ಯೋಜನೆ ಕಾರ್ಯಗತ ಮುನ್ನ ಪರಿಶೀಲಿಸಿ
ಕ.ಪ್ರ.ವಾರ್ತೆ ಮೈಸೂರು ಮೇ 19
ರಾಜ್ಯದ ಚುಕ್ಕಾಣಿ ಹಿಡಿದಿರುವಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರುವ ಯೋಜನೆಗಳನ್ನು ಕಾರ್ಯಗತಕ್ಕೆ ಮುನ್ನ ಪರಿಶೀಲಿಸುವಂತೆ ಕನ್ನಡ ಯುವಜನ ಜಾಗೃತಿ ವೇದಿಕೆ ಆಗ್ರಹಿಸಿದೆ.
ರಾಜ್ಯದ ಎಲ್ಲಾ ಉಗ್ರಾಣಗಳಲ್ಲಿ ಶೇಖರಿಸಿಟ್ಟಿರುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಶೀಘ್ರದಲ್ಲೇ ನೂತನ ಸರ್ಕಾರ ಪರಿಶೀಲನೆ ಕಾರ್ಯ ನಡೆಸಬೇಕು. ಇದರಿಂದ ಆಹಾರ ಪದಾರ್ಥಗಳು ಹಾಳಾಗುವುದನ್ನು ತಡೆಗಟ್ಟಬಹುದು. ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ತಿಂಗಳಿಗೆ 30 ಕೆಜಿ ಅಕ್ಕಿಯನ್ನು ಜೂ.1 ರಿಂದ ನೀಡುವುದು ಸ್ವಾಗತಾರ್ಹ. ಆದರೆ, ಈಗಾಗಲೇ ಬಿಪಿಎಲ್ ಪಡಿತರ ಕಾರ್ಡ್ಗಳು ಬಹುತೇಕ ಶ್ರೀಮಂತರ ಪಾಲಾಗಿವೆ. ಹಿಂದಿನ ಸರ್ಕಾರ ರಚಿಸಿದ ಸಮಿತಿಯು ಲಕ್ಷಾಂತರ ನಕಲಿ ಪಡಿತರ ಕಾರ್ಡ್ಗಳನ್ನು ಪತ್ತೆ ಹಚ್ಚಿ ಸರ್ಕಾರದ ಮುಂದೆ ಇಟ್ಟಿದೆ.
ಈ ಕಾರ್ಡ್ಗಳನ್ನು ಕೂಡಲೇ ರದ್ದುಪಡಿಸಿ ನಂತರ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ವೇದಿಕೆ ಅಧ್ಯಕ್ಷ ಗ.ಶಾ. ಭೋಗನಂದೀಶ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಸತ್ಯಾನಂದ ವಿಟ್ಟು ಮನವಿ ಮಾಡಿದ್ದಾರೆ.
30 ಕೆಜಿ ಅಕ್ಕಿ ಕೊಡುವ ಪ್ರಮಾಣ ಸ್ವಲ್ಪ ಮಟ್ಟದಲ್ಲಿ ಕಡಿಮೆ ಮಾಡಿ ಹೆಚ್ಚು ಗೋಧಿಯನ್ನು ಪಡಿತರಿಗೆ ನೀಡುವುದರಿಂದ ಗ್ರಾಹಕರ ಆರೋಗ್ಯ ಬೆಳವಣಿಗೆಗೆ ಸಹಾಯವಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ನೀಡಿರುವಂತೆ ನಗರದ ಮಟ್ಟ ಎಪಿಎಲ್ ಕಾರ್ಡ್ದಾರರು ಅದರಲ್ಲೂ ಬಹುತೇಕ ಮಧ್ಯಮ ವರ್ಗದವರು ಎಪಿಎಲ್ ಕಾರ್ಡ್ ಹೊಂದಿದ್ದು, ಅವರ ಜೀವನ ತ್ರಿಶಂಕು ಸ್ಥಿತಿಯಲ್ಲಿದೆ. ಆದ್ದರಿಂದ ಎಪಿಎಲ್ ಕಾರ್ಡ್ದಾರರಿಗೂ ಕೆಜಿಗೆ 5 ನಂತೆ ಅಕ್ಕಿ ಮತ್ತು 15 ನಂತೆ ಗೋಧಿ ವಿತರಿಸುವಂತೆ ಅವರು ಕೋರಿದ್ದಾರೆ.
22ರಿಂದ ಕುಂಭಾಭಿಷೇಕ ಮಹೋತ್ಸವ
ಕ.ಪ್ರ.ವಾರ್ತೆ ಮೈಸೂರು ಮೇ 19
ವಿಜಯನಗರದ ಯೋಗಾನರಸಿಂಹಸ್ವಾವು ದೇವಸ್ಥಾನದಲ್ಲಿ ಮೇ 22 ರಿಂದ 27 ರವರೆಗೆ 16 ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ಏರ್ಪಡಿಸಿದೆ.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಪ್ರೊ. ಭಾಷ್ಯಂ ಅವರ ನೇತೃತ್ವದಲ್ಲಿ 6 ದಿನಗಳ ಕಾಲ ಕಂಭಾಭಿಷೇಕ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 22 ರಂದು ಸಂಜೆ 7ಕ್ಕೆ ಶ್ರೀವಾರಿ ಸಹಸ್ರ ಕಳಶಾಭಿಷೇಕ ಅಂಕುರಾರ್ಪಣ, 23 ರಂದು ಬೆಳಗ್ಗೆ 8ಕ್ಕೆ ಶ್ರೀವಾರಿ ಸಹಸ್ರ ಕಳಶಾಭಿಷೇಕ, 24 ರಂದು ಬೆಳಗ್ಗೆ 8ಕ್ಕೆ ಶ್ರೀನರಸಿಂಹ ಜಯಂತಿ ಅಂಗವಾಗಿ ಯೋಗನರಸಿಂಹಸ್ವಾವುಗೆ ಅಭಿಷೇಕ, 24 ರಂದು ಬೆಳಗ್ಗೆ 11 ಕ್ಕೆ ಶ್ರೀವಾರಿ ಪುಷ್ಪಯಾಗ ಮಹೋತ್ಸವ, 25 ರಂದು ಬೆಳಗ್ಗೆ 8ಕ್ಕೆ ಶ್ರೀಸ್ವಾಮಿಗೆ ಅಭಿಷೇಕ ಮತ್ತು ಲಕ್ಷಾರ್ಚನೆ ಹಾಗೂ 26 ರಂದು ಬೆಳಗ್ಗೆ 8 ಕ್ಕೆ ಶ್ರೀಸ್ವಾಮಿಗೆ ಸಹಸ್ರ ಕಳಶಾಭಿಷೇಕ ನಡೆಯಲಿದೆ ಎಂದರು.
ಮಹಾಸುದರ್ಶನ ಯಾಗ: 27 ರಂದು ಬೆಳಗ್ಗೆ 8ಕ್ಕೆ ಲೋಕ ಕಲ್ಯಾಣಾರ್ಥವಾಗಿ ಮಹಾಸುದರ್ಶನ ಯಾಗ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಹಸ್ತದಿಂದ ಮಧ್ಯಾಹ್ನ 12ಕ್ಕೆ ಮಹಾಸುದರ್ಶನ ಯಾಗದ ಪುರ್ಣಾಹುತಿ ನಡೆಯಲಿದೆ ಎಂದು ತಿಳಿಸಿದರು.
ಸಮಸ್ತ ನಾಡಿನ ಜನರ ಒಳಿತಿಗಾಗಿ ಹಾಗೂ ಕಾಲ ಕಾಲಕ್ಕೆ ದೇಶದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚಾಗಿ ಮಳೆಯಾಗಿ ಕೆಆರ್ಎಸ್ ಮತ್ತಿತರ ಜಲಾಶಯ ಭರ್ತಿಯಾಗಲಿ ಮತ್ತು ಜನರ ನೀರಿನ ಬವಣೆ ನೀಗಲಿ ಎಂಬ ಉದ್ದೇಶದಿಂದ ಈ ಯಾಗ ಏರ್ಪಡಿಸಲಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಮೇ 22 ರಿಂದ 27 ರವರೆಗೆ ಪ್ರತಿದಿನ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಕಲಾವಿದರು ಸಂಗೀತ, ಗಾಯನ, ಭರತನಾಟ್ಯ ಮುಂತಾದ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

