ಎರಡೂವರೆ ವರ್ಷದ ಬಾಲಕಿಗೆ ಬರೆ ಎಳೆದ ಶಿಕ್ಷಕಿ
ಕ.ಪ್ರ.ವಾರ್ತೆ ಶ್ರೀರಂಗಪಟ್ಟಣ ಜೂ. 9
ತುಂಟಾಟ ಮಾಡಿದ ಬಾಲಕಿಗೆ ಅಂಗನವಾಡಿ ಶಿಕ್ಷಕಿ ಬರೆ ಎಳೆದ ಘಟನೆ ತಾಲೂಕಿನ ಮಣಿಗೌಡನಹುಂಡಿ ಗ್ರಾಮದಲ್ಲಿ ಜರುಗಿದೆ. ಮಮತಾ ಎಂಬ ಅಂಗನವಾಡಿ ಶಿಕ್ಷಕಿ ಎರಡೂವರೆ ವರ್ಷದ ಬಾಲಕಿ ಸುಶ್ಮಿತಾಳಿಗೆ ಕುಕ್ಕರ್ ವಿಷಲ್ನಿಂದ ಬರೆ ಎಳೆದು, ಕುತ್ತಿಗೆ, ಬಲಗೈ, ಕಾಲಿನ ಮಂಡಿ ಗಾಯಗೊಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೋಷಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶಿಕ್ಷಕಿಯನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಘಟನೆಯಿಂದ ಆತಂಕಗೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಿರಲು ನಿರ್ಧರಿಸಿದ್ದಾರೆ. ಮಣಿಗೌಡನಹುಂಡಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಏಳೆಂಟು ಮಕ್ಕಳು ಹೋಗುತ್ತಿದ್ದಾರೆ. ಮಮತಾ ಕಳೆದ ಮೂರ್ನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಗಳ ಮುಂದೆ ಈ ಮಗು ಯಾವಾಗಲೂ ಗಲಾಟೆ ಮಾಡುವುದು ಮತ್ತು ಅಳುತ್ತಿರುವುದನ್ನು ಸಹಿಸಲಾರದೆ ಬೆಂಕಿ ಕಡ್ಡಿ ಹಚ್ಚಿ ಹೆದರಿಸಲು ಹೋದಾಗ ಆಕೆಯ ಮೈ ಮೇಲೆ ಕಿಡಿ ಹಾರಿತೆಂಬ ಹಾರಿಕೆಯ ಉತ್ತರವನ್ನು ಶಿಕ್ಷಕಿ ಮಮತಾ ನೀಡುತ್ತಾರೆ. ಆದರೆ ವಾಸ್ತವ ಸಂಗತಿಯೇ ಬೇರೆ. ಅಂಗನವಾಡಿಯ ಮಕ್ಕಳೇ ಹೇಳುವಂತೆ ಆಗತಾನೆ ಅನ್ನ ಮಾಡಲಾಗಿದ್ದ ಕುಕ್ಕರ್ನಲ್ಲಿದ್ದ ವಿಷಲ್ ತೆಗೆದುಕೊಂಡು ಬಂದು ಸುಶ್ಮಿತಾಳಿಗೆ ಬರೆ ಹಾಕಿದ್ದಾರೆಂದು ಮಕ್ಕಳು ಪೋಷಕರ ಬಳಿ ಹೇಳಿದ್ದಾರೆ. ಮಕ್ಕಳಿಂದ ಹೇಳಿಕೆ ಪಡೆದುಕೊಂಡ ಅಧಿಕಾರಿಗಳು ಶಿಕ್ಷಕಿ ಮಮತಾ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

