ರಾಘವೇಂದ್ರಸ್ವಾಮಿವರ್ಧಂತ್ಯುತ್ಸವ
ಮೈಸೂರು: ಕೃಷ್ಣಮೂರ್ತಿಪುರಂನಲ್ಲಿರುವ ರಾಘವೇಂದ್ರಸ್ವಾಮೀಗಳ ವೃಂದಾವನ ಮಹಾ ಸನ್ನಿಧಾನ ಅಭಿನಯ ಮಂತ್ರಾಲಯದಲ್ಲಿ 68ನೇ ವರ್ಧಂತ್ಯುತ್ಸವ ಜೂ. 13ರಂದು ಏರ್ಪಡಿಸಿದೆ. ಅಂದು ಸಂಜೆ 5.30ಕ್ಕೆ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚಿತ್ರಕಲಾ ಪದವಿ ಕೋರ್ಸ್ಗೆ ಅರ್ಜಿ
ಮೈಸೂರು: ಕಲಾನಿಕೇತನ ಚಿತ್ರ ಕಲಾ ಶಾಲೆಯು ದೃಶ್ಯಕಲಾ ತರಬೇತಿ ಹಾಗೂ ಪದವಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆ ಹಾಗೂ ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂ. 15 ಅರ್ಜಿ ಸಲ್ಲಿಸಲು ಕಡೇ ದಿನ. ಮಾಹಿತಿಗೆ ಮೊ. 8970031411 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ಕೆ.ಸಿ. ಮಹದೇವಶೆಟ್ಟಿ ತಿಳಿಸಿದ್ದಾರೆ.
ಶಶಿಕಲಾಗೆ ಡಾಕ್ಟರೇಟ್
ಮೈಸೂರು: ಡಾ. ಎಚ್.ಆರ್. ಉಮಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಶಶಿಕಲಾ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ನೀಡಿದೆ.
ಎಸ್ಬಿಐನಿಂದ ಸಾಧಕರಿಗೆ ಸನ್ಮಾನ
ಮೈಸೂರು: ಭಾರತೀಯ ಸ್ಟೇಟ್ ಬ್ಯಾಂಕ್ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿತು. ಎಸ್ಬಿಐನಲ್ಲಿ ಸಾಲ ಪಡೆದು ಅಭಿವೃದ್ಧಿ ಸಾಧಿಸಿದ 82 ಮಂದಿಯನ್ನು ಲಲಿತಮಹಲ್ ಹೊಟೇಲ್ನಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ಪಡೆದವರನ್ನು ಎಸ್ಬಿಐ ರಾಷ್ಟ್ರೀಯ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎ. ಕೃಷ್ಣಕುಮಾರ್ ಸನ್ಮಾನಿಸಿ ಗೌರವಿಸಿದರು. ಮುಖ್ಯ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರ, ಪ್ರಧಾನ ವ್ಯವಸ್ಥಾಪಕ ಕೆ.ಎಂ. ತ್ರಿವೇದಿ, ಜೀವನ್ ಶಾಹ್, ಗೀತಾ ನರಸಿಂಹನ್ ಇದ್ದರು. ಕಾರ್ಯಕ್ರಮ ಬಳಿಕ ಯಕ್ಷಪ್ರದರ್ಶನ ಮತ್ತು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂದರ್ಶನ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯ ಸಂಶೋಧನಾ ಯೋಜನೆಗೆ ಸಂಶೋಧನ ಸಹಾಯಕರನ್ನು ನೇಮಿಸಿಕೊಳ್ಳಲು ಜೂ. 12 ರಂದು ಬೆಳಗ್ಗೆ 10.30ಕ್ಕೆ ಎಂಬಿಎ ವಿಭಾಗದ ಅಧ್ಯಕ್ಷರ ಕೊಠಡಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮುಕ್ತ ವಿವಿ ವೆಬ್ ವಿಳಾಸ ಢಿಢಿಢಿ.್ಞಛ್ಠಟಿಛಡಿಛ್ಞಛಡಡಿಛಡಿಜ್ಟಠಜಟ್ಡಿಟ್ಝಿಢಜ್ಠಡ್ಝಡಿಣ.್ಝಟಿ ವೀಕ್ಷಿಸಬಹುದು. ಪೂರ್ಣ ಮಾಹಿತಿಗೆ ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ಸಿ. ಮಹದೇವಮೂರ್ತಿ ಅವರ ಮೊ. 9342121583 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಮೈಸೂರು: ಐದು ವರ್ಷಗಳ ಇಂಟಿಗ್ರೇಟೆಡ್ ಎಂಎಸ್ಸಿ ಮಾಲಿಕ್ಯುಲರ್ ಬಯಾಲಜಿ ಕೋರ್ಸ್ಗಾಗಿ ಯುವರಾಜ ಕಾಲೇಜು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕೋರ್ಸು ಉದ್ಯಮ ಹಾಗೂ ಸಂಶೋಧನಾ ರಂಗದಲ್ಲಿ ಉದ್ಯೋಗಾವಕಾಶ ಕೊಡಬಲ್ಲದು. ಪಿಯುಸಿ, ಸಮಾನ ವಿದ್ಯಾರ್ಹತೆಯುಳ್ಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಥವಾ ಕಾಲೇಜಿನ ವೆಬ್ಸೈಟ್ ಡಿಡಿಠಢಿಢಿಢಿ.ಣ್ಡಢಛ್ಠಛಞಛ್ಛ್ಟಟಟಜ್ಜಜ.್ಟ್ಠ್ಜ, ಡಿಡಿಠಣ್ಛಟಟಛಿ.ಢಿಜಛಿಡ.್ಛ್ಟಟ ನಿಂದಲೂ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಜೂ. 22 ರೊಳಗೆ ಪ್ರವೇಶ ಪರೀಕ್ಷೆಯ ಶುಲ್ಕ 400 ಡಿಡಿಯೊಂದಿಗೆ ಸಲ್ಲಿಸಬೇಕು. ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯು ಜೂ. 29ರಂದು ನಡೆಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 0821- 2419236, ಮೊ. 9448933006.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

