ಸುದ್ದಿ ಸಂಕ್ಷೇಪ
ನಾನಾ ಕಾಮಗಾರಿಗೆ 6ರಂದು ಚಾಲನೆ
ಟಿ. ನರಸೀಪುರ: ಟಿ. ನರಸೀಪುರದ ಜನರ ನಿರೀಕ್ಷೆಯಂತೆ ನ.6ರಂದು ಭರಪೂರ ಅಭಿವೃದ್ಧಿ ಕಾರ್ಯಕ್ರಮಮಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡುವರು ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ತಿಳಿಸಿದರು. ಪಟ್ಟಣದ ಮಹದೇಶ್ವರ ಭವನದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವ ಸಿದ್ಧತೆಗೆ ನಡೆದ ನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನವಂಬರ್ ನಂತರ ನರಸೀಪುರದ ಚಿತ್ರಣವೇ ಬದಲಾಗಿದೆ. ಅಭಿವೃದ್ಧಿಯನ್ನು ಬಯಸುವ ಜನರ ನಿರೀಕ್ಷೆ ಮತ್ತು ಬಹುದಿನಗಳ ಕನಸು ಸಾಕಾರಗೊಳ್ಳಲಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ನೂರಾರು ಕೋಟಿ ರು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಂಜೂರು ಮಾಡಿದೆ. 58 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಪಿಲಾ ನದಿಯ ನೂತನ ಸೇತುವೆ ಉದ್ಘಾಟನೆ, 27 ಕೋಟಿ ವೆಚ್ಚದ ಕಾವೇರಿ ನದಿಯ ನೂತನ ಗೋಕಾಕ್ ಮಾದರಿಯ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪಪಂ ವ್ಯಾಪ್ತಿಯಲ್ಲಿ 5 ಕೋಟಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೇರವೇರಿಸಲಾಗುವುದು ಎಂದು ತಿಳಿಸಿದರು. ಪಪಂ ಮಾಜಿ ಅಧ್ಯಕ್ಷ ಬಸವಣ್ಣ, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಜಿಪಂ ಸದಸ್ಯ ಕೆ. ಮಹದೇವ, ಮಾಜಿ ಸದಸ್ಯ ಎಂ.ಆರ್. ಸೋಮಣ್ಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ. ವಜ್ರೇಗೌಡ, ಎಪಿಎಂಸಿ ಅಧ್ಯಕ್ಷ ಎಂ. ರಾಜು, ಟಿಎಪಿಸಿಎಂಎಸ್ ನಿರ್ದೇಶಕ ಕೆಂಡನಕೊಪ್ಪಲು ಮಹೇಶ, ಎಸ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೊನ್ನನಾಯ್ಕ, ಎಸ್ಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ. ಪದ್ಮನಾಭ, ಮುಖಂಡರಾದ ಕೆ. ಮಲ್ಲು, ಲಕ್ಷ್ಮೀನಾರಾಯಣ, ಕನ್ನಹಳ್ಳಿ ಲಕ್ಷ್ಮಣ, ಲತಾ ಜಗದೀಶ, ಕೋಕಿಲಾ, ಎಂ. ಮಲ್ಲಿಕಾರ್ಜುನಸ್ವಾಮಿ, ಟಿ.ಎಚ್. ಮಂಜುನಾಥ್, ಎ.ಎನ್. ಸ್ವಾಮಿ ಇದ್ದರು.
ಅಲ್ಲಲ್ಲಿ ರಾಜ್ಯೋತ್ಸವ
ಟಿ. ನರಸೀಪುರ: ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 58ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಉಮಾರಾಣಿ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಸಹ ಶಿಕ್ಷಕರಾದ ಮಲ್ಲಣ್ಣ, ಜಯಶೀಲ, ಮುಖಂಡ ಮಾದೇಶ, ರಂಗಯ್ಯ, ನಾಗೇಂದ್ರ, ಮಾಧು, ರಾಜೇಶ, ಸಿದ್ದಪ್ಪ, ಸಿದ್ದರಾಜು, ಅಂಗನವಾಡಿ ಕಾರ್ಯಕರ್ತೆ ಗೌರಮ್ಮ ಇದ್ದರು.
ಎನ್ಕೆಎಫ್ನಲ್ಲಿ...
ಟಿ. ನರಸೀಪುರದ ಎನ್ಕೆಎಫ್ ಪಬ್ಲಿಕ್ ಶಾಲೆಯಲ್ಲಿ ನಡೆದ 58ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಾಂಭೆ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ, ನಾಡಗೀತೆಗೆ ನಮಿಸಿ ಗೌರವ ಸಲ್ಲಿಸಲಾಯಿತು. ಅಹಮದ್ ಸಯೀದ್, ರೇಷ್ಮಾ, ಬಿ. ಮನ್ಸೂರ್ ಆಲಿ, ಮಹಮದ್ ಹುಸೇನ್, ಹುಣಸೂರು ಬಸವಣ್ಣ, ಶಿವಕುಮಾರ್, ಅಮೀರ್ ಪಾಷ, ಕುಮಾರ್, ಮುಖ್ಯ ಶಿಕ್ಷಕಿ ಹೇಮಾ, ರಾಬಿಯಾ, ಶಿಕ್ಷಕರಾದ ಅಶ್ವಿನಿ, ಶಾಲಿನಿ, ಮಧು, ನೇತ್ರಾವತಿ, ಗೀತಾ, ಪುಷ್ಪಲತಾ, ಚೈತ್ರಾ, ಮಣಿ, ಶ್ರೀದೇವಿ ಇದ್ದರು.
ಗೆಳೆಯರ ಬಳಗದಿಂದ...
ಟಿ. ನರಸೀಪುರ ಪಟ್ಟಣದ ಅಖಿಲ ಕರ್ನಾಟಕ ಭುವನೇಶ್ವರಿ ಗೆಳೆಯರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಯುವ ಮುಖಂಡ ಕೈಯಂಬಳ್ಳಿ ಅಶೋಕ್ ನೇತೃತ್ವದಲ್ಲಿ ಗುಂಜಾ ನರಸಿಂಹ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸಂಘಟನೆಯಿಂದ 2ನೇ ವರ್ಷದ ರಾಜ್ಯೋತ್ಸವ ಆಚರಿಸಲಾಯಿತು. ಅಧ್ಯಕ್ಷ ತುಳಸಿ, ಉಪಾಧ್ಯಕ್ಷ ದೀಪು ಮಲ್ಲಣ್ಣ, ಲೋಹಿತ್ ಅರಸ್, ರಾಜೇಂದ್ರಪ್ರಸಾದ್, ಗಿರೀಶ್, ಪ್ರವೀಣ್, ಶ್ರೇಯಸ್, ಸಲೀಂ, ಶಿವು ಇದ್ದರು.
ಸುತ್ತೂರಿನಲ್ಲಿ...
ಸುತ್ತೂರು: ಗ್ರಾಮದ ಸರ್ಕಾರಿ, ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎಸ್ಡಿಎಂಸಿ ಮಾಜಿ ಅಧ್ಯಕ್ಷ ಸುತ್ತೂರು ನಂಜುಂಡನಾಯಕ ಅಧ್ಯಕ್ಷತೆ ವಹಿಸಿ, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ನಿವೃತ್ತ ಮುಖ್ಯ ಶಿಕ್ಷಕ ನಾಗರಾಜಸ್ವಾಮಿ ಕರ್ನಾಟಕದ ಏಕೀಕರಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಪ್ರಭಾರ ಮುಖ್ಯ ಶಿಕ್ಷಕಿ ವರಲಕ್ಷಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

