ಮೈಸೂರು

ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ

Published On :

ಮೈಸೂರು: ಕೆ.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಕೆ. ಶಿವಣ್ಣಚಾರ್ ಎಂಬವರ ಪುತ್ರಿ ಎಸ್. ರಮ್ಯಶ್ರೀ(21) ನಾಪತ್ತೆಯಾಗಿದ್ದಾರೆ.ರಮ್ಯಶ್ರೀಗೆ ಮೇ 6ರಂದು ಮದುವೆ ನಿಶ್ಚಿತವಾಗಿದ್ದು, ಮದುವೆಗೆ ಎಲ್ಲಾ ತರಹ ಏರ್ಪಾಡುಗಳ ನಡೆದಿತ್ತು. ಹೀಗಿರುವಾಗ ಏ. 29 ರಂದು ಮನೆಯಲ್ಲಿದ್ದ 50 ಸಾವಿರ ನಗದು, 1 ಮೊಬೈಲ್ನೊಂದಿಗೆ ರಮ್ಯಶ್ರೀ ಕಾಣೆಯಾಗಿದ್ದಾರೆ. ಚಹರೆ- 4.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ, ತಮಿಳು ಮತ್ತು ಹಿಂದಿ ಮಾತನಾಡುತ್ತಾರೆ. ಕಾಣೆಯಾಗಿರುವ ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಬಹುದು.

ನಂಜನಗೂಡು ರಸ್ತೆ ಚತುಷ್ಪಥ ಮಾಡಲು ಆಗ್ರಹ
ಮೈಸೂರು: ಮೈಸೂರು- ನಂಜನಗೂಡು ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮಾಡುವಂತೆ ಬಂಡಿಪಾಳ್ಯ ಎಪಿಎಂಸಿ ವರ್ತಕರ ಹಿತರಕ್ಷಣಾ ಸಮಿತಿ  ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ನಗರದ ಹಳೇ ಸಂತೇಪೇಟೆಯಿಂದ ದಿನಸಿ ಮತ್ತು ತಿಲಕ್ನಗರದ ಎಪಿಎಂಸಿಯಿಂದ ತರಕಾರಿ ಸಗಟು ವ್ಯಾಪಾರವನ್ನು ನಂಜನಗೂಡು ರಸ್ತೆಯ ಬಂಡೀಪಾಳ್ಯದ ಎಪಿಎಂಸಿಗೆ ಸ್ಥಳಾಂತರಿಸಿ ಸುಮಾರು 10 ವರ್ಷಗಳೇ ಕಳೆದಿದೆ. ಅಲ್ಲದೆ, ನಗರದ ವಿಮಾನ ನಿಲ್ದಾಣವು ಸಹ ಕಾರ್ಯನಿರ್ವಹಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ದುಲ್ ಗಫಾರ್ ಹಾಗೂ ಕಾರ್ಯದರ್ಶಿ ಕೆ.ಎಂ. ಶಿವಶಂಕರ್ ಹೇಳಿದ್ದಾರೆ. ಸರ್ಕಾರವು ಕೂಡಲೆ ಈ ತುರ್ತು ಕಾಮಗಾರಿ ಕೈಗೆತ್ತಿಕೊಂಡು ಚತುಷ್ಪಥ ರಸ್ತೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.