ಥಾಯ್ಲೆಂಡ್ ವಿವಿ ಜತೆ ಶೈಕ್ಷಣಿಕ ವಿನಿಮಯ
ಕ.ಪ್ರ.ವಾರ್ತೆ ಮೈಸೂರು ಅ. 3
ಮೈಸೂರು ವಿಶ್ವವಿದ್ಯಾಲಯ ಹಾಗೂ ಥಾಯ್ಲೆಂಡ್ನ ಚುಲಾಲಂಗ್ಕಾರ್ನ್ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಕಾರ್ಯಕ್ರಮಗಳ ವಿನಿಮಯ ನಡೆಯಲಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಕುಲಸಚಿವರಾದ ಪ್ರೊ.ಸಿ. ಬಸವರಾಜು, ಪ್ರೊ.ಶ್ರೀಜಯದೇವರಾಜ ಅರಸ್, ಹಣಕಾಸು ಅಧಿಕಾರಿ ಪ್ರೊ.ಚಂದ್ರಕುಮಾರ್, ಪ್ರೊ.ಸುರೇಂದ್ರ ಅವರೊಂದಿಗೆ ರಾಯಲ್ಥಾಯ್ ಎಂಬಸಿ ಮಿಷನನ್ನಿನ ಉಪ ಮುಖ್ಯಸ್ಥ ಡಾ. ಸೂನ್ತಾರನ್ ಚೈಯಿಂದೀಪುಮ್, ಚುಲಲಾಂಗ್ ವಿವಿಯ ಉಪಾಧ್ಯಕ್ಷೆ ಡಾ.ಕಲಯ ತಿಂಗ್ಸ್ಬಾದ್ ಮೊದಲಾದವರು ಮಾತುಕತೆ ನಡೆಸಿ, ಕಾರ್ಯಕ್ರಮಗಳನ್ನು ಅಂತಿಮಗೊಳಿಸಿದರು.
ವಿವಿ ಕಾರ್ಯಸೌಧದಲ್ಲಿ ಉಭಯ ವಿವಿಗಳ ಮುಖ್ಯಸ್ಥರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುಲಾಲಂಗ್ ವಿವಿಯು ಥಾಯ್ಲೆಂಡ್ನ ಅತ್ಯಂತ ಹಳೆಯ ವಿವಿ. 1917ರಲ್ಲಿ ಸ್ಥಾಪನೆಯಾದುದು. 2,800 ಬೋಧಕರು ಹಾಗೂ 41,000 ವಿದ್ಯಾರ್ಥಿಗಳಿದ್ದಾರೆ. 40 ವಿಭಾಗಗಳು, ಹಲವು ಕಾಲೇಜುಗಳು ಮತ್ತು ಕೇಂದ್ರಗಳಿವೆ. 1927 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಭೇಟಿ ನೀಡಿದ್ದರು.
ಚುಲಾಲಂಗ್ ವಿವಿ ಬಳಕೆ: ಅವರು ಸಂಸ್ಕೃತ ಕಲಿಸಲು ಪ್ರಫುಲ್ಲ ಸೇನ್ ಅವರನ್ನು ಕಳುಹಿಸಿಕೊಟ್ಟಿದ್ದರು. ಸುಭಾಷ್ ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ ಹೋರಾಟದ ವೇದಿಕೆಯಾಗಿ ಚುಲಾಲಂಗ್ ವಿವಿಯನ್ನು ಬಳಸಿಕೊಂಡಿದ್ದರು.
ಚುಲಾಲಗ್ ವಿವಿ ಮತ್ತು ಭಾರತದ ಶಿಕ್ಷಣ ತಜ್ಞರ ನಡುವೆ ಪರಸ್ಪರ ಸಹಕಾರ ಇದೆ. ಭಾರತಕ್ಕೆ ಭೇಟಿ ನೀಡಿದ ಥಾಯ್ಲೆಂಡ್ನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸಹಕಾರ ಸಿಕ್ಕಿದೆ.
1990ರ ನಂತರ ಅಂದರೆ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯಾ ನೆಟ್ವರ್ಕ್ ರಚನೆಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ ಎಂಬುದು ಆ ದೇಶದ ಪ್ರತಿನಿಧಿಗಳ ಅನಿಸಿಕೆ.
ಮೈಸೂರು ವಿವಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಥಾಯ್ಲೆಂಡ್ಗೆ ಮೂರು ತಿಂಗಳ ವಿನಿಮಯ ಕಾರ್ಯಕ್ರಮಕ್ಕೆ ತೆರಳುವರು.
ಅಲ್ಲಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇಲ್ಲಿಗೆ ಬರಲಿದ್ದಾರೆ. ಉಭಯ ದೇಶದವರು ರಾಯಭಾರಿಗಳಂತೆ ಕೆಲಸ ಮಾಡಲಿದ್ದಾರೆ.
ಪ್ರಸ್ತುತ ಮೈಸೂರು ವಿವಿಯಲ್ಲಿ ಥಾಯ್ಲೆಂಡ್ನ 20 ವಿದ್ಯಾರ್ಥಿಗಳಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ರಂಗಪ್ಪ ತಿಳಿಸಿದರು. ಥಾಯ್ಲೆಂಡ್ ಉತ್ತಮ ಪ್ರವಾಸಿ ಕೇಂದ್ರ. ಅದೇ ರೀತಿ ಮೈಸೂರು ಕೂಡ ಪ್ರವಾಸಿತಾಣ. ಮುಂದಿನ ವರ್ಷ ಪ್ರವಾಸೋದ್ಯಮದಲ್ಲಿ ಎಂ.ಎ. ಕೋರ್ಸ್ ಆರಂಭಿಸುವ ಉದ್ದೇಶವಿದ್ದು, ಇದಕ್ಕೆ ಚುಲಾಲಂಗ್ ವಿವಿಯ ಸಹಕಾರ ನಡೆಯಲಾಗುವುದು ಎಂದರು.
ಸಂಶೋಧನೆಗೆ ಒತ್ತು: ಉಭಯ ವಿವಿಗಳ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದು ಡಾ.ಕಲಯ ತಿಂಗ್ಸ್ಬಾದ್ ತಿಳಿಸಿದರು.
ಸದ್ಯಕ್ಕೆ ಜೀವ ರಾಸಾಯನಶಾಸ್ತ್ರ, ರಾಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಭೌತಶಾಸ್ತ್ರ ಕ್ಷೇತ್ರಗಳಲ್ಲಿ ಸಂಶೋಧನಾ ಶೈಕ್ಷಣಿಕ ಕಾರ್ಯಕ್ರಮಗಳ ವಿನಿಯಮ ನಡೆಯಲಿದೆ. ಮುಂದೆ ಪ್ರಾಚ್ಯವಸ್ತು ಸಂಶೋಧನಾಲಯದ ಬಗ್ಗೆಯೂ ಚುಲಾಲಂಗ್ ವಿವಿಯವರು ಆಸಕ್ತಿ ವಹಿಸುವರು ಎಂದರು.
ಮುಂದಿನ ವರ್ಷ ಕೆಂಬ್ರಿಡ್ಜ್ ವಿವಿಯ ಜೊತೆಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಪ್ರೊ.ರಂಗಪ್ಪ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

