ಪ್ರಗತಿಪರ ರೈತ ಸ್ವಾಮಿನಾಯ್ಕಗೆ ಸನ್ಮಾನ
ಹುಣಸೂರು: ಗ್ರಾಮೀಣ ಪ್ರದೇಶದ ಜನತೆ ಕೃಷಿಯಿಂದ ವಿಮುಖರಾಗಿರುವ ಸಂದರ್ಭದಲ್ಲಿ ಕೃಷಿಯಿಂದಲೇ ಜೀವನ ಸಾಗಿಸುವ ಜೊತೆಗೆ ಆರ್ಥಿಕವಾಗಿ ಸಬಲರಾಗಿ, ಮತ್ತೊಬ್ಬರಿಗೆ ಮಾರ್ಗದರ್ಶಕನಾದ ಬಗ್ಗೆ ಕನ್ನಡಪ್ರಭದ ವರದಿಯಿಂದ ಬೆಳಕಿಗೆ ಬಂದ ಮರೂರು ಸ್ವಾಮಿನಾಯ್ಕ ಅವರನ್ನು ರೋಟರಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ತಂಬಾಕು ಮಂಡಳಿ, ಐಟಿಸಿ ಕಂಪನಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆದ ತಂಬಾಕು ಬೆಳೆಗಾರರ ಸಮಾವೇಶ ಹಾಗೂ ಪ್ರಗತಿಪರ ರೈತರಿಗೆ ಮತ್ತು ನಿವೃತ್ತ ತಂಬಾಕು ಅಧಿಕಾರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ, ಕೃಷಿಯಿಂದಲೆ ಸಾಧನೆ ಮಾಡಿ ಜೀವನವನ್ನೆ ಬದಲಿಸಿಕೊಂಡು ಎಲೆಮರೆ ಕಾಯಿಯಂತಿದ್ದ ಗಾವಡಗೆರೆ ಹೋಬಳಿ ಮರೂರು ಗ್ರಾಮದ ಪ್ರಗತಿಪರ ರೈತ ಸ್ವಾಮಿನಾಯ್ಕ ಅವರ ಬಗ್ಗೆ ಕನ್ನಡಪ್ರಭ ಅನ್ನದಾತರ ಆತ್ಮಕಥೆಯ ಸುದ್ದಿ ಸರಣಿಯಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿನಾಯ್ಕ, ತನ್ನ 3 ಎಕರೆ ಜಮೀನಿನಲ್ಲಿ ತಂಬಾಕು ಬೆಳೆದು ಸಾಕಾಗಿ ಸಾಲಗಾರನಾಗಿದ್ದೆ. ಬಳಿಕ ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ಸೆಟ್ ಹಾಕಿಸಿಕೊಂಡು, ತೋಟಗಾರಿಕೆ ಇಲಾಖೆಯಿಂದ ಸಹಾಯಧನ, ಸವಲತ್ತು ಪಡೆದು ಹಿರಿಯ ಸಹಾಯಕ ನಿರ್ದೇಶಕ ಸೋಮಯ್ಯ ಅವರ ನೆರವಿನಿಂದ ಬಾಳೆ ಮತ್ತು ಮೆಣಸಿನಕಾಯಿ ಬೆಳೆದು ಪ್ರತಿ ವಾರ 20 ಸಾವಿರದಿಂದ 30 ಸಾವಿರ ಹಣ ಸಂಪಾದಿಸಿ ಬಂದ ಲಾಭದಲ್ಲಿ ನನ್ನ ಮಗನನ್ನು ಪದವೀಧರನಾಗಿಸಿ, ಮಗಳನ್ನು ಬೆಂಗಳೂರಿನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿಸುತ್ತಿದ್ದೇನೆ. ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಂಡು ಈಗ ಚೆನ್ನಾಗಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

