್ರಾಹಕರು ಕಂಪನಿಯ ವ್ಯವಸ್ಥಾಪಕ ಮಂಡಳಿ ಮೇಲೆ ದೂರು ದಾಖಲಿಸಿದ್ದು, ದೂರಿವನ್ವಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ನಾಯ್ಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು.
ಗ್ರಾಹಕರ ಹಾಗೂ ಕ್ಷೇತ್ರದ ಕಾರ್ಯಕರ್ತರು ದೂರು ನೀಡುತ್ತಿದ್ದರೆ, ಎಂಡಿ ಬಂಧನದಲ್ಲಿಯೇ ಇರಬೇಕಾಗುತ್ತದೆ. ಆದ್ದರಿಂದ 72 ಶಾಖಾ ಕಚೇರಿ ತೆರೆಯಲು ಗ್ರಾಹಕರು ಅವಕಾಶ ಮಾಡಿಕೊಡಬೇಕು. ಬಾಕಿ ಬರಬೇಕಾದ ಹಣದ ವಿವರ ನೀಡಬೇಕು. ನ್ಯಾಯಾಂಗ ಬಂಧನದಿಂದ ರವೀಂದ್ರನಾಥ್ ಅವರು ಬಂದ ನಂತರ 30 ದಿನದೊಳಗೆ ಮೆಚ್ಯೂರಿಟಿ ಹಣ ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದರು.
ಮಂಡ್ಯ ಶಾಖೆಯ ಹಿರಿಯ ಮುಖ್ಯ ಸಹಾಯಕ ರಾಜಶೇಖರ್ ಮಾತನಾಡಿ, ರಾಜ್ಯದ ನಾನಾ ಭಾಗದಲ್ಲಿ ಸುಮಾರು 500 ಕೋಟಿ ಆಸ್ತಿ ಇದೆ. ಸುಮಾರು 15- 18 ಕೋಟಿ ಮಾತ್ರ ಬಾಕಿ ನೀಡಬೇಕಿದೆ. ಆ ಆಸ್ತಿಯನ್ನು ಮಾರಾಟ ಮಾಡಲು ಸಮಯದ ಅವಕಾಶ ಬೇಕಾಗಿರುವುದರಿಂದ ಗ್ರಾಹಕರು ಸಹಕರಿಸಬೇಕು. ಈವರೆಗೆ ಮೈಸೂರು ಸೇರಿದಂತೆ 4 ಜಿಲ್ಲೆಗಳಲ್ಲಿ ಎಂಡಿ ರವೀಂದ್ರನಾಥ್ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.
ರವೀಂದ್ರನಾಥ್ ಅವರ ಪತ್ನಿ ಯು.ಎಲ್. ದಾಕ್ಷಾಯಿಣಿ, ವಿವಿಧ ವಿಭಾಗದ ಶಾಖಾ ಮುಖ್ಯಸ್ಥರಾದ ಎಂ. ಮಂಜುಳಾ, ಕೆ.ಸಿ. ನಾಗರಾಜು ಕಂಪ್ಲಿ, ಶರಣಬಸಪ್ಪ ದಾ. ಯಲಬುರ್ಗ ಇದ್ದರು.
ವಂಚನೆ ಪ್ರಕರಣ: ಸಿಐಡಿಗೆ ಶಿಫಾರಸು
ಮೈಸೂರು: ಗ್ರೀನ್ ಬಡ್ಸ್ ಆಗ್ರೋ ಫಾರಂ ಸಂಸ್ಥೆಯು ಸಾರ್ವಜನಿಕರು, ಏಜೆಂಟರಿಗೆ ವಂಚಿಸಿರುವ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದರು.
ನಗರದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ. ಬಂಧಿತ ಗ್ರೀನ್ ಬಡ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ನನ್ನು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಉಳಿದ ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗಾರರಿಗೆ ಹೇಳಿದರು.
ಈ ಸಂಸ್ಥೆಯು ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಖೆ ಹೊಂದಿದೆ. ಬೇರೆ ಜಿಲ್ಲೆಗಳಲ್ಲೂ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

