236 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ!
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 10
ಜಿಲ್ಲೆಯ 8 ಶಾಖಾ ಗ್ರಂಥಾಲಯ ಹೊರತುಪಡಿಸಿ ಗ್ರಾಮೀಣ ಪ್ರದೇಶದಲ್ಲಿನ ಗ್ರಂಥಾಲಯಗಳ ಪೈಕಿ ಕೇವಲ 6 ಕಡೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದಂತೆ 236 ಗ್ರಂಥಾಲಯಗಳಿಗೆ ಸ್ವಂತ ಸೂರಿಲ್ಲ.
ಜಿಲ್ಲೆಯಲ್ಲಿನ 242 ಗ್ರಂಥಾಲಯಗಳ ಪೈಕಿ ಆರು ಗ್ರಂಥಾಲಯಗಳಿಗೆ ಅಂದರೆ ತುರುಗನೂರು, ಮಾರ್ಬಳ್ಳಿ, ತಗಡೂರು ಮತ್ತು ಬ್ಯಾಡರಹಳ್ಳಿಯಲ್ಲಿ ಸ್ವಂತ ಕಟ್ಟಡ ಇದೆ. ಅಲ್ಲದೆ, ಹದಿನಾರು ಮತ್ತು ದೊಡ್ಡಮಾರಗೌಡನ ಹಳ್ಳಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೀಗೆ ಒಟ್ಟು 6 ಕಡೆ ಮಾತ್ರ ಸ್ವಂತ ಕಟ್ಟಡ ಹೊಂದಿದೆ.
ಹುಣಸೂರು ತಾಲೂಕು ಸಂತೇಮಾಳ ಮತ್ತು ಅಲ್ಲಿನ ಸರಸ್ವತಿಪುರಂ ಕೊಳಚೆ ಪ್ರದೇಶದ ಗ್ರಂಥಾಲಯ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಉಳಿದ 234 ಗ್ರಂಥಾಲಯಗಳು ಬಾಡಿಗೆರಹಿತವಾಗಿ ಗ್ರಾಮ ಪಂಚಾಯಿತಿ ನೀಡಿದ ಕಟ್ಟಡದಲ್ಲಿ ನಡೆಯುತ್ತಿದೆ. ಆದರೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರವು ಸ್ವಂತ ಕಟ್ಟಡಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದೆ.
ಪ್ರಸ್ತಾವನೆ: 16 ಗ್ರಾಮ ಪಂಚಾಯಿತಿಗಳು ಗ್ರಂಥಾಲಯ ನಿರ್ಮಾಣಕ್ಕಾಗಿ ನಿವೇಶನ ನೀಡಿವೆ. ಈ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಹದಿನಾರು ಮತ್ತು ದೊಡ್ಡಮಾರಗೌಡನಹಳ್ಳಿ ಗ್ರಂಥಾಲಯ ಕಟ್ಟಡವನ್ನು 50:50 ಮಾನದಂಡದಂತೆ ನಿರ್ಮಿಸಲಾಗುತ್ತಿದೆ. ಅಂದರೆ ಗ್ರಂಥಾಲಯದ ನಿವೇಶನದ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ಸೇರಿದ್ದು, ಗ್ರಂಥಾಲಯ ನಿರ್ಮಾಣ ವೆಚ್ಚದಲ್ಲಿ ಅರ್ಧ ಭಾಗವನ್ನು ಗ್ರಂಥಾಲಯ ಇಲಾಖೆಯು, ಉಳಿದ ಅರ್ಧ ಭಾಗವನ್ನು ಗ್ರಾಪಂ ನೀಡುವ ಒಪ್ಪಂದದಂತೆ ನಿರ್ಮಾಣಗೊಳ್ಳುತ್ತಿದೆ. ಅಂತೆಯೆ ಜಿಲ್ಲೆಯ ಇತರ ಕಡೆಗಳಲ್ಲಿಯೂ ಇದೆ ಮಾನದಂಡ ಅನುಸರಿಸಲು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸಿದ್ಧವಿದೆ. ಆದರೆ ಇದಕ್ಕೆ ಎಲ್ಲಾ ಗ್ರಾಮ ಪಂಚಾಯಿತಿಯು ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಮಾನದಂಡದಂತೆ ದೊಡ್ಡದಾಗಿಯೆ ಗ್ರಂಥಾಲಯ ಕಟ್ಟಡ ನಿರ್ಮಿಸಿ, ಈ ಪೈಕಿ ಒಂದು ಭಾಗವನ್ನು ಗ್ರಂಥಾಲಯಕ್ಕೂ ಮತ್ತೊಂದು ಭಾಗವನ್ನು ಗ್ರಂಥಾಲಯಕ್ಕೂ ಉಪಯೋಗಿಸಿಕೊಳ್ಳಬಹುದು ಎಂಬ ಸಲಹೆಯನ್ನು ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಬಿ. ಮಂಜುನಾಥ್ ನೀಡಿದ್ದಾರೆ.
ಒಂದು ವೇಳೆ ಎಲ್ಲಾ ಗ್ರಾಮ ಪಂಚಾಯಿತಿಗಳು ಈ ಮಾನದಂಡಕ್ಕೆ ಒಪ್ಪಿಗೆ ನೀಡುವುದಾದರೆ ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲೂ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗುವುದರಲ್ಲಿ ಸಂಶಯ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

