ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ಕುವೆಂಪುನಗರದ ಉಪವಿಭಾಗದ ನಿವೇದಿತ ಘಟಕದ ವ್ಯಾಪ್ತಿಗೆ ಬರುವ 11 ಕೆವಿ, ಆರ್.ಕೆ. ನಗರ ಎಂಯುಎಸ್ಎಸ್ನಿಂದ ಹೊರಡುವ ಶಾರದದೇವಿ ಫೀಡರ್ನಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ, ಮೇ 18ರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.
ಪ್ರದೇಶಗಳು: ಶಾರದದೇವಿನಗರ, ನಿವೇದಿತ ನಗರ, ಆನಂದನಗರ, ಆರ್.ಕೆ. ನಗರ ಎ ಮತ್ತು ಬಿ ಬ್ಲಾಕ್, ಜನತಾನಗರ, ಟಿ.ಕೆ. ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ವ್ಯಕ್ತಿ ನಾಪತ್ತೆ
ಮೈಸೂರು: ಸತ್ಯನಗರ ನಿವಾಸಿ ಮೆಹಬೂಬ್ ಶರೀಫ್ ಎಂಬವರ ಪುತ್ರ ಖದೀರ್ ಶರೀಫ್ (30) ನಾಪತ್ತೆಯಾಗಿದ್ದಾರೆ. ಬೀಡಿ ಕಾಲೋನಿ ನಿವಾಸಿ ರಫೀಕ್ ಎಂಬವ ಪುತ್ರಿ ರೇಷ್ಮಾಳನ್ನು 3 ವರ್ಷಗಳ ಹಿಂದೆ ವಾಚ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಖದೀರ್ ವಿವಾಹವಾಗಿದ್ದು, ದಂಪತಿ ನಡುವೆ ಮನಸ್ಥಾಪ ಉಂಟಾಗಿ ಮನೆ ಬಿಟ್ಟು ಹೋಗಿದ್ದಾನೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418309 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.
ಫೇಲಾದವರಿಗೆ ತರಬೇತಿ ಶಿಬಿರ
ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರಿಮಲ್ಲಪ್ಪ ಸಂಜೆ ಪದವಿಪೂರ್ವ ಕಾಲೇಜು ತರಬೇತಿ ಶಿಬಿರ ಏರ್ಪಡಿಸಿದೆ. ಜೂನ್ನಲ್ಲಿ ನಡೆಯುವ ಪುನರಾವರ್ತಿತ ಪರೀಕ್ಷೆಗೆ ವಿಶೇಷ ತರಬೇತಿ ಏರ್ಪಡಿಸಲಾಗಿದ್ದು, ಮೇ 20 ರಿಂದ ತರಗತಿ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ. 9845176476.
ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು: ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಕಾಲೇಜಿನಲ್ಲಿ 2013- 14ನೇ ಸಾಲಿನ ಪಿಸಿಎಂಬಿ, ಪಿಸಿಎಂಸಿ ಸಂಯೋಜನೆಯ ಪ್ರಥಮ ಪಿಯುಸಿ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ, ಎರಡನೇ ಆದ್ಯತೆಯನ್ನು ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.
ಬುದ್ಧಿಮಾಂದ್ಯ ವ್ಯಕ್ತಿ ನಾಪತ್ತೆ
ಮೈಸೂರು: ಗಂಗೋತ್ರಿ ಬಡಾವಣೆ ನಿವಾಸಿ ಸುರೇಶ್ಬಾಬು ಎಂ. ಕೆಂಬಾವಿ ಎಂಬವರ ಬುದ್ಧಿಮಾಂದ್ಯ ಸಹೋದರ ಜಗನ್ನಾಥ್ ಅ. ಜಗ್ಗ (44) ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಚಹರೆ- 4.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಎಎಸ್ಐ ಎಸ್. ನಾಗರಾಜನಾಯಕ ಕೋರಿದ್ದಾರೆ.
ರಾಜ್ಯ ಮಟ್ಟದ ಟಿಟಿ ಪಂದ್ಯಾವಳಿ
ಮೈಸೂರು: ಮೈಸೂರು ಟೇಬಲ್ ಟೆನ್ನಿಸ್ ಟ್ರೈನಿಂಗ್ ಸೆಂಟರ್ 2013ನೇ ಸಾಲಿನ ಶ್ರೀರಾಮು ಸಂಸ್ಮರಣ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಮೇ 30 ರಿಂದ ನಾಲ್ಕು ದಿನಗಳ ಕಾಲ ಆಯೋಜಿಸಿದೆ.ಎನ್ಐಇ ಕಾಲೇಜು ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 30, 31, ಜೂ. 1 ಮತ್ತು 2 ರಂದು ಈ ಪಂದ್ಯಾವಳಿ ನಡೆಸಲಿದೆ. ಕೆಡಿಟ್ ಬಾಲಕರು ಮತ್ತು ಬಾಲಕಿಯರು, ಸಬ್ ಜ್ಯೂನಿಯರ್ ಬಾಲಕರು ಮತ್ತು ಬಾಲಕಿಯರು, ಪುರುಷರು ಮತ್ತು ಮಹಿಳೆಯರು, ನಾನ್ ಮೆಡಲಿಸ್ಟ್ ಸಿಂಗಲ್ಸ್ ಆ್ಯಂಡ್ ಡಬಲ್ಸ್, ಪುರುಷರ ಡಬಲ್ಸ್ ಮತ್ತು ಹಿರಿಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯ ನಡೆಯಲಿದೆ.ಆಸಕ್ತರು ಮೇ 26 ರೊಳಗೆ ತೀರ್ಪುಗಾರರಾದ ಕೆ. ರಾಮಸ್ವಾಮಿ ಅವರ ಮೊ. 9483960782 ಅಥವಾ ಇ-ಮೇಲ್ kramaswamy30@gmail.comಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು: ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಕಾಲೇಜಿನಲ್ಲಿ 2013- 14ನೇ ಸಾಲಿನ ಪಿಸಿಎಂಬಿ, ಪಿಸಿಎಂಸಿ ಸಂಯೋಜನೆಯ ಪ್ರಥಮ ಪಿಯುಸಿ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ, ಎರಡನೇ ಆದ್ಯತೆಯನ್ನು ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.
ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 16
ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಮೂವರು ಆಟಗಾರರ ವಿರುದ್ಧ ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಗುರುವಾರ ಸಂಜೆ ಪ್ರತಿಭಟಿಸಿದರು.
ರಾಜಸ್ತಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಂಡಿಲಾ ಮತ್ತು ಅಂಕಿತ್ ಚವಾನ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಈ ಫಿಕ್ಸಿಂಗ್ನಲ್ಲಿ ಆಟಗಾರರು ಸೇರಿದಂತೆ ಇತರರು ಪಾಲ್ಗೊಂಡಿದ್ದು, ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕ್ರಿಕೆಟಿಗ ಶ್ರೀಶಾಂತ್ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಲೋಕೇಶ್ ಪಿಯಾ, ಶಿವಕುಮಾರ್, ರವಿ, ಸುರೇಶ್ ಮೊದಲಾದವರು ಇದ್ದರು.
ಕನ್ನಡ ವಿದ್ಯಾ ಶಾರದೆ, ಕನ್ನಡರತ್ನ ಪ್ರಶಸ್ತಿಗೆ ಅರ್ಜಿ
ಕ.ಪ್ರ.ವಾರ್ತೆ ಮೈಸೂರು ಮೇ 16
ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾ ಶಾರದೆ ಹಾಗೂ ಕನ್ನಡರತ್ನ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
ಈ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸಿರಿಕನ್ನಡ ಕುವರ ಹಾಗೂ ಸಿರಿಕನ್ನಡ ಕುವರಿ ಎಂಬ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಿದೆ ಎಂದು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಜಿ.ಪಿ. ಸಿದ್ದೇಗೌಡ ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ಪ್ರೊ. ದೇಜಗೌ ಪ್ರಶಸ್ತಿ ನೀಡಿ ಗೌರವಿಸುವರು. ಆಸಕ್ತ ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಶಾಲಾ ಪ್ರವೇಶ ಪತ್ರದ ಪ್ರತಿ, 2 ಭಾವಚಿತ್ರ ಮತ್ತು ವಿಳಾಸ ಹಾಗೂ ದೂರವಾಣಿಯೊಂದಿಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗೆ ಮೊ. 9481815103 ಅಥವಾ 9945701003 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಬೇಕಾದ ವಿಳಾಸ, ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ, 17,1, 4ನೇ ಮೇನ್, 3 ನೇ ಕ್ರಾಸ್, ವಿವಿ ಮೊಹಲ್ಲಾ, ಮೈಸೂರು- 2 ಅಥವಾ ಇ ಮೇಲ್ mukhya.prana.yaho.in ಸಂಪರ್ಕಿಸಬಹುದು.
ಅಣ್ಣಾ ಹಜಾರೆ ಪಾದಯಾತ್ರೆ!
ಕ.ಪ್ರ.ವಾರ್ತೆ ಮೈಸೂರು ಮೇ 16
ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿಯ ಸಾಮಾಜಿಕ ಕಾರ್ಯಕರ್ತ ಜಿ. ನಾಗೇಂದ್ರ ಶರ್ಮ ಅವರು ಅಣ್ಣಾ ಹಜಾರೆ ಅವರ ವೇಷ ಧರಿಸಿ ಏಕಾಂಗಿಯಾಗಿ ಗುರುವಾರ ಪಾದಯಾತ್ರೆ ಮೂಲಕ ಪ್ರತಿಭಟಿಸಿದರು.
ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಅವರು, ಭ್ರಷ್ಟಾಚಾರ ಅಳಿಸಿ, ದೇಶ ಉಳಿಸಿ ಎಂದು ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಕೇಂದ್ರ ಯುಪಿಎ ಸರ್ಕಾರವು ಹಲವು ಹಗರಣಗಳಲ್ಲಿ ಸಿಲುಕಿದೆ. ಪ್ರಧಾನಮಂತ್ರಿ ಡಾ. ಮನ್ಮೋಹನ್ಸಿಂಗ್ ಅವರು ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತ್ಯೇಕ ಅಪಘಾತ: ಮೂವರು ಸಾವು
ಮೈಸೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.ಬೋಗಾದಿ ನಿವಾಸಿ ಭ್ರಮರಾಂಬ (44) ಮತ್ತು ಉದಯಗಿರಿ ಕೆಇಬಿ ಕಾಲೋನಿ ನಿವಾಸಿ ಮೊಹಮ್ಮದ್ ತಂಜೀಬ್ (26) ಮೃತಪಟ್ಟವರು.ಭ್ರಮರಾಂಬ ಅವರು ದ್ವಿಚಕ್ರ ವಾಹನದಲ್ಲಿ ಬೋಗಾದಿ ರಸ್ತೆ ಹರ್ಷ ಬಾರ್ ಬಳಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುವೆಂಪುನಗರ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ರೇಸ್ಕೋರ್ಸ್ ರಸ್ತೆಯಲ್ಲಿ ಮೊಹಮ್ಮದ್ ತಂಜೀಬ್ ಎಂಬವರು ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಲಷ್ಕರ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್ನಿಂದ ಬಿದ್ದು ಸಾವು
ಎಚ್.ಡಿ. ಕೋಟೆ: ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ತಾಲೂಕಿನ ಮಾನಂದವಾಡಿ ರಸ್ತೆಯ ಬೊಪ್ಪನಹಳ್ಳಿ ಸಮೀಪ ಜರುಗಿದೆ. ತಾಲೂಕಿನ ಮಳಿಯೂರು ಕಾವಲ್ ಗ್ರಾಮದ ಬೋರೇಗೌಡರ ಪುತ್ರ ಪುಟ್ಟರಾಜು (37) ಮೃತಪಟ್ಟವರು. ಬುಧವಾರ ರಾತ್ರಿ ಘಟನೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
7.50 ಲಕ್ಷ ಮೌಲ್ಯದ ವಸ್ತು ಕಳವು
ಮೈಸೂರು: ಮನೆ ಬಾಗಿಲು ಮುರಿದು 7.50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಕಳವು ಮಾಡಿರುವ ಘಟನೆ ಕೆ.ಆರ್. ಮೊಹಲ್ಲಾ ತೊಗರಿಬೀದಿಯಲ್ಲಿ ನಡೆದಿದೆ. ಸೆಸ್ಕ್ ಕುವೆಂಪುನಗರ ಕಚೇರಿಯ ಕಿರಿಯ ಎಂಜಿನಿಯರ್ ರಮೇಶ್ ಮತ್ತು ಕುಟುಂಬದವರು ಮಂಗಳವಾರ ಬೆಂಗಳೂರಿಗೆ ಹೋಗಿದ್ದರು. ಗುರುವಾರ ಬೆಳಗ್ಗೆ ಅವರ ಮನೆ ಬಾಗಿಲು ಮುರಿದಿತ್ತು. ಅಕ್ಕಪಕ್ಕ ನಿವಾಸಿಗಳು ಪೊಲೀಸರು ಮತ್ತು ರಮೇಶ್ ಅವರಿಗೆ ವಿಷಯ ತಿಳಿಸಿದ್ದಾರೆ. ಮನೆಯಲ್ಲಿದ್ದ 1.50 ಕೆಜಿ ಬೆಳ್ಳಿ, 395 ಗ್ರಾಂ. ಚಿನ್ನಾಭರಣ, 50 ಸಾವಿರ ನಗದು ಸೇರಿದಂತೆ 7.50 ಲಕ್ಷ ಮೌಲ್ಯದ ಮಾಲು ಕಳವಾಗಿದೆ. ಈ ಸಂಬಂಧ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಸಿ.ಡಿ. ಜಗದೀಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬುದ್ಧಿಮಾಂದ್ಯ ವ್ಯಕ್ತಿ ನಾಪತ್ತೆ
ಮೈಸೂರು: ಗಂಗೋತ್ರಿ ಬಡಾವಣೆ ನಿವಾಸಿ ಸುರೇಶ್ಬಾಬು ಎಂ. ಕೆಂಬಾವಿ ಎಂಬವರ ಬುದ್ಧಿಮಾಂದ್ಯ ಸಹೋದರ ಜಗನ್ನಾಥ್ ಅ. ಜಗ್ಗ (44) ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಚಹರೆ- 4.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಎಎಸ್ಐ ಎಸ್. ನಾಗರಾಜನಾಯಕ ಕೋರಿದ್ದಾರೆ.
ರಾಜ್ಯ ಮಟ್ಟದ ಟಿಟಿ ಪಂದ್ಯಾವಳಿ
ಮೈಸೂರು: ಮೈಸೂರು ಟೇಬಲ್ ಟೆನ್ನಿಸ್ ಟ್ರೈನಿಂಗ್ ಸೆಂಟರ್ 2013ನೇ ಸಾಲಿನ ಶ್ರೀರಾಮು ಸಂಸ್ಮರಣ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಮೇ 30 ರಿಂದ ನಾಲ್ಕು ದಿನಗಳ ಕಾಲ ಆಯೋಜಿಸಿದೆ.ಎನ್ಐಇ ಕಾಲೇಜು ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 30, 31, ಜೂ. 1 ಮತ್ತು 2 ರಂದು ಈ ಪಂದ್ಯಾವಳಿ ನಡೆಸಲಿದೆ. ಕೆಡಿಟ್ ಬಾಲಕರು ಮತ್ತು ಬಾಲಕಿಯರು, ಸಬ್ ಜ್ಯೂನಿಯರ್ ಬಾಲಕರು ಮತ್ತು ಬಾಲಕಿಯರು, ಪುರುಷರು ಮತ್ತು ಮಹಿಳೆಯರು, ನಾನ್ ಮೆಡಲಿಸ್ಟ್ ಸಿಂಗಲ್ಸ್ ಆ್ಯಂಡ್ ಡಬಲ್ಸ್, ಪುರುಷರ ಡಬಲ್ಸ್ ಮತ್ತು ಹಿರಿಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯ ನಡೆಯಲಿದೆ.ಆಸಕ್ತರು ಮೇ 26 ರೊಳಗೆ ತೀರ್ಪುಗಾರರಾದ ಕೆ. ರಾಮಸ್ವಾಮಿ ಅವರ ಮೊ. 9483960782 ಅಥವಾ ಇ-ಮೇಲ್ kramaswamy30@gmail.comಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ರಾಜೀವ್ ಜ್ಯೋತಿಗೆ ಸ್ವಾಗತ
ನಂಜನಗೂಡು: ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಬೆಂಗಳೂರಿನಿಂದ ತಮಿಳುನಾಡಿನ ಪೆರಂಬದೂರಿಗೆ ಹೊರಟಿರುವ ರಾಜೀವ್ ಜ್ಯೋತಿ ಯಾತ್ರೆಗೆ ನಂಜನಗೂಡಿನಲ್ಲಿ ಬುಧವಾರ ವಿಶೇಷ ಸ್ವಾಗತ ನೀಡಲಾಯಿತು.
ಇಲ್ಲಿನ ಹುಲ್ಲಹಳ್ಳಿ ವೃತ್ತಕ್ಕೆ ರಾಜೀವ್ ಜ್ಯೋತಿ ಆಗಮಿಸಿದಾಗ, ಕಾಂಗ್ರೆಸ್ ಮುಖಂಡರಾದ ಯು.ಎನ್. ಪದ್ಮನಾಭ ರಾವ್, ಬ್ಲಾಕ್ ಅಧ್ಯಕ್ಷ ಕೆ.ಎಸ್. ಸುಬ್ಬಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಗೋವಿಂದರಾಜು, ಕೆಪಿಸಿಸಿ ಸದಸ್ಯ ಅಕ್ಬರ್ಅಲಿ ಜ್ಯೋತಿಗೆ ಪುಷ್ಪಾಹಾರ ಅರ್ಪಿಸಿ ಬರ ಮಾಡಿಕೊಂಡರು.
ಕಾಂಗ್ರೆಸ್ ಕಾರ್ಮಿಕ ಘಟಕದ ಗೋವಿಂದರಾಜು ಮಾತನಾಡಿ, ರಾಜೀವ್ ಜ್ಯೋತಿ ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿನ ಪೆರಂಬದೂರನ್ನು ಮೇ 21 ರಂದು ತಲುಪಲಿದೆ ಎಂದು ತಿಳಿಸಿದರು.
ಎಸ್.ಎಸ್. ಪ್ರಕಾಶಂ, ಪುರಸಭೆ ಮಾಜಿ ಅಧ್ಯಕ್ಷ ಸಿ.ಎಂ. ಶಂಕರ್, ಸದಸ್ಯರಾದ ಅನುಸೂಯ ಗಣೇಶ್, ಪ್ರಕಾಶ್ ರಾಜೇಅರಸ್, ಬಾಬು, ಜಿ.ಎಮ್. ವೇಣುಗೋಪಾಲ್, ಮಂಜುನಾಥ್, ಮಲ್ಲಿಕಾರ್ಜುನ್ ಇದ್ದರು.
ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ನಂಜನಗೂಡು: 66,11 ಕೆ.ವಿ ದೇನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗದಲ್ಲಿ ತುರ್ತು ಕಾಮಗಾರಿ ನಿರ್ವಹಿಸುವುದರಿಂದ ಮೇ 17ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಫೀಡರ್ಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ಅಡಚಣೆಗೊಳಗಾಗುವ ಫೀಡರ್ಗಳು: ದೇವನೂರು, ಬದನವಾಳು, ಅಳಗಂಚಿ, ತಗಡೂರು, ಚುಂಚಗಳ್ಳಿ, ಗಟ್ಟವಾಡಿಪುರ, ಕವಲಂದೆ.
ಇಂದು ದೇಗುಲ ಉದ್ಘಾಟನೆ
ಕೆ.ಆರ್. ನಗರ: ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಿರುವ ಮಾಳಮ್ಮದೇವಿ ದೇವಾಲಯದ ಉದ್ಘಾಟನಾ ಸಮಾರಂಭ ಮೇ 17 ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸುವರು. ಮಿರ್ಲೆ ಗ್ರಾಪಂ ಅಧ್ಯಕ್ಷೆ ಸುಮಾಅಶ್ವಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಕಲ್ಪನಾಧನಂಜಯ, ತಾಪಂ ಸದಸ್ಯ ಸೀತಾರಾಮ್, ಗ್ರಾಪಂ ಸದಸ್ಯೆ ಸುಲೋಚನಾದೊರೆಸ್ವಾಮಿ ಭಾಗವಹಿಸುವರು.
ಬಂಡಳ್ಳಿ ಶಾಲೆಗೆ ಶೇ.100 ಫಲಿತಾಂಶ
ಕೆ.ಆರ್. ನಗರ: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಬಂಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 27 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿನಿ ಎಸ್. ಅಶ್ವಿನಿ 540 ಅಂಕ ಗಳಿಸಿ ಶೆ. 86 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಉಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಮುಖ್ಯ ಶಿಕ್ಷಕ ಎಂ. ಸುರೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಜಗದೀಶ್, ಶ್ರೀನಿವಾಸ್ ವರ್ಣಿಕರ್, ಸುಬ್ಬುರಾಮನ್, ಸವಿತಾ, ಶಬಾನಾಬಾನು, ತಿಪ್ಪೆಸ್ವಾಮಿ ಅವರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಲೋಹಿತ್ಗೆ ಕಾಯಕಶ್ರೀ ಪ್ರಶಸ್ತಿ
ಮೈಸೂರು: ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಜೆ. ಲೋಹಿತ್ ಅವರಿಗೆ ರಾಜ್ಯ ಉಪಲೋಕಾಯುಕ್ತ ಸುಭಾಷ್ ಆದಿ ಅವರು ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ಮಾಜಿ ಸಚಿವೆ ರಾಣಿ ಸತೀಶ್ ಇದ್ದರು.
ವಿವಿಧ ತರಬೇತಿ
ಮೈಸೂರು: ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯು ಮಹಿಳೆಯರು, ಅನಕ್ಷರಸ್ಥರು ಮತ್ತು ನಿರುದ್ಯೋಗಿ ಯುವಕ- ಯುವತಿಯರಿಗೆ ವಿವಿಧ ತರಬೇತಿ ಕೋರ್ಸ್ ಆರಂಭಿಸಿದೆ. ಉದಯಗಿರಿಯ ಮಹದೇವಪುರ ರಸ್ತೆಯಲ್ಲಿನ ಶಿಕ್ಷಣ ಸಂಸ್ಥೆ ಆವರಣದಲ್ಲಿ 6 ತಿಂಗಳ ಬ್ಯೂಟಿ ಕಲ್ಚರ್ ಆ್ಯಂಡ್ ಹೆಲ್ತ್ ಕೇರ್ ತರಬೇತಿ, ಡ್ರೆಸ್ ಮೇಕಿಂಗ್, ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಷನಿಂಗ್, ಎಲೆಕ್ಟ್ರೀಷಿಯನ್ ಮತ್ತು 4 ತಿಂಗಳ ಫ್ಲಂಬಿಂಗ್ ಆ್ಯಂಡ್ ಸ್ಯಾನಿಟರಿ ವರ್ಕ್ ತರಬೇತಿ ನೀಡಲಾಗುತ್ತದೆ. ಮೇ 20ರಿಂದ ಈ ಎಲ್ಲಾ ತರಬೇತಿ ತರಗತಿ ಆರಂಭವಾಗಲಿದೆ. ಆಸಕ್ತರು ಸಂಸ್ಥೆಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

