ಮೈಸೂರು

ಸುದ್ದಿ ಸಂಕ್ಷೇಪ

Published On :

ಗಾಣಿಗ ಸಂಘಕ್ಕೆ ನೇಮಕ
ಟಿ. ನರಸೀಪುರ: ಮೈಸೂರು ಜಿಲ್ಲಾ ಗಾಣಿಗ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನ ಕಸಬಾ ಹೋಬಳಿಯ ಹಿಟ್ಟುವಳ್ಳಿ ಗ್ರಾಮದ ಶ್ರೀಮೂರ್ತಿ ಎಚ್.ಎಂ. ಗಾಣಿಗ ಅವರನ್ನು ನೇಮಕ ಮಾಡಲಾಗಿದೆ.
ವೈದ್ಯರಿಲ್ಲದೆ ರೋಗಿಗಳ ಪರದಾಟ
ಟಿ. ನರಸೀಪುರ: ವೈದ್ಯರು ಮುಷ್ಕರಕ್ಕಾಗಿ ಮೈಸೂರಿಗೆ ತೆರಳಿದ್ದರಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಮುಷ್ಕರದಲ್ಲಿ ವೈದ್ಯರು ಭಾಗವಹಿಸಿದ್ದರಿಂದ ಪಟ್ಟಣದ ಹೊರ ರೋಗಿಗಳ ವಿಭಾಗ ಸಂಪೂರ್ಣ ಮುಚ್ಚಿತ್ತು. ನೂರಾರು ಮಂದಿ ರೋಗಿಗಳು ಚಿಕಿತ್ಸೆ ಸಿಗದೆ ಹಿಂದಿರುಗಿದರು. ಆಸ್ಪತ್ರೆಯಲ್ಲಿದ್ದ ಒಬ್ಬರು ವೈದ್ಯರು ಮಾತ್ರ ತುರ್ತು ಚಿಕಿತ್ಸೆ ಪ್ರಕರಣಗಳನ್ನು ಮಾತ್ರ ನಿರ್ವಹಿಸಿದರು.
ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
ಟಿ. ನರಸೀಪುರ: ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಎಸ್. ದೊಡ್ಡಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಾಜೇ ಅರಸ್(45) ಮೃತಪಟ್ಟವರು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರಾಜೇಅರಸ್ ಅವರ ಮೇಲೆ ಅದೇ ಗ್ರಾಮದ ಪ್ರಸನ್ನರಾಜೇ ಅರಸ್, ಸುಬ್ಬರಾಜೇ ಅರಸ್ ಮತ್ತು ಇತರರು ಹಲ್ಲೆ ನಡೆಸಿದ್ದಾಗಿ ರಾಜೇಅರಸ್ ಅವರ ಪತ್ನಿ ಇಂದ್ರಮ್ಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೂ.18ರ ಸಂಜೆ ಹಾಲು ಉತ್ಪಾದಕರ ಸಂಘಕ್ಕೆ ರಾಜೇಅರಸ್ ಹಾಲು ಹಾಕುವಾಗ ಹಿಂದೆ ನಿಂತಿದ್ದ ಸುಬ್ಬರಾಜೇಅರಸ್ ಅವರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಾಲಿನ ಕ್ಯಾನ್ ಬದಲಿಸಲಾಗಿದೆ ಎಂದು ಆರೋಪಿಸಿ ಜಗಳ ಮಾಡಿದ್ದಾರೆ. ಅಲ್ಲದೆ ಅಂದು ರಾತ್ರಿ 2 ಗಂಟೆ ಸುಮಾರಿನಲ್ಲಿ ಸುಬ್ಬರಾಜೇ ಅರಸ್ ಅವರ ಪುತ್ರ ಪ್ರಸನ್ನರಾಜೇ ಅರಸ್ ಮುಂತಾದವರು ತೀವ್ರವಾಗಿ ಗಾಯಗೊಳಿಸಿದ್ದರು. ಕೂಡಲೇ ಅವರನ್ನು ಚಿದರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ ರಾಜೇಅರಸ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.