ಕೆಳವರ್ಗದವರಿಗೆ ಆಸರೆ ನೀಡಿದ ಬುದ್ಧ, ಬಸವಣ್ಣ
ಕ.ಪ್ರ. ವಾರ್ತೆ ಮೈಸೂರು ಜೂ.16
ಬುದ್ಧ ಹಾಗೂ ಬಸವಣ್ಣ ಅವರು ಕೆಳವರ್ಗದವರಿಗೆ ಜೀವ ತುಂಬಿ ಆಶ್ರಯ ನೀಡಿದರು ಎಂದು ಬಸವ ಕೇಂದ್ರದ ಶ್ರೀ ಬಸವಲಿಂಗ ಶರಣರು ಹೇಳಿದರು.
ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆಯಿಂದ ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬುದ್ಧ ಮತ್ತು ಸಂವಿಧಾನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಭರಾಟೆಗೆ ಸಿಲುಕಿ ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ, ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿವೆ. ಹಿಂದೆ ಇಂತಹದ್ದೆ ಸಂದರ್ಭದಲ್ಲಿ ಬುದ್ಧ ಜನ್ಮ ತಳೆದ. ಅಂದು ಯಾವುದೇ ಜಾತಿ ಕಟ್ಟುಪಾಡುಗೆ ಜೋತು ಬೀಳದೆ ಕೆಳವರ್ಗದವರಿಗೆ ದಾರಿದೀಪವಾದರು. ಅವರಂತೆ ಕ್ರಾಂತಿಕಾರಿ ಬಸವಣ್ಣ ಕೂಡ ಮೇಲ್ವರ್ಗದ ಆಡಂಬರ ಮೂಢ ನಂಬಿಕೆಗಳಿಗೆ ಕಟ್ಟು ಬೀಳಲಿಲ್ಲ ಎಂದರು.
ಅಂಬೇಡ್ಕರ್ ಅವರ ಸಂವಿಧಾನದ ಮೂಲ ಆಶಯಗಳನ್ನು ಇಂದಿಗೂ ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಬಡವರು, ಕೊಳಚೆ ಪ್ರದೇಶದ ನಿವಾಸಿಗಳ ಮಕ್ಕಳಿಗೆ ಊಟ ವಸತಿಯ ಸಮೇತ ಉಚಿತ ಶಿಕ್ಷಣ ನೀಡಬೇಕೆಂಬ ಅಂಬೇಡ್ಕರ್ ಅವರ ಆಸೆ ಇದೂವರೆಗೆ ಈಡೇರಿಲ್ಲ. ಆ ಆಸೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಕೂಡ ಇಂದಿನ ರಾಜಕಾರಣಿಗಳಲ್ಲಿ ಮಾಯವಾಗಿದೆ ಎಂದು ವಿಷಾದಿಸಿದರು.
ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆಯ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ, ಉಪಾಧ್ಯಕ್ಷ ಸೋಮಯ್ಯ, ಕಾರ್ಯದರ್ಶಿ ಮಲ್ಲೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

