ಕಬಿನಿಯಿಂದ 35 ಸಾವಿರ ಕ್ಯುಸೆಕ್ ನೀರು ಬಿಡುಗಡೆ
ಕ.ಪ್ರ.ವಾರ್ತೆ ಸುತ್ತೂರು ಜೂ. 28
ಕಬಿನಿ ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರು ಬಿಟ್ಟ ಪರಿಣಾಮ, ನೂರಾರು ಎಕರೆಯಲ್ಲಿ ರೈತರು ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಸಮೀಪದ ಸುತ್ತೂರು, ಬಿಳುಗಲಿ, ಜೀಮಾರಳ್ಳಿ, ತಾಯೂರು ಇನ್ನು ಮುಂತಾದ ಗ್ರಾಮಗಳಿಗೆ ಸೇರಿದ ನೂರಾರು ಎಕರೆ ಬೆಳೆಗಳು ಮುಳುಗಿದೆ. ಕಳೆದ ತಿಂಗಳು ಬಿದ್ದ ಸ್ವಲ್ಪ ಮಳೆಯಿಂದಾಗಿ ರೈತರು ಸಾಲ- ಸೋಲ ಮಾಡಿ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ನೀಡುವಂತೆ ರೈತ ಮುಖಂಡರಾದ ಲಿಂಗರಾಜು, ಮಹದೇವು, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ನಾಗರಾಜು, ಮಹೇಶ, ಜಗದೀಶ್, ಶಿವಶಂಕರ್ ಒತ್ತಾಯಿಸಿದ್ದಾರೆ.
ಸಹಕಾರ ಡಿಪ್ಲೊಮಾ ಕೋರ್ಸಿಗೆ ಅರ್ಜಿ
ಮೈಸೂರು: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ- ಆಪರೇಟಿವ್ ಮ್ಯಾನೇಜ್ಮೆಂಟ್ನಿಂದ ಸಹಕಾರ ಡಿಪ್ಲೊಮಾ ಕೋರ್ಸಿಗೆ ಅರ್ಜಿ ಆಹ್ವಾನಿಸಲಾಗಿದೆ. 34 ವಾರಗಳ ಡಿಪ್ಲೊಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ ಜು. 15 ರಿಂದ ಆರಂಭವಾಗಲಿದ್ದು,ತಬೇತಿಯು ಸಹಕಾರ ಸಂಘ, ಸಂಸ್ಥೆ, ಬ್ಯಾಂಕುಗಳಲ್ಲಿ ಉದ್ಯೋಗ ಬಯಸುವವರಿಗೆ ಮತ್ತು ವೃತ್ತಿ ನಿರತ ಸಿಬ್ಬಂದಿಗೆ ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಜು. 3 ರೊಳಗೆ ಅರ್ಜಿ ಸಲ್ಲಿಸಬಹುದು. ದೂ. 0821- 2520563, ಮೊ. 9449075746 ಸಂಪರ್ಕಿಸಬಹುದು.
ಮುಸುಕಿನ ಜೋಳ ರೋಗ ನಿಯಂತ್ರಣಕ್ಕೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಜೂ. 29ರಿಂದ ಜು. 2 ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರುವಿನಿಂದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ಮುಸುಕಿನ ಜೋಳಕ್ಕೆ ಬೂದಿ ರೋಗ ತಗುಲಿದ್ದರೆ ರಿಡೋಮಿಲ್ 3 ಗ್ರಾಂ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸುವುದು. ಮೆಣಸಿನಕಾಯಿಗೆ ಥ್ರಿಪ್ಸ್ ಮತ್ತು ನುಸಿ ರೋಗ ತಗುಲಿದ್ದರೆ ರೋಗರ್ 1.7 ಮಿಲೀ. ಮತ್ತು ಡೈಕೋಪಾತ್ 2.5 ಮಿಲೀ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸುವುದು. ಹಾಗೆ ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟ ಸಸ್ಯ ಹೇನು ಕಂಡುಬಂದಲ್ಲಿ ಬೇವಿನ ಎಣ್ಣೆ 3 ಮಿಲೀ ಅಥವಾ ಥೈವಿಥೋಯೇಟ್ 30 ಇಸಿ, 1.7 ಮಿಲೀ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ.
ಅಂಗನವಾಡಿ ನೌಕರರ ಆಯ್ಕೆ ಪಟ್ಟಿ ಪ್ರಕಟ
ಟಿ. ನರಸೀಪುರ: ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಪ್ರಕ್ರಿಯೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದು, ಆಯ್ಕೆ ಪಟ್ಟಿಯನ್ನು ಟಿ. ನರಸೀಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಈ ಆಯ್ಕೆ ಕುರಿತು ಏನಾದರೂ ಆಕ್ಷೇಪಣೆ ಇದ್ದಲ್ಲಿ ಜು. 2 ರೊಳಗೆ ಸೂಕ್ತ ದಾಖಲಾತಿಯೊಂದಿಗೆ ಲಿಖಿತವಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಲು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

