ಮೈಸೂರು

ವಿವಿಧ ಬಡಾವಣೆಗಳಲ್ಲಿ ವಿಷ್ಣು ಸಹಸ್ರನಾಮ ಅಭಿಯಾನ

Published On :

ಕ.ಪ್ರ.ವಾರ್ತೆ ಮೈಸೂರು ಜು. 27
ಜನಸಾಮಾನ್ಯರಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದ ಮಹತ್ವವನ್ನು ತಿಳಿಸುವ ಸಲುವಾಗಿ ಚಿನ್ಮಯ ಮಿಷನ್ ನಗರದ ಏಳು ಬಡಾವಣೆಗಳಲ್ಲಿ ತರಗತಿಗಳನ್ನು ಏರ್ಪಡಿಸಿದೆ.
ಆ.4 ರಿಂದ 25 ರವರೆಗೆ ಹಮ್ಮಿಕೊಂಡಿರುವ ಈ ತರಗತಿಯಲ್ಲಿ ಇದುವರೆಗೆ ವಿಷ್ಣುಸಹಸ್ರನಾಮ ಕಲಿಯದ ಮಕ್ಕಳು, ಯುವಕ- ಯುವತಿಯರು ಹಾಗೂ ಮಹಿಳೆ ಮತ್ತು ಪುರುಷರು ಭಾಗವಹಿಸಬಹುದು ಎಂದು ಸಂಸ್ಥೆ ಅಧ್ಯಕ್ಷ ಎ.ಜಿ. ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಸುಧಾ ಪ್ರಸಾದ್ ತಿಳಿಸಿದ್ದಾರೆ. ಈ ತರಗತಿಯು ಪ್ರತಿದಿನ ಬೆಳಗ್ಗೆ 6.30ಕ್ಕೆ ವಿದ್ಯಾರಣ್ಯಪುರಂ ಸಾರ್ವಜನಿಕ ಹಾಸ್ಟೆಲ್ ರಸ್ತೆಯಲ್ಲಿರುವ ಚಿನ್ಮಯ ಮಿಷನ್‌ನಲ್ಲಿ, ಬೆಳಗ್ಗೆ 7.30 ಕ್ಕೆ ಜೆ.ಪಿ. ನಗರದ ವಾಟರ್ ಟ್ಯಾಂಕ್ ಬಳಿ ಇರುವ ಅಷ್ಟೈಶ್ವರ್ಯ್ಯ ಸಿದ್ಧಿ ಗಣಪತಿ ದೇವಸ್ಥಾನದಲ್ಲಿ, ಬೆಳಗ್ಗೆ 10.30ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ರಮಣ ಜ್ಞಾನ ಕೇಂದ್ರದಲ್ಲಿ, ಮಧ್ಯಾಹ್ನ 12ಕ್ಕೆ ಎನ್.ಆರ್. ಮೊಹಲ್ಲಾದ ಗಣಪತಿ ದೇವಸ್ಥಾನ ರಸ್ತೆಯ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ, ಸಂಜೆ 4.30ಕ್ಕೆ ಗೋಕುಲಂ ಡಾಕ್ಟರ್ಸ್ ಕಾರ್ನರ್‌ನಲ್ಲಿರುವ ಚಿನ್ಮಯ ಮಿಷನ್‌ನಲ್ಲಿ, ಸಂಜೆ 6ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ಶಿವಾನಂದ ಜ್ಞಾನಾಲಯದಲ್ಲಿ ಹಾಗೂ ಸಂಜೆ 7.15ಕ್ಕೆ ಖಿಲ್ಲೆ ಮೊಹಲ್ಲಾದ ಬಸವೇಶ್ವರ ವೃತ್ತದ ಬಳಿ ಇರುವ ಅಭಿನಯ ಶಂಕರಾಲಯ ಇಲ್ಲಿ ನಡೆಯಲಿದೆ. ದೂ.2413601 ಅಥವಾ ಮೊ. 8904037968 ಸಂಪರ್ಕಿಸಿ.

ಸಾಲಬಾಧೆಯಿಂದ ಮಹಿಳೆ ನಾಪತ್ತೆ
ಮೈಸೂರು: ನಗರದ ಮಂಡಿ ಮೊಹಲ್ಲಾ ನಿವಾಸಿ ಎಂ.ಎಲ್. ಶ್ರೀನಾಥ್ ಎಂಬವರ ಪತ್ನಿ ಭಾರತಿ (44) ನಾಪತ್ತೆಯಾಗಿದ್ದಾರೆ. ಮನೆ ಕಟ್ಟಿಸುತ್ತಿದ್ದು, ಇದರಿಂದ ಸಾಲ ಹೆಚ್ಚಾಗಿದೆ. ಹೀಗಾಗಿ ಮನನೊಂದ ಪತ್ನಿ ಭಾರತಿ ಜು.24 ರಂದು ಮನೆ ಬಿಟ್ಟು ಹೋಗಿದ್ದಾರೆ ಎಂದು ಪತಿ ಶ್ರೀನಾಥ್ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣ, ಎಡಗಾಲ ಪಾದದ ಬಳಿ ಬಿಳಿ ಮಚ್ಚೆ ಇದೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ. ದೂ.0821- 2418313, 513 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.