ಮೊಬೈಲ್, ಹಣ ದೋಚಿದ್ದ ನಾಲ್ವರ ಬಂಧನ
ಮೈಸೂರು: ಇಬ್ಬರು ವ್ಯಕ್ತಿಗಳಿಗೆ ಚಾಕು ತೋರಿಸಿ ಮೊಬೈಲ್ ಮತ್ತು ಹಣ ದೋಚಿ ಪರಾರಿಯಾಗುತ್ತಿದ್ದ ನಾಲ್ವರನ್ನು ದೇವರಾಜ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶಾಂತಿನಗರ ನಿವಾಸಿ ಟಿಪ್ಪು (19), ಗೌಸಿಯಾನಗರದ ಸೈಯದ್ ಸಲ್ಮಾನ್ (20), ಪಿರಿಯಾಪಟ್ಟಣ ತಾಲೂಕು ಆವರ್ಸಿ ನಿವಾಸಿ ಶಿವು (23) ಮತ್ತು ಸೋಮವಾರಪೇಟೆ ತಾಲೂಕು ಗುಮ್ಮನಕೊಲ್ಲಿ ನಿವಾಸಿ ವಿನೋದ್ಕುಮಾರ್ (23) ಬಂಧಿತ ಆರೋಪಿಗಳು. ಚಾಮರಾಜನಗರ ಜಿಲ್ಲೆ ಮಲ್ಲಯ್ಯನಪುರ ನಿವಾಸಿಗಳಾದ ಶಿವಕುಮಾರ್ ಮತ್ತು ಮಹದೇವಸ್ವಾಮಿ ಎಂಬವರು ಲ್ಯಾನ್ಸ್ಡೌನ್ ಕಟ್ಟಡ ಹಿಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಚಾಕು ತೋರಿಸಿ ಮೊಬೈಲ್, ಹಣ ದೋಚಿ ಪರಾರಿಯಾಗುತ್ತಿದ್ದಾಗ ಪೊಲೀಸರು ಹಿಡಿದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಇನ್ಸ್ಪೆಕ್ಟರ್ ಕಾಂತರಾಜು, ಎಸ್ಐ ಲೇಪಾಕ್ಷ ಮತ್ತು ಸಿಬ್ಬಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

