ಮೈಸೂರು

ಭಯೋತ್ಪಾದನೆ ದಾಳಿ ತಡೆ ಅಣಕು ಪ್ರದರ್ಶನ

Published On :

ಕ.ಪ್ರ.ವಾರ್ತೆ , ಮೈಸೂರು , ಜು. 31
ಮುಂಜಾನೆ ಚಾಮುಂಡಿಬೆಟ್ಟ, ಅರಮನೆ ಅಕ್ಕಪಕ್ಕ ರಾಸಾಯನಿಕ ವಾಸನೆ ಬೀರುತ್ತಿತ್ತು, ಪೊಲೀಸರ ಗಡಿಬಿಡಿಯಿಂದ ಓಡಾಡುತ್ತಿದ್ದರು, ಅಗ್ನಿಶಾಮಕ ದಳದ ಸಿಬ್ಬಂದಿ ರಾಸಾಯನಿಕ ಪದಾರ್ಥದ ದುಷ್ಪರಿಣಾಮ ನಿಯಂತ್ರಿಸಲು ಶ್ರಮಿಸುತ್ತಿದ್ದರು, ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು ಪರಿಹಾರ ಕಾರ್ಯ ಕೈಗೊಂಡಿದ್ದರು...
ಇದು ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಯೋತ್ಪಾದಕರಿಂದ ರಾಸಾಯನಿಕ ದಾಳಿ ಅಥವಾ ಕಾರ್ಖಾನೆಗಳಿಂದ ರಾಸಾಯನಿಕ ಸ್ಫೋಟಗೊಂಡ ವೇಳೆ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬೇಕೆಂಬುದರ ಬಗ್ಗೆ ಹಮ್ಮಿಕೊಂಡಿದ್ದ ಅಣಕು ಪ್ರದರ್ಶನ. ಇದಕ್ಕೆ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದರು. ಮುಂಜಾನೆ ಚಾಮುಂಡಿಬೆಟ್ಟದಲ್ಲಿ ಅಣಕು ಪ್ರದರ್ಶನ ನಡೆಯಿತು. ಬಳಿಕ ಬೆಳಗ್ಗೆ 10ಕ್ಕೆ ಅರಮನೆ ಆವರಣದಲ್ಲಿ ಅಣಕು ಪ್ರದರ್ಶನ ಜರುಗಿತು. ಪೊಲೀಸರ ಗಡಿಬಡಿ, ವಿಪತ್ತು ನಿರ್ವಹಣೆಯಂತಹ ಕಾರ್ಯಾಚರಣೆ ನೋಡಿ ಜನ ಕೆಲಹೊತ್ತು ಕಂಗಾಲಾದರು. ಅಣಕು ಪ್ರದರ್ಶನ ಎಂದು ಗೊತ್ತಾದ ಮೇಲೆ ನಿರಾಳರಾದರು.
ಚಾಮುಂಡಿಬೆಟ್ಟದಲ್ಲಿ ರಾಸಾಯನಿಕ ಸೋರುವಿಕೆಯಿಂದಾಗುವ ಅನಾ ಹುತ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಬಾಂಬ್ ಸ್ಫೋಟದಿಂದಾಗುವ ಅನಾಹುತದ ಅಣಕು ಪ್ರದರ್ಶನ, ಈ ಪರಿಸ್ಥಿತಿ ನಿರ್ವಹಣೆ ಕುರಿತು ತಾಲೀಮು ನಡೆಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಷ್ಟ್ರೀಯ ಸಲಹೆಗಾರ ಬ್ರಿಗೇಡಿಯರ್ ಡಾ.ಬಿ.ಕೆ. ಖನ್ನಾ, ಜಿಲ್ಲಾಧಿಕಾರಿ ಸಿ. ಶಿಖಾ, ಕಂದಾಯ ಇಲಾಖೆ ತುರ್ತು ಘಟಕದ ಸಂಯೋಜಕ ಪ್ರದೀಪ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎ.ಎನ್. ರಾಜಣ್ಣ, ಎಸ್ಪಿ ಅಭಿನವ್ ಖರೆ, ವಿಪತ್ತು ನಿರ್ವಹಣ ತಂಡದ ಸಂಜಯ್ ಮುಖರ್ಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.