ತಾಲೂಕು ರಚನೆ ನಿರ್ಧಾರ ಜಾರಿಯಾಗಲಿ: ಶೆಟ್ಟರ್
ರಾವಂದೂರು: ಆಡಳಿತ ವಿಕೇಂದ್ರಿಕರಣದ ದೃಷ್ಟಿಯಿಂದ ತಮ್ಮ ಸರ್ಕಾರ ಇದ್ದಾಗ 43 ತಾಲೂಕುಗಳ ರಚಿಸುವ ತೀರ್ಮಾನ ಮಾಡಿದ್ದು, ಕೂಡಲೆ ಇದು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಟಿ. ಸತೀಶ್ ಪರವಾಗಿ ಮತಯಾಚಿಸಿ ಮಾತನಾಡಿ, 1973 ರಿಂದ ವಾಸುದೇವನ್ ಸಮಿತಿ, ಹುಂಡಿಕಾರ್, ಗದ್ದೀಗೌಡ, ಎಂ.ಬಿ. ಪ್ರಕಾಶ್ ವರದಿಗಳು ಆಧಾರದ ಮೇಲೆ ಹೊಸ 43 ತಾಲೂಕುಗಳನ್ನು ಘೋಷಿಸಲಾಗಿದೆ. ಹೀಗಿರುವಾಗ ಕಂದಾಯ ಮಂತ್ರಿ ಶ್ರೀನಿವಾಸಪ್ರಸಾದ್ ಮರುಪರುಶೀಲನೆ ಮಾಡಲು ಮುಂದಾಗಿದುವುದು ಸರಿಯಲ್ಲ ಎಂದರು.
ಪ್ರಬಲ ವಿರೋಧ ಪಕ್ಷವಾಗಿ ನಾವು ವಿಧಾನ ಸಭೆಯಲ್ಲಿ ಹೋರಾಟ ಮಾಡುತ್ತೇವೆ. ಪಿರಿಯಾಪಟ್ಟಣದ ಫಲಿತಾಂಶ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ತರುವುದಿಲ್ಲ.
ಆದ್ದರಿಂದ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ಹೋರಾಟ ನಡೆಸಲು ಪಿರಿಯಾಪಟ್ಟಣ ಕ್ಷೇತ್ರದ ಗೆಲವು ಅಗತ್ಯವಿದೆ. ನಮ್ಮ ಅವಧಿಯಲ್ಲಿ ಸ್ವಚ್ಛ, ಆರೋಪರಹಿತ ಆಡಳಿತ ನಡೆಸಿದ್ದೇವೆ. ಇದರ ಆಧಾರದ ಮೇಲೆ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ ಎಂದರು.
25 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಸಾಲ ಮನ್ನಾದ ಹಣ ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನಾವು ದೇಶದಲ್ಲಿಯೆ ಉತ್ತಮ ಆರ್ಥಿಕ ಶಿಸ್ತು ಕಾಪಾಡಿಕೊಂಡು ಹೋಗಿದ್ದು, ಖಜಾನೆ ಖಾಲಿಯಾಗಿದ್ದರೆ ದಾಖಲೆ ಕೊಡಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸ್ವಹಿತಾಸಕ್ತಿಯ ಉದ್ದೇಶದಿಂದ ತಮ್ಮನ್ನು ಎಲ್ಲಿ ತುಳಿಯುವರೊ ಎಂದು ಹೆದರಿ ಯಾವುದೆ ಮಂತ್ರಿ ಇಲ್ಲದೆ ಕ್ಯಾಬಿನೆಟ್ನಲ್ಲಿ ಏಕಾಏಕಿ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಕಟಿಸುತ್ತಿದ್ದಾರೆ ಎಂದ ಅವರು, ಪಕ್ಷದ ಅಭ್ಯರ್ಥಿ ಸತೀಶ್ಗೆ ಕೆಲಸ ಮಾಡಿಸುವ ಕಾಳಜಿ ಇದೆ. ಆದ್ದರಿಂದ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಳಿಕ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರೀನಾ ಪ್ರಕಾಶ್, ಮೈಸೂರು ನಗರಾಧ್ಯಕ್ಷ ಶಿವಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಡಾ. ಶಿವರಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಮಹೇಂದ್ರ, ಪುಟ್ಟಸ್ವಾಮಿ, ಹೋಬಳಿ ಘಟಕದ ಅಧ್ಯಕ್ಷ ಎಂ.ಎಂ. ರಾಜೇಗೌಡ, ಆರ್. ಮೋಹನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

