ವೈಭವದ ದೊಡ್ಡಮ್ಮ ತಾಯಿ ರಥೋತ್ಸವ
ಕ.ಪ್ರ.ವಾರ್ತೆ ರಾವಂದೂರು ಜೂ. 7
ರಾವಂದೂರು ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ದೊಡ್ಡಮ್ಮತಾಯಿ ರಥೋತೋತ್ಸವ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.
ಹೊನ್ನೇನಹಳ್ಳಿ ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದಿಂದ ಲಕ್ಷ್ಮಿದೇವಿ ದೇವಸ್ಥಾನದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು.
ದೊಡ್ಡಮ್ಮತಾಯಿ, ಲಕ್ಷ್ಮಿದೇವಿ, ಬಸವೇಶ್ವರ ಹೀಗೆ ಮೂವರು ದೇವರ ಸಮ್ಮಿಲನದೊಂದಿಗೆ ಜಾತ್ರಾ ಮಹೋತ್ಸವ ನಡೆಯುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ ಎಂದು ಹೊನ್ನೇನಹಳ್ಳಿ ಗ್ರಾಮದ ಮುಖಂಡ ಬೋರಯ್ಯ ತಿಳಿಸಿದರು.
ಹೊನ್ನೇನಹಳ್ಳಿ ಬೋರೆಕೊಪ್ಪಲು ಮಠದಕೊಪ್ಪಲು ಹಾಗೂ ರಾವಂದೂರು ದೊಡ್ಡಕೊಪ್ಪಲು ಅಲ್ಲದೆ ವಿವಿಧೆಡೆಯಿಂದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ತಾಪಂ ಸದಸ್ಯ ಆರ್.ಸಿ. ಚಂದ್ರು, ಶಾಸಕ ಕೆ. ವೆಂಕಟೇಶ್ ಅವ ಪುತ್ರ ನಿತಿನ್ ವೆಂಕಟೇಶ್, ಮುಖಂಡರಾದ ಶಿವಣ್ಣೇಗೌಡ, ಹುಚ್ಚೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಟಿ. ಸ್ವಾಮಿ, ಸಣ್ಣಪ್ಪಾಜಿ, ಬೋರಯ್ಯ, ರಾಮಯ್ಯ, ಚಿಕ್ಕೀರಯ್ಯ, ಸ್ವಾಮಯ್ಯ, ಸ್ವಾಮೀಗೌಡ, ಜವರೇಗೌಡ, ಕೆಂಡಗಣ್ಣ, ಪ್ರಸನ್ನಚಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

