ಮಹಿಳಾ ಕಾರ್ಮಿಕರಿಗೆ ಕಿರುಕುಳ: ಆರೋಪ
ಕ.ಪ್ರ.ವಾರ್ತೆ ಮೈಸೂರು ಜೂ. 9
ಹೆಬ್ಬಾಳು ಕೈಗಾರಿಕಾ ಪ್ರೇದಶದಲ್ಲಿರುವ ಸಾಯಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮಹಿಳಾ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಚಾಮುಂಡೇಶ್ವರಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ನರಸೇಗೌಡ ಆರೋಪಿಸಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸುವ ಸಲುವಾಗಿ ಇಂತಹ ಗಾರ್ಮೆಂಟ್ಸ್ ಕಂಪನಿಗಳಿಗೆ ಉದ್ಯೋಗಕ್ಕಾಗಿ ಸೇರಿದರೆ ಅಲ್ಲಿನ ಮೇಲಿನ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಗಾರ್ಮೆಂಟ್ಸ್ನಲ್ಲಿ ಸುಮಾರು 1400 ಮಂದಿ ಕೆಲಸ ಮಾಡುತ್ತಿದ್ದು, 8 ಗಂಟೆ ಕೆಲಸದ ಅವಧಿಯ ನಂತರ ಹೆಚ್ಚುವರಿಯಾಗಿ ದುಡಿಯುವ ಮಹಿಳೆಯರಿಗೆ ಹಣ ಕೊಡದಿರುವುದು, ರಜೆ ಕೇಳುವ ಕಾರ್ಮಿಕರಿಗೆ ಕಿರುಕುಳ ನೀಡುವುದು, ರಾಜಿನಾಮೆ ಕೊಟ್ಟರೆ ಸ್ವೀಕರಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸುವಲ್ಲಿ ಕಂಪನಿಯ ಸಹಾಯಕ ವ್ಯವಸ್ಥಾಪಕ ನಾಗರಾಜ್ ಅಸಭ್ಯವಾಗಿ ವರ್ತಿಸುತ್ತಿದಾರೆ ಎಂದು ಆರೋಪಿಸಿದರು.
ಈ ಸಂಬಂಧ ಕಳೆದ ಜೂ. 5ರಂದು ಮಹಿಳಾ ಕಾರ್ಮಿಕರು ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ ಕಂಪನಿಯ ಅಧಿಕಾರಿ ಅರಸು ಎಂಬವರು ದಯವಿಟ್ಟು ಕ್ಷಮಿಸಿ ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಆದರೂ ನಾಗರಾಜ್ ಅವರ ವರ್ತನೆ ಬದಲಾಗಿಲ್ಲ ಎಂದು ತಿಳಿಸಿದರು.
ಕೂಡಲೇ ಆತನನ್ನು ಕೆಲಸದಿಂದ ವಜಾ ಮಾಡುವಂತೆ ಒತ್ತಾಯಿಸಿ ಕಂಪನಿಯ ವ್ಯವಸ್ಥಾಪಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಟಗಳ್ಳಿ ಠಾಣೆಗೆ ದೂರು ನೀಡಿದಾಗ ಅಲ್ಲಿನ ಇನ್ಸ್ಪೆಕ್ಟರ್ ಸಂಬಂಧಿಸಿದ ನಾಗರಾಜ್ ಕ್ಷಮೆ ಕೇಳುವಂತೆ ಮಾಡುವುದಾಗಿ ಭರವಸೆ ನೀಡಿದರು. ಹೀಗಿದ್ದರೂ ಆತ ಕ್ಷಮೆ ಕೇಳಲಿಲ್ಲ ಹಾಗೂ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದು, ಇದನ್ನು ತಪ್ಪಿಸುವಲ್ಲಿ ಕಂಪನಿ ಆಡಳಿತ ವರ್ಗ ಮುಂದಾಗದೆ ಹೋದರೆ ಕಾರ್ಮಿಕ ಇಲಾಖೆಗೆ ದೂರು ನೀಡಿ ಮುಂದಿನ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂತಹ ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಮೇಲ್ವಿಚಾರಕ ಪುರುಷ ವರ್ಗದವರು ಮಹಿಳೆಯರ ಮೇಲೆ ಅವಿರತವಾಗಿ ದೌರ್ಜನ್ಯ ಎಸಗುತ್ತಿರುವುದು ಸುಳ್ಳೇನಲ್ಲ. ಎಷ್ಟೋ ಮಹಿಳೆಯರು ತಮ್ಮ ವೈಯಕ್ತಿಕ ಜೀವನ ನಿರ್ವಹಣೆಗೆ ಎಲ್ಲಾ ದೌರ್ಜನ್ಯ, ಹಿಂಸೆ ಹಾಗೂ ಕಿರುಕುಳ ಸಹಿಸಿಕೊಂಡು ಬದುಕು ನಡೆಸುವಂತಾಗಿದೆ ಎಂದು ಅವರು, ಯಾವುದೇ ಗಾರ್ಮೆಂಟ್ಸ್ನಲ್ಲೂ ಈ ರೀತಿ ವಾತಾವರಣ ಉಂಟಾಗಬಾರದು ಎಂದು ಆಗ್ರಹಿಸಿದರು.
ನಾಗರತ್ನ, ಕವಿತಾ, ಗೀತಾ, ಎಂ. ಮಂಜುಳಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

