ಮೈಸೂರು

ಕಂಪ್ಯೂಟರ್ ಶಿಕ್ಷಣ ಇಂದಿನ ಅಗತ್ಯ: ಶೇಖರ್

Published On :

ಕ.ಪ್ರ.ವಾರ್ತೆ    ಯಳಂದೂರು    ಅ. 2
ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದರಷ್ಟೇ ಸಾಲದು. ಅದರ ಜೊತೆಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಕಂಪ್ಯೂಟರ್ ಶಿಕ್ಷಣವನ್ನು ಕಲಿತಾಗ ಮಾತ್ರ ಬದುಕನ್ನು  ಕಟ್ಟಿಕೊಳ್ಳಲು ಸಾಧ್ಯ ಎಂದು ಮೈಸೂರಿನ ಜೆಎಸ್ಎಸ್ ಅಂಗವಿಕಲ ಹಾಗೂ ಅಂಧ ವಿದ್ಯಾರ್ಥಿಗಳ ತರಬೇತಿ ಕೇಂದ್ರದ ಪ್ರಾಂಶುಪಾಲ ಎನ್.ಶೇಖರ್ ಹೇಳಿದರು.
ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಡನೆ ಆರ್.ಪ್ರೋಸೆಸ್ ಔಟ್ಸೋರ್ಸಿಂಗ್ ಸರ್ವಿಸಸ್ ಪ್ರೈ.ಲಿ. ಆಯೋಜಿಸಿದ್ದ ಭಾರತ ಸರ್ಕಾರ ಮತ್ತು ಎನ್ಎಸ್ಡಿಸಿ ಪ್ರಸ್ತುತ ಪಡಿಸಿರುವ ಸ್ಟಾರ್ ಯೋನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗವು ಜಾಗತೀಕರಣದಿಂದ ಬಹು ಬೇಗ ಬದಲಾವಣೆ ಹೊಂದುತ್ತಾ ಅಭಿವೃದ್ಧಿ ಹೊಂದುತ್ತಿರುತ್ತವೆ. ಈ ನಿಟ್ಟಿನಲ್ಲಿ ಆರ್.ಪ್ರೋಸೆಸ್ ಔಟ್ಸೋರ್ಸಿಂಗ್ ಸರ್ವಿಸಸ್ ಪ್ರೈ.ಲಿ. ಯಳಂದೂರಿನಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸ್ಟೋರ್ ಆಫ್ಸ್  ಅಸಿಸ್ಟೆಂಟ್ ಸೆಲ್ಸ್ ಅಸೋಸಿಯೇಟೆಡ್ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಗೂಳಿಪುರದ ಅಕ್ಷಯ ಮಲ್ಲಪ್ಪ ಮಾತನಾಡಿ, ಗ್ರಾಮೀಣ ಮಕ್ಕಳು ಪಟ್ಟಣದ ಪ್ರದೇಶಗಳ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದುಳಿದ್ದಿದ್ದು, ವೃತ್ತಿ ನೈಪುಣ್ಯತೆ ತರಬೇತಿ ಪಡೆಯುವಲ್ಲಿ ವಂಚಿತರಾಗಿರುತ್ತಿದ್ದರು. ನಮ್ಮ ಕಂಪನಿಯ ವತಿಯಿಂದ ಅಂತಹವರಿಗೆ ತರಬೇತಿ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ವಿ.ಪುಷ್ಪಕ್ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಪರಿಸರದ ಸಮುದಾಯವನ್ನು ಬೆಳಎಸಲು ಪಣ ತೊಟ್ಟು, ಆರ್. ಪ್ರೋಸೆಸ್ ಪ್ರೈ.ಲಿ.ನ್ನು ತೆರೆದಿರುವ ಗೂಳಿಪುರದ ಅಕ್ಷಯ ಮಲ್ಲಪ್ಪನವರ ಸಾಮಾಜಿಕ ಕಾರ್ಯ ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣವಾಗಿದೆ ಎಂದರು. ಎಸ್ಡಿವಿಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ, ಕಂಪನಿ ವ್ಯವಸ್ಥಾಪಕ ವೈ.ಎಂ. ವಿಜಯಕುಮಾರ್, ಬೆಂಗಳೂರಿನ ಸಯಿದ್ ಹುಸೇನ್, ಅಧ್ಯಾಪಕರಾದ ಹೇಮಂತಕುಮಾರ್, ಪದ್ಮ, ಬಿಳಿಗಿರಿ ಬೆಟ್ಟದ ಮಲ್ಲೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.