ಮೈಸೂರು

ಸುಪ್ರೀಂ ಶಾಲಾ ಮಕ್ಕಳಿಂದ ವನಮಹೋತ್ಸವ

Published On :

ಕ.ಪ್ರ. ವಾರ್ತೆ   ಮೈಸೂರು   ಮೇ 29
ನಗರದ ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆ ಎದುರಿನ ಎಂಡಿಎ ಉದ್ಯಾನವನದಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನೆಡಲಾಯಿತು.
ಎಂಡಿಎ ಆಯುಕ್ತ ಡಾ. ಸಿ.ಜಿ. ಬೆಟ್ಸೂರ್ಮಠ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮ 4ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿಂದೆ ವಿಶ್ವಕಪ್ ಕ್ರಿಕೆಟ್ ನಡೆದಾಗ ಗಿಡಗಳಿಗೆ ಕ್ರಿಕೆಟ್ ತಾರೆಯರ ಹೆಸರಿಡಲಾಗಿತ್ತು. ಈಗ ಶಾಲೆಯ ಆವರಣದಲ್ಲಿ ಸುಮಾರು 350 ಮರಗಳಿವೆ ಎಂದು ಶಾಲೆಯ ಸಂಸ್ಥಾಪಕ ಎಂ.ಎಲ್. ರವೀಂದ್ರಸ್ವಾಮಿ ತಿಳಿಸಿದರು.
ಶಾಲೆಯ ಆವರಣದಲ್ಲಿ ಹೆಚ್ಚು ಮರಗಳು ಇರುವುದರಿಂದ ಎಂಡಿಎ ಉದ್ಯಾನವನದಲ್ಲಿ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಕೃತಿ ಮತ್ತು ವರ್ಷದ ಮಾಹಿತಿಯನ್ನೊಳಗೊಂಡ ಫಲಕದೊಂದಿಗೆ ಸಸಿ ನೆಡಲಾಯಿತು. ಬಳಿಕ ಉದ್ಯಾನವನದಲ್ಲಿ ಶಾಲೆಯ ಎಲ್ಕೆಜಿ ವಿದ್ಯಾರ್ಥಿಗಳಿಂದ 10ನೇ ತರಗತಿವರೆಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಸಿ ನೆಟ್ಟರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ. ಬೇಂದ್ರೆ, ಕೆ. ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರ ಹೆಸರಿನಲ್ಲಿ ಸಸಿ ನೆಡಲಾಯಿತು.
ಅಂತೆಯೆ ಕೆ.ಸಿ. ರೆಡ್ಡಿಯಿಂದ ಈಗಿನ ಸಿದ್ದರಾಮಯ್ಯವರೆಗಿನ ಎಲ್ಲರ ಹೆಸರಿನಲ್ಲಿ, ಸುದ್ದಿವಾಹಿನಿ, ಪತ್ರಿಕೆಗಳು ಮತ್ತು ಸ್ಥಳೀಯ ಸಾಹಿತಿಗಳ ಹೆಸರಿನಲ್ಲಿ ಸಸಿ ನೆಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.