ಮೈಸೂರು

ಕಳ್ಳನಿಗೆ ಮೂರು ವರ್ಷ ಜೈಲು ಶಿಕ್ಷೆ

Published On :

ಕ.ಪ್ರ.ವಾರ್ತೆ   ಮೈಸೂರು   ಅ.5
ಮನೆ ಬಾಗಿಲು ಮುರಿದು ಕಳವು ಮಾಡಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬರಿಗೆ ಮೈಸೂರಿನ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಎಚ್.ಡಿ. ಕೋಟೆ ತಾಲೂಕು ಸರಗೂರು ನಿವಾಸಿ ಫಯಾಜ್ ಅ. ಸ್ವತ್ತ ಶಿಕ್ಷೆಗೆ ಗುರಿಯಾದವ. ಕುವೆಂಪುನಗರದ ನಿವಾಸಿ ಹಾಗೂ ನಿವೃತ್ತ ಎಂಜಿನಿಯರ್ ಟಿ.ಡಿ. ಮನಮೋಹನ್ ಎಂಬವರ ಮನೆಯಲ್ಲಿ 3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳು 2008ರ ಸೆ.12 ರಂದು ಕಳವಾಗಿತ್ತು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಆಗಿನ ಇನ್ಸ್ಪೆಕ್ಟರ್ಗಳಾದ ನಂಜುಂಡ, ಡಿ.ಧನಂಜಯ, ಬಿ.ಎಸ್. ರಾಜಶೇಖರ್ ಅವರು ಫಯಾಜ್ ಮತ್ತು ಅಶೋಕಪುರಂ ನಿವಾಸಿ ನಾಗರಾಜ್ ಅ. ಕೆಂಡ ಎಂಬವರನ್ನು ಬಂಧಿಸಿ, ಕಳವು ಮಾಲು ವಶಪಡಿಸಿಕೊಂಡಿದ್ದರು. ತನಿಖೆ ಪೂರೈಸಿ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ, 1ನೇ ಸಿಜೆ (ಕಿರಿಯ ವಿಭಾಗ) ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಆಳ್ವ ಅವರು ಫಯಾಜ್ ಮೇಲಿನ ಆರೋಪ ಸಾಬೀತಾಗಿದೆ ಎಂದು 3 ವರ್ಷ ಜೈಲು ಹಾಗೂ 500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2ನೇ ಆರೋಪಿ ನಾಗರಾಜ ಅ. ಕೆಂಡ  ವಿಚಾರಣಾ ಅವಧಿಯಲ್ಲಿ ತನ್ನ ಸಹಚರನಿಂದ ಕೊಲೆಯಾದ ಕಾರಣ ಆತನ ವಿರುದ್ಧ ಪ್ರಕರಣವವನ್ನು ಮುಕ್ತಾಯಗೊಳಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಪಿ. ರಾಮಲಿಂಗೇಗೌಡ ವಾದಿಸಿದ್ದರು.


ಮಾರುತಿ ವ್ಯಾನ್ ಡಿಕ್ಕಿ: ಅಪರಿಚಿತ ವ್ಯಕ್ತಿ ಸಾವು

ಮೈಸೂರು: ಮಾರುತಿ ವ್ಯಾನ್ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶಾಂತಿನಗರ ನಿಮ್ರಾ ಮಸೀದಿ ಬಳಿ ಗುರುವಾರ ರಾತ್ರಿ ನಡೆದಿದೆ.
ಚಹರೆ- 45 ವರ್ಷ, 5.9 ಅಡಿ ಎತ್ತರ, ಗುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ಬಿಸ್ಕತ್ ಬಣ್ಣದ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಹೊಟ್ಟೆಯ ಎಡಭಾಗದಲ್ಲಿ ಕಪ್ಪು ಕಾರಳ್ಳು ಇದೆ.
ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418326 ಸಂಪರ್ಕಿಸಲು ದೇವರಾಜ ಸಂಚಾರ ಠಾಣೆ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಕೋರಿದ್ದಾರೆ.



ಅಲೆಮಾರಿ ಮಹಿಳೆ ಸಾವು
ಮೈಸೂರು: ನಗರದ ಲಕ್ಷ್ಮಿಪುರಂನಲ್ಲಿ ರಸ್ತೆಬದಿಯಲ್ಲಿ ವಾಸವಾಗಿದ್ದ ಅಲೆಮಾರಿ ಜನಾಂಗದ ಮಹಿಳೆಯೊಬ್ಬರು ಹೊಟ್ಟೆ ನೋವಿನಿಂದ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಲೇ. ಮದ್ದೂರ ಎಂಬವರ ಪತ್ನಿ ಮಂಜಮ್ಮ (40) ಮೃತಪಟ್ಟವರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸ್ಟೌವ್ ರಿಪೇರಿ, ಮನೆ ಮನೆಗೆ ತೆರಳಿ ಕೂದಲು ಖರೀದಿಸುತ್ತಿದ್ದ ಮಂಜಮ್ಮ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಜೆಎಲ್ಬಿ ರಸ್ತೆಯಲ್ಲಿರುವ ಸಂಗೀತ ವಿಶ್ವವಿದ್ಯಾಲಯದ ಮುಂಭಾಗದ ಫುಟ್ಪಾತ್ನಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ತನಗೆ ಸೂರು ಕಲ್ಪಿಸಿಕೊಡುವಂತೆ ಮಂಜಮ್ಮ ಪಾಲಿಕೆಗೆ ಮೊರೆ ಹೋಗಿದ್ದರೂ ಪ್ರಯೋಜನವಾಗಿಲ್ಲ. ಮಂಜಮ್ಮ ಮೃತದೇಹವನ್ನು ಫುಟ್ಪಾತ್ನಲ್ಲೇ ಇರಿಸಲಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಮೇಯರ್ ಪುರುಷೋತ್ತಮ್ ಅವರು ಧನಸಹಾಯ ಮಾಡಿದರು. ಬಳಿಕ ಅಲೆಮಾರಿ ಜನಾಂಗದವರೇ ಮೃತರ ಅಂತ್ಯಕ್ರಿಯೆ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.