ಮೈಸೂರು

ರಕ್ತದಾನಕ್ಕೂ ಮೌಢ್ಯದ ಅಡ್ಡಿ: ಶಾಸಕ ವಾಸು

Published On :

ಕ.ಪ್ರ.ವಾರ್ತೆ     ಮೈಸೂರು     ಅ. 1
ಇಂದು ರಕ್ತದಾನದಂತಹ ಜೀವ ಉಳಿಸುವ ಕಾರ್ಯಕ್ಕೂ ಮೌಢ್ಯ ಅಡ್ಡಿಯಾಗಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ವಿಷಾದ ವ್ಯಕ್ತಪಡಿಸಿದರು.
ಜೆಎಸ್ಎಸ್ ನರ್ಸಿಂಗ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಾಡಬೇಕೆಂದು ಹೇಳುವ ಎಷ್ಟು ಮಂದಿ ರಕ್ತದಾನ ಮಾಡುವುದಿಲ್ಲ ಎಂಬುದು ನೋವಿನ ಸಂಗತಿ. ಅಲ್ಲದೆ ರಕ್ತದಾನ ಮಾಡಲು ಭಯ ಪಡುವವರು ಇದ್ದಾರೆ. ಇಂತಹ ಮೂಢನಂಬಿಕೆಯು ಜನರಲ್ಲಿದೆ. ಮೊದಲು ಈ ರೀತಿಯ ಮೌಢ್ಯವನ್ನು ತೊಲಗಿಸಬೇಕು. ಸಾವಿನ ಹಂಚಿನಲ್ಲಿರುವ ರೋಗಿಗಳ ಜೀವ ಉಳಿಸಲು ನೆರವಾಗುವ ಈ ದಾನ ಶ್ರೇಷ್ಠ ಕಾರ್ಯ ಎಂದರು. ಈ ಹಿಂದೆ ಅಗತ್ಯ ರಕ್ತಕ್ಕಾಗಿ ಜನರು ರಕ್ತನಿಧಿ ಕೇಂದ್ರದ ಬಳಿ ಸಾಲು ನಿಲ್ಲುವಂಥ ಹಾಗೂ ಒಂದು ಹೊತ್ತಿನ ಊಟಕ್ಕಾಗಿ ರಕ್ತವನ್ನು ದಾನ ಮಾಡುವಂತ ಸನ್ನಿವೇಶ ಕಾಣಬಹುದಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಬದಲಾಗಿರುವುದು ಸಮಾಧಾನದ ಸಂಗತಿ ಎಂದು ಅವರು ತಿಳಿಸಿದರು. ಪ್ರತಿ ವರ್ಷ ವಿದ್ಯಾವಿಕಾಸ ಸಂಸ್ಥೆಯಿಂದ ರಕ್ತದಾನ ಶಿಬಿರ ನಡೆಸಲಾಗುತ್ತಿದ್ದು, ಕಳೆದ ವರ್ಷ 1200 ಬಾಟಲಿ ರಕ್ತವನ್ನು ಸಂಗ್ರಹಿಸಲಾಗಿತ್ತು. ಇಂತಹ ಕಾರ್ಯಕ್ಕೆ ಅನೇಕ ಸಂಘ- ಸಂಸ್ಥೆಗಳು ಮುಂದಾಗಿರುವುದು ಶ್ಲಾಲಘನೀಯ. ಜನರು ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಬೇಕು ಎಂದರು.
ದಿನಕ್ಕೆ 800ರಿಂದ 1100 ಯೂನಿಟ್ ರಕ್ತದ ಅಗತ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಮಾಲೇಗೌಡ ಮಾತನಾಡಿ, ರಾಜ್ಯದಲ್ಲಿ ದಿನಕ್ಕೆ 800ರಿಂದ 1100 ಯೂನಿಟ್ ರಕ್ತದ ಅಗತ್ಯವಿದೆ. ಆದರೆ 700ರಿಂದ 800 ಯೂನಿಟ್ ಮಾತ್ರ ಲಭ್ಯವಿದೆ. ಸುಮಾರು 200- 300 ಯೂನಿಟ್ಗಳ ಬೇಡಿಕೆಯಿದೆ. ಈ ಕೊರತೆ ನೀಗಿಸಲು 18ರಿಂದ 45 ವರ್ಷದೊಳಗಿನವರು ರಕ್ತದಾನ ಮಾಡುವ ಮೂಲಕ ಈ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಮನುಷ್ಯನ ದೇಹದಲ್ಲಿ 5- 6 ಲೀಟರ್ ರಕ್ತವಿದ್ದು, ಇದರಲ್ಲಿ 300- 350 ಎಂಎಲ್ ರಕ್ತವನ್ನು ಮಾತ್ರ ತೆಗೆದುಕೊಳ್ಳಲಾಗುವುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ರಕ್ತದಾನ ಮಾಡುವುದರಿಂದ ಹೃದಯ ಕಾಯಿಲೆ ತಪ್ಪಲಿದೆ. ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದು ಅವರು ತಿಳಿಸಿದರು. ನಗರ ಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಟಿ. ರಘುಕುಮಾರ್, ಅನ್ನಪೂರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ವಿದ್ಯಾಶಂಕರ್, ಕೆಆರ್ ಆಸ್ಪತ್ರೆ ಎಆರ್ಟಿ ವೈದ್ಯಾಧಿಕಾರಿ ಡಾ. ವೆಂಕಟೇಶ್, ಜೆಎಸ್ಎಸ್ ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕ ಡಾ. ಗುರುಪ್ರಸಾದ್ ಹಾಗೂ ಲಯನ್ ಸಿ. ದಿನೇಶ್ ಮುಖ್ಯ ಅತಿಥಿಯಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಎಸ್.ಪಿ. ಪದಕಿ ಅಧ್ಯಕ್ಷತೆ ವಹಿಸಿದ್ದರು. ನಸಿಂರ್ಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಸುಮತಿದೇವಿ ಇದ್ದರು. ಡಾ. ಅಂಬಿಕಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.