ಮೈಸೂರು

ಗದ್ದೆಗೆ ಕಾಡಾನೆ ದಾಳಿ; ಬೆಳೆ ನಾಶ

Published On :

ಹುಣಸೂರು: ತಾಲೂಕಿನ ಗುರುಪುರ ಬಳಿಯ ಸ.ನಂ.25ರ ಗದ್ದೆ ಬಯಲು ಹಾಗೂ ಹೊಲಗಳಿಗೆ ಕಾಡಾನೆಗಳ ಹಿಂಡು ಶನಿವಾರ ರಾತ್ರಿ ದಾಳಿ ಇಟ್ಟು ಅಪಾರ ಬತ್ತ ಹಾಗೂ ಜೋಳ, ರಾಗಿ ಬೆಳೆ ನಾಶ ಮಾಡಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ತಾಲೂಕಿನ ಹನಗೋಡು ಅಣೆಕಟ್ಟಿನ ಅಚ್ಚುಕಟ್ಟು ವ್ಯಾಪ್ತಿಯ ನಾಲಾ ಬಯಲಿನ ಹುಣಸೂರಿನ ಶಂಕರ್‌ಗೆ ಸೇರಿದ ಎರಡು ಎಕರೆ, ಗುರುಪುರದ ಸಣ್ಣಶೆಟ್ಟರ ಅರ್ಧ ಎಕರೆ ಬತ್ತ ಮತ್ತು ಶಿವಣ್ಣರಿಗೆ ಸೇರಿದ ಎರಡುಎಕರೆ ಪ್ರದೇಶದ ರಾಗಿ, ರಾಜೇಗೌಡ, ಚೌಡಮ್ಮ, ರಾಮನಾಯ್ಕರ ಜೋಳದ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ರಾತ್ರಿ ವೇಳೆ 15 ಕಾಡಾನೆಗಳ ಹಿಂಡು ನಾಡಿಗೆ ಧಾವಿಸಿ ಬಂದು ಅಪಾರ ಬೆಳೆ ನಷ್ಟಪಡಿಸಿವೆ. ಲಕ್ಷಾಂತರ ರು. ನಷ್ಟ ಸಂಭವಿಸಿದೆ.   ಕಳೆದ 3 ವರ್ಷದಿಂದ ಅರಣ್ಯದಂಚಿನ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದರಾದರೂ ಈ ಬಾರಿ ಅನುದಾನದ ಕೊರತೆಯಿಂದ ಕಾವಲು ಪಡೆ ಇಲ್ಲದ್ದರಿಂದಾಗಿ ರೈತರು ಬವಣೆ ಪಡುವಂತಾಗಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.