ನಿರ್ಗತಿಕ ಮಕ್ಕಳ ಕುಟೀರಕ್ಕೆ ಅರ್ಜಿ
ನಂಜನಗೂಡು: ತಾಲೂಕಿನ ಹುಲ್ಲಹಳ್ಳಿಯಲ್ಲಿರುವ ಜೆಎಸ್ಎಸ್ ನಿರ್ಗತಿಕ ಮಕ್ಕಳ ಕುಟೀರಕ್ಕೆ 2013- 14ನೇ ಸಾಲಿಗೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ತಂದೆ- ತಾಯಿ ಇಬ್ಬರೂ ಇಲ್ಲದಿರುವ, ತಂದೆ ಅಥವಾ ತಾಯಿ ಇಲ್ಲದಿರುವ, ಇಬ್ಬರು ಇದ್ದು ನೋಡಿಕೊಳ್ಳಲು ಸಾಧ್ಯವಾಗದ, ಮಾರಕ ರೋಗಗಳಿಂದ ನರಳುತ್ತಿರುವಂತಹವರ ಮಕ್ಕಳಾದವರು, ಬಡ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ದಾಖಲಾದವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಆಸಕ್ತರು ಮೇ 31 ರೊಳಗೆ ಅರ್ಜಿ ಸಲ್ಲಿಸುವಂತೆ ಉಪ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ ತಿಳಿಸಿದ್ದಾರೆ.
ತೋಟಗಾರಿಕೆ ತರಬೇತಿಗೆ ಆಹ್ವಾನ
ಮೈಸೂರು: ತೋಟಗಾರಿಕೆ ಇಲಾಖೆಯಿಂದ 2013- 14ನೇ ಸಾಲಿನ ತೋಟಗಾರಿಕೆ ತರಬೇತಿಗಾಗಿ ರೈತ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ. ಹತ್ತು ತಿಂಗಳ ಈ ತರಬೇತಿಯು 2013ರ ಜೂ. 1 ರಿಂದ 2014ರ ಮಾ. 31ರವರೆಗೆ ನಡೆಯಲಿದೆ. ತರಬೇತಿ ಪಡೆಯಲು ಇಚ್ಫಿಸುವ ಅಭ್ಯರ್ಥಿಗಳ ತಂದೆ, ತಾಯಿ, ಪೋಷಕರ ಹೆಸರಿನಲ್ಲಿ ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಮೇ 28 ರಂದು ಬೆಳಗ್ಗೆ 11ಕ್ಕೆ ಮೈಸೂರು ಕರ್ಜನ್ ಪಾರ್ಕ್ನಲ್ಲಿರುವ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತ ರೈತ ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆಯುವಂತೆ ರಾಜ್ಯ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಎಸ್. ರಾಜು ಕೋರಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ
ಮೈಸೂರು: ಮಹಾರಾಜ ಕಾಲೇಜು ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ ಎನ್. ದಾಕ್ಷಾಯಿಣಿ (20) ನಾಪತ್ತೆಯಾಗಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ದೇವೇಗೌಡನಕೊಪ್ಪಲು ನಿವಾಸಿಯಾದ ದಾಕ್ಷಾಯಿಣಿ, ಮಹಾರಾಜ ದೈಹಿಕ ಶಿಕ್ಷಣ ಕಾಲೇಜು ಮಹಿಳಾ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದರು. ಮೇ 6 ರಂದು ಊರಿಗೆ ಹೋಗಲು 2 ದಿನ ರಜೆ ಚೀಟಿ ಬರೆದಿಟ್ಟು ದಾಕ್ಷಾಯಿಣಿ ಹೋಗಿದ್ದಾರೆ. ಅದೇ ದಿನ ದಾಕ್ಷಾಯಿಣಿ ತಾಯಿ ಮತ್ತು ಸಹೋದರ ಆಕೆಯನ್ನು ನೋಡಲು ಹಾಸ್ಟೆಲ್ಗೆ ಬಂದಿದ್ದರು. ಹೀಗಾಗಿ ಕಾಣೆಯಾಗಿರುವ ದಾಕ್ಷಾಯಿಣಿಯನ್ನು ಪತ್ತೆ ಮಾಡಿಕೊಡುವಂತೆ ವಿದ್ಯಾರ್ಥಿನಿಲಯದ ಸಲಹೆಗಾರರಾದ ಡಾ.ಎಸ್. ಚಂದ್ರಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಕಾಣೆಯಾಗಿರುವ ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

