ಮೈಸೂರು

ಕೊನೆಗೂ ನಡೆದ ಬೇಗೂರು ಗ್ರಾಮಸಭೆ

Published On :

ಗುಂಡ್ಲುಪೇಟೆ: ತಾಲೂಕಿನ ಬೇಗೂರಿನ ಗ್ರಾಪಂ ಕಾರಣ ನೀಡದೆ ಮುಂದೂಡಿದ್ದ ವಾರ್ಡ್ ಹಾಗೂ ಗ್ರಾಮ ಸಭೆಯನ್ನು ಬುಧವಾರ ನಡೆಸಲಾಯಿತು.
ಬೇಗೂರು ಗ್ರಾಪಂ ಜೂ. 6ರಂದು ವಾರ್ಡ್ ಸಭೆ, ಜೂ.7ರಂದು ಗ್ರಾಮ ಸಭೆ ನಿಗದಿಪಡಿಸಿದ್ದರು. ಕರಪತ್ರ ಮಾಡಿಸಿ ಸಭೆಗಳನ್ನು ಸಾರ್ವಜನಿಕರ ಗಮನಕ್ಕೆ ತರದೇ ಮುಂದೂಡಿದ್ದರು. ಇದರೆ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಎಂ. ಕಮ್ಮಾರ್ ಸಭೆಗಳನ್ನು ಕರೆಯಲು ಆದೇಶ ಹೊರಡಿಸಿ, ಪಿಡಿಒ ಹಾಗೂ ಕಾರ್ಯದರ್ಶಿಗೆ ಸಭೆ ನಡೆಯದ ಬಗ್ಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದ್ದರು. ತಾಪಂ ಇಒ ಸೂಚನೆ ಮೇರೆಗೆ ಬುಧವಾರ ಗ್ರಾಪಂ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಗ್ರಾಪಂ ಪಿಡಿಒ ಗೈರಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ 1, 2, 3 ವಾರ್ಡುಗಳಲ್ಲಿ ಪ್ರತ್ಯೇಕವಾಗಿ ವಾರ್ಡ್ ಸಭೆಯನ್ನು ನಡೆಸಲಾಯಿತು. ಸಾರ್ವಜನಿಕರು ಅಷ್ಟಾಗಿ ಭಾಗವಹಿಸಿರಲಿಲ್ಲ. ಬೇಗೂರು ಕ್ಷೇತ್ರದ ತಾಪಂ ಸದಸ್ಯ ಮಲ್ಲಿದಾಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಪಂ ಸುಂಕ ವಸೂಲಿ ಮಾಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು. ಬೇಗೂರಿನ ಬಳಿಯಿರುವ ಸ.ನಂ.104ರಲ್ಲಿ ಸರ್ಕಾರಿ ಭೂಮಿಯಿದ್ದು, ಅದರಲ್ಲಿ ಗ್ರಾಮದ ವಸತಿರಹಿತರಿಗೆ ನಿವೇಶನ ವಿತರಿಸುವ ಸಲಹೆ ನೀಡಿದರು. ಗ್ರಾಮದ ಸ್ವಚ್ಛತೆ ಹಾಗು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಎಲ್ಲ ವಾರ್ಡ್‌ನಲ್ಲಿಯೂ ಸುವರ್ಣ ಗ್ರಾಮೋದಯ ಹಾಗೂ 13ನೇ ಹಣಕಾಸಿನ ಯೋಜನೆ, ಅಯವ್ಯಯ ಹಾಗೂ ವಾರ್ಡಿನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರಕ್ಕೆ ಸಭೆಯು ಒಪ್ಪಿಗೆ ನೀಡಿತು. ಬೇಗೂರಿನ ಗ್ರಾಪಂನ ಎಲ್ಲ ಸದಸ್ಯರು ಭಾಗವಹಿಸಿ ಗ್ರಾಮದ ಬಗ್ಗೆ ಸಲಹೆ ಸೂಚನೆ ನೀಡಿದರು. ಗ್ರಾಪಂ ಕಾರ್ಯದರ್ಶಿ ಎಸ್.ರಂಗಸ್ವಾಮಿ, ಬಿಲ್ ಕಲೆಕ್ಟರ್ ಸತೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.