ಮೈಸೂರು ಕಂಪನಿಯಿಂದ ರು. 60 ಲಕ್ಷ ಪಂಗನಾಮ
ಹೂವಿನಹಡಗಲಿ: ಹೂವಿನಹಡಗಲಿಯಲ್ಲಿ ಮೈಸೂರು ಮೂಲದ ಗ್ರೀನ್ ಬಡ್ಸ್ ಆಗ್ರೋ ಫಾರಂ ಲಿ. ಎಂಬ ಕಂಪನಿ ಕೆಲವು ಉದ್ದೇಶಗಳನ್ನು ಜನರಿಗೆ ಬಿಂಬಿಸುವ ಮೂಲಕ ಇಲ್ಲಿನ ಸಾವಿರಾರು ಗ್ರಾಹಕರಿಗೆ ವಂಚಿಸಿ ಅಂದಾಜು 60 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದೆ.
ಪಟ್ಟಣದ ಹರಪ್ಪನಹಳ್ಳಿ ಮುಖ್ಯರಸ್ತೆ ಬದಿಯ ಪ್ರಕಾಶ ಕಾಂಪ್ಲೆಕ್ಸ್ನಲ್ಲಿ 3 ಮಳಿಗೆ ಬಾಡಿಗೆ ಪಡೆದು ಕಂಪನಿ ಕಚೇರಿಯನ್ನು 2010ರಲ್ಲಿ ತೆರೆದಿತ್ತು. ವೈಜ್ಞಾನಿಕ ಕೃಷಿ ಅರಣ್ಯ ಆಧಾರಿತ ಸಂಸ್ಥೆ ಎಂದು ಹೆಸರು ಹೇಳಿಕೊಂಡು ಡೈರಿ ಫಾರಂ, ಹಂದಿ, ಕುರಿ, ಕೋಳಿ ಸಾಕಣೆ. ಅರಣ್ಯ ಬೆಳೆಸುವಿಕೆ, ರೇಷ್ಮೆ ಹಾಗೂ ಔಷಧ ಸಸ್ಯಗಳು ಮತ್ತು ತೋಟಗಾರಿಕೆ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವುದು, ಜತೆಗೆ ಪರಿಸರ ಸಮತೋಲನ, ಸಾಮಾಜಿಕ ಅರಣ್ಯ ಅಭಿವೃದ್ಧಿ, ಶುಷ್ಕ ಭೂಮಿ ಹಸಿರಾಗಿಸುವುದು, ಉದ್ಯೋಗಾವಕಾಶ ಸೃಷ್ಟಿಸುವುದು, ಅಪಘಾತ ವಿಮೆ ಸೌಲಭ್ಯ ಸೇರಿದಂತೆ ನಾನಾ ಯೋಜನೆಗಳನ್ನು ಗ್ರಾಹಕರ ತಲೆಯಲ್ಲಿ ತುಂಬಿದ್ದಾರೆ.
ಇದಲ್ಲದೆ ಆತ್ಮಹತ್ಯೆ, ಸ್ವಾಭಾವಿಕ ಸಾವನ್ನಪ್ಪಿದರೆ ಕಟ್ಟಿದ ಹಣ ಹಾಗೂ 1 ವರ್ಷ ಪೂರ್ಣಗೊಂಡಿದ್ದರೆ ಅಂತಹ ಪಾಲಿಸಿದಾರರ ನಾಮಿನಿಯವರಿಗೆ ಶೇ.12ರಷ್ಟು ಬಡ್ಡಿ ಸೇರಿಸಿ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿದ ಬಡವರು ಸೇರಿದಂತೆ ಅನೇಕರು ಹಣವನ್ನು ಪಿಗ್ಮಿ ರೂಪದಲ್ಲಿ ಠೇವಣಿ ಮಾಡಿದ್ದರು.
ಬರೋಬ್ಬರಿ ರು. 58 ಲಕ್ಷ: ಸಾವಿರಾರು ಗ್ರಾಹಕರಿಂದ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ, ಸೇರಿದಂತೆ ಹಣವನ್ನು ಪ್ರತಿದಿನ, ತಿಂಗಳು ಕಂತಿನಂತೆ ಪಿಗ್ಮಿ ರೂಪದಲ್ಲಿ ಕಂಪನಿ ಪಾವತಿಸಿಕೊಂಡಿದೆ.
ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಿಗಳು, ವರ್ತಕರು ಸೇರಿದಂತೆ ಲಕ್ಷಾಂತರ ಬಂಡವಾಳ ತೊಡಗಿಸಿದ್ದಾರೆ. ಈಗ ಅದೆಲ್ಲದಕ್ಕೂ ಪಂಗನಾಮ ಹಾಕಿದ್ದಾರೆ. ಒಂದು ಅಂದಾಜಿನ ಪ್ರಕಾರ ಹೂವಿನಹಡಗಲಿ ತಾಲೂಕಿನಲ್ಲೇ ರು. 58 ಲಕ್ಷಕ್ಕೆ ಪಂಗನಾಮ ಹಾಕಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

