ಮೈಸೂರು

ಎಸ್ವಿಇಐ ಶಾಲೆಗೆ 4 ಅತ್ಯುನ್ನತ ಶ್ರೇಣಿ

Published On :

ಮೈಸೂರು: ಈ ಬಾರಿಯ ಸಿಬಿಎಸ್ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ವಿಜಯನಗರದ ಎಸ್ವಿಇಐ ಶಾಲೆಯ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. 30 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಇವರಲ್ಲಿ 4 ವಿದ್ಯಾರ್ಥಿಗಳು 10 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಿ.ಎಸ್. ಚಿನ್ಮಯ್, ವರ್ಷ ಆರ್. ಗೌಡ, ಎಲ್. ಗೌತಮ್ ಹಾಗೂ ಯಶಸ್ ಅವರು 10 ಸಿಜಿಪಿಎ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಕೌಟಿಲ್ಯ ವಿದ್ಯಾಲಯ ಶೇ. 100 ಫಲಿತಾಂಶ
ಕ.ಪ್ರ.ವಾರ್ತೆ   ಮೈಸೂರು   ಜೂ. 3
ಕಳೆದ ಮಾರ್ಚ್ನಲ್ಲಿ ನಡೆದ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿನ ಕೌಟಿಲ್ಯ ವಿದ್ಯಾಲಯವು ಸತತ ನಾಲ್ಕನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಹಾಜರಾಗಿದ್ದ 37 ವಿದ್ಯಾರ್ಥಿಗಳಲ್ಲಿ ಎಂ. ಸಂಜನಾ, ವಿನೀತ್ ಕೌಶಿಕ್, ವರುಣ್ ಓಂಪ್ರಕಾಶ್ (10 ಸಿಜಿಪಿಎ) ಈ ಮೂವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎನ್.ಎಸ್. ಸಂಜನಾ (9.8 ಸಿಜಿಪಿಎ), ನೇಸರ್ ಪ್ರಫುಲ್ಲ, ಸಂಜನರಾಜ್ (9.6 ಸಿಜಿಪಿಎ), ರೋಹಿತ್ ಶ್ರೀನಿವಾಸ್, ಧ್ರುವ ಅರಸ್, ಶಿವಂ ಕನೋಡಿಯ, ಅಸ್ಫಾನ್ ಖಾನ್, ಪಿ. ಪ್ರಶಾಂತಿ (9.4 ಸಿಜಿಪಿಎ), ಎಸ್. ಚೈತ್ರ, ದೀಕ್ಷಿತ ಡರ್ಲಾ, ಪೊನಿಶಾ ದೇವಯ್ಯ, (9.2 ಸಿಜಿಪಿಎ), ಕೆ.ಎಸ್. ಅನನ್ಯ, ಹರ್ಷ ಶ್ರೀನಿವಾಸ್, ನಿಶ್ಚಿತ್ ಗಣೇಶ್, ವರುಣ್ರಾವ್ (9 ಸಿಜಿಪಿಎ). ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವರ್ಗವನ್ನು ಆಡಳಿತ ಮಂಡಳಿ ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.