ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಅ.5ರಿಂದ 12ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
5ರಂದು ಸಂಜೆ 5 ಗಂಟೆಗೆ ಇರಸವಾಡಿಯ ಮಲ್ಲೇಶ ಮತ್ತು ತಂಡದಿಂದ ನಾದಸ್ವರ, ಚಿಕ್ಕಮಗಳೂರಿನ ಶೈಲಾಶ್ರೀ ಮತ್ತು ತಂಡದಿಂದ ಮಹಿಳಾ ವೀರಗಾಸೆ, ರಾತ್ರಿ 7ಕ್ಕೆ ನಗರದ ಪಿ.ಜಿ.ಸೆಂಟರ್ ವಿದ್ಯಾರ್ಥಿಗಳಿಂದ ಕಾಲೇಜು ಸಂಭ್ರಮ, ರಾತ್ರಿ 7.15ಕ್ಕೆ ಮೈಸೂರಿನ ನಿಮಿಷಾಂಭ ನೃತ್ಯಾಲಯದಿಂದ ನೃತ್ಯ ರೂಪಕ, ಹಾಗೂ 8.15ಕ್ಕೆ ಕೋಲಾರದ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡದಿಂದ ಜನಪದ ಸಂಗೀತ ಏರ್ಪಡಿಸಲಾಗಿದೆ.
6ರಂದು ಸಂಜೆ 5 ಗಂಟೆಗೆ ಸಿ.ಎಂ.ನರಸಿಂಹಮೂರ್ತಿ ಮತ್ತಿತರರಿಂದ ಸಂಗೀತ ರಸಗಂಗೆ, ಸಂಜೆ 6.30ಕ್ಕೆ ಸಿದ್ದಯ್ಯನಪುರದ ಮಲ್ಲಬಸವೇಗೌಡ ಅವರಿಂದ ಗೊರವರ ಕುಣಿತ ಹಾಗೂ ರಾಮಸಮುದ್ರದ ನಾಗ ಮತ್ತು ತಂಡದಿಂದ ಬೀಸುಕಂಸಾಳೆ, ರಾತ್ರಿ 7ಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ವೈಭವ, 7.15ಕ್ಕೆ ಶಿವಮೊಗ್ಗದ ಹರಳಾಪುರ ತಂಡದ ಎಂ.ಹುಮಾಯೂನ್ ಅವರಿಂದ ತತ್ವಪದ, 8ಕ್ಕೆ ಜಾನಪದ ನೃತ್ಯ ಕಾರ್ಯಕ್ರಮ, 8.30ಕ್ಕೆ ಮಹಿಷಾಸುರ ಮರ್ಧಿನಿ ಕುರಿತ ಯಕ್ಷಗಾನ ಏರ್ಪಡಿಸಲಾಗಿದೆ.
7ರಂದು ಸಂಜೆ 5 ಗಂಟೆಗೆ ಸಿದ್ದಯ್ಯನಪುರದ ಎಂ.ಕೈಲಾಸಮೂರ್ತಿ ಮತ್ತು ತಂಡದಿಂದ ತಂಬೂರಿ ಪದ, 5. 30ಕ್ಕೆ ಜನಪದ ಸಂಗೀತ, 6.30ಕ್ಕೆ ಮಲೆಯೂರಿನ ರಾಜು ಮತ್ತು ತಂಡದಿಂದ ವೀರಗಾಸೆ ಹಾಗೂ ನಗರದ ನಾದಬ್ರಹ್ಮ ವಾದ್ಯಗಾರರ ಸಂಘದಿಂದ ನಾದಸ್ವರ, 7ಕ್ಕೆ ಕಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ವೈಭವ, 7.15ಕ್ಕೆ ಬೆಂಗಳೂರಿನ ಮಂಜುಳ ಪರಮೇಶ ಮತ್ತು ತಂಡದಿಂದ ಭಾರತೀಯ ನೃತ್ಯ ಸಂಭ್ರಮ ಹಾಗೂ 8.15ಕ್ಕೆ ರಮೇಶಚಂದ್ರ ಮತ್ತಿತರರಿಂದ ಸಂಗೀತ ರಸಗಳಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
8ರಂದು ಸಂಜೆ 5 ಗಂಟೆಗೆ ಜನಪದ ಸಂಗೀತ, 6.30ಕ್ಕೆ ಗುಂಡ್ಲುಪೇಟೆ ಮದ್ದೂರು ಕಾಲೋನಿಯ ರತ್ನಮ್ಮ ಮತ್ತು ತಂಡದಿಂದ ಪಿನಾಸಿ ನೃತ್ಯ, ಹಾಗೂ ಲಕ್ಷ್ಮೀಸಾಗರದ ಚಂದ್ರ ಮತ್ತು ತಂಡದಿಂದ ಡೊಳ್ಳುಕುಣಿತ, ರಾತ್ರಿ 7ಕ್ಕೆ ನಗರದ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ವೈಭವ, ರಾತ್ರಿ 7.15ಕ್ಕೆ ಮೈಸೂರು ಮಹದೇವಪ್ಪ, ಎಂ.ನಾಗರಾಜು, ಎಂ.ಮಂಜುನಾಥ ಇವರಿಂದ ಪಿಟೀಲು ವಾದನ, ಮತ್ತು 8.15ಕ್ಕೆ ಬೆಂಗಳೂರಿನ ವಿಜಯಪ್ರಕಾಶ್ ಮತ್ತು ತಂಡದಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
9ರಂದು ಸಂಜೆ 5.30ಕ್ಕೆ ಗದಗದ ಪ್ರಭುಸೊನ್ನ ಅವರಿಂದ ವಚನಸಂಗೀತ, 6ಕ್ಕೆ ಬಸವರಾಜು, ಮಹಾಲಿಂಗ ಗಿರ್ಗಿ, ಸುರೇಶನಾಗ್, ಮಂಜುನಾಥ ರಾಮಸಮುದ್ರ, ಲತಾಪುಟ್ಟಸ್ವಾಮಿ ಇವರಿಂದ ಸುಗಮಸಂಗೀತ, 7 ಗಂಟೆಗೆ ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಜನಪದ ನೃತ್ಯ, 7.15ಕ್ಕೆ ನಗರದ ಮಂಜುಳಾಪ್ರಭಾಕರ್ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7.45ಕ್ಕೆ ಬೆಂಗಳೂರಿನ ಸಂಗೀತಕಟ್ಟಿ ಮತ್ತು ತಂಡದಿಂದ ಲಘುಸಂಗೀತ ಹಾಗೂ 8.45ಕ್ಕೆ ಗುರುದೇವ ಲಲಿತಾಕಲಾ ಅಕಾಡೆಮಿಯ ಚೇತನರಾಧಕೃಷ್ಣ ಮತ್ತು ತಂಡದಿಂದ ನೃತ್ಯರೂಪಕ ಏರ್ಪಡಿಸಲಾಗಿದೆ.
10ರಂದು ಸಂಜೆ 5 ಗಂಟೆಗೆ ಪ್ರೊ. ಕೃಷ್ಣೇಗೌಡ, ಕೂಗಳ್ಳಿ ಕೊಟ್ರೇಶ್, ಅಸಾದುಲ್ಲಾ ಬೇಗ್, ಡಾ. ಬಸವರಾಜು ಬೆನ್ನಿ ಮತ್ತು ತಂಡದವರಿಂದ ಹಾಸ್ಯಸಂಜೆ, ರಾತ್ರಿ 7ಕ್ಕೆ ಗುಂಡ್ಲುಪೇಟೆಯ ಜೆಎಸ್ಎಸ್ ವಿದ್ಯಾರ್ಥಿಗಳಿಂದ ಕಾಲೇಜು ಸಂಭ್ರಮ, 7.15ಕ್ಕೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ವಿಜೇತ ಕಲಾವಿದರಿಂದ ಭಾವಸಂಗಮ, 8.30ಕ್ಕೆ ಮೈಸೂರನ ಪೊಲೀಸ್ ಬ್ಯಾಂಡ್ ಕಲಾವಿದರಿಂದ ಆಂಗ್ಲ ಮತ್ತು ಕರ್ನಾಟಕ ವಾದ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
11ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ. ಸಂಜೆ 5. 30ಕ್ಕೆ ಮದ್ದೂರಿನ ನಂಜುಂಡಸ್ವಾಮಿ ಮತ್ತು ತಂಡದವರಿಂದ ಭಜನೆ, 6ಕ್ಕೆ ಗುಂಡ್ಲುಪೇಟೆಯ ಮೋಹನ್ ಮತ್ತು ತಂಡದಿಂದ ಜನಪದ ನೃತ್ಯ, 6.15ಕ್ಕೆ ಕೊಳ್ಳೇಗಾಲದ ಮಾನಸ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ವೈಭವ, 6.30ಕ್ಕೆ ಬೆಂಗಳೂರಿನ ವೈ.ಕೆ.ಮುದ್ದುಕೃಷ್ಣ ಮತ್ತು ತಂಡದಿಂದ ಸಂಗೀತ ಸಂಜೆ, 7.30ಕ್ಕೆ ನಾದಮಿಶ್ರಣ, 9 ಗಂಟೆಗೆ ನಗರದ ಜೈ ಭೀಮ ಕೃಪಾಪೋಷಿತ ನಾಟಕ ಮಂಡಳಿಯಿಂದ ರಂಗ ದೃಶ್ಯಾವಳಿ ಕಾರ್ಯ ಕ್ರಮ ಏರ್ಪಡಿಸಲಾಗಿದೆ.
12ರಂದು ಸಂಜೆ 4 ಗಂಟೆಗೆ ವಿವಿಧ ಕಲಾ ತಂಡಗಳ ಮೆರವಣಿಗೆ, 6 ಗಂಟೆಗೆ ವಿವಿಧ ಕಲಾವಿದರಿಂದ ಜನಪದ ಜಾತ್ರೆ, ರಾತ್ರಿ 7 ಗಂಟೆಗೆ ಸುಗಮ ಸಂಗೀತ, 8ಕ್ಕೆ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ವೈಭವ ಹಾಗೂ 8.15ಕ್ಕೆ ಬೆಂಗಳೂರಿನ ವಸುಂದರದಾಸ್ ಮತ್ತು ತಂಡದವರಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

