ಮೈಸೂರು

ಬಿಸಿಯೂಟ ಪದಾರ್ಥ ಸುಸ್ಥಿತಿಯಲ್ಲಿಡಲು ಸಲಹೆ

Published On :

ಟಿ. ನರಸೀಪುರ: ದಸರಾ ರಜೆಯಲ್ಲಿ ಶಾಲೆಗಳಲ್ಲಿರುವ ಬಿಸಿಯೂಟ ಆಹಾರ ಪದಾರ್ಥ ಹಾಗೂ ಸಿಲಿಂಡರ್ ಅನ್ನು ಮುಖ್ಯ ಶಿಕ್ಷಕರು ಸುಸ್ಥಿತಿಯಲ್ಲಿ ಜೋಪಾನವಾಗಿಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಹೇಳಿದ್ದಾರೆ. ತಾಲೂಕಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಸೂಚನೆಯಂತೆ ಅ.7 ರಿಂದ 29 ರವರೆಗೆ ದಸರಾ ರಜೆ ನೀಡಲಾಗಿದೆ. ಆಯಾಯ ಶಾಲೆಗಳ ಮುಖ್ಯ ಶಿಕ್ಷಕರು ರಜಾ ದಿನಗಳಲ್ಲಿ ಬಿಸಿಯೂಟ ಆಹಾರ ಪದಾರ್ಥಗಳು ಹಾಳಾಗದಂತೆ ಮತ್ತು ಅಡುಗೆ ಸಿಲಿಂಡರ್ ಅನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅ.30 ರಿಂದ ಶಾಲೆಗಳು ಆರಂಭವಾಗಲಿದೆ ಎಂದು  ತಿಳಿಸಿದ್ದಾರೆ.


ನವರಾತ್ರಿ ಉತ್ಸವಕ್ಕೆ ಚಾಲನೆ


ಕ.ಪ್ರ.ವಾರ್ತೆ   ಎಚ್.ಡಿ.ಕೋಟೆ   ಅ. 5
ಪಟ್ಟಣದ ಒಂದನೇ ಮುಖ್ಯರಸ್ತೆಯ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ಶನಿವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ನವರಾತ್ರಿ ಉತ್ಸವದ ಅಂಗವಾಗಿ ಅ.5 ರಿಂದ 14 ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಅ.6 ಸಂಜೆ ಭಕ್ತಿ ಗೀತೆಗಳು, ಅ.7 ಸಂಜೆ ಭಕ್ತಿಗೀತೆಗಳು, ಅ.8 ವಿವೇಕ ಜಾಗೃತ ಬಳಗದಿಂದ ಸುಗಮ ಸಂಗೀತ, ಅ.9 ರಂದು ವೇದೋಪಾಸಕಿ ಭ್ರಮರಾಂಭ ಮಹೇಶ್ವರಿ ಹಾಗೂ ವೃಂದದವರಿಂದ ಗಾನಸುಧಾ, ಅ.10 ಭಜನೆ, ಅ.11 ಭರತನಾಟ್ಯ, ಅ.12 ಮೃದಲಾ, ಸಂಜನಾ, ಮಾಸ್ಟರ್ ಕುಶಲ್, ಸುದರ್ಶನ್ ಅವರಿಂದ ದೇವರನಾಮ ಮತ್ತು ಕೀರ್ತನೆ, ಅ.13 ರಂದು ಮಕ್ಕಳು, ಮಹಿಳೆಯರಿಗೆ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ನಡೆಸಲಾಗುವುದು. ನವರಾತ್ರಿಯಂದು ಶ್ರೀ ಸ್ವಾಮಿಯ ಉತ್ಸವವನ್ನು ಏರ್ಪಡಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.