ಸೆಸ್ಕ್ನಿಂದ ವಿದ್ಯುತ್ ಉಳಿಸಿ ಆಂದೋಲನ
ಕ.ಪ್ರ.ವಾರ್ತೆ ಮೈಸೂರು ಅ. 10
ವಿದ್ಯುತ್ ಉಳಿಸಿ...
- ಇಂತಹದೊಂದು ಬರಹವಿರುವ ದೊಡ್ಡ ಮಳಿಗೆಯೊಂದು ನೀವು ದಸರಾ ವಸ್ತುಪ್ರದರ್ಶನ ಆವರಣಕ್ಕೆ ಹೋಗುತ್ತಿದ್ದಂತೆ ಎದುರಾಗುತ್ತದೆ. ಒಮ್ಮೆ ಈ ಮಳಿಗೆಗೆ ಪ್ರತಿಯೊಬ್ಬರು ಭೇಟಿ ನೀಡಿ ವಿದ್ಯುತ್ ಮಹತ್ವದ ಬಗ್ಗೆ ತಿಳಿದುಕೊಳ್ಳುವು ಅನಿವಾರ್ಯ ಹಾಗೂ ಅವಶ್ಯ ಕೂಡ ಆಗಿದೆ.
ಹೌದು, ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವೌಮ್ಯದ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು(ಸೆಸ್ಕ್) ವಿದ್ಯುತ್ ಮೇಳವನ್ನು ದೊಡ್ಡಕೆರೆ ಮೈದಾನದಲ್ಲಿ ಆಯೋಜಿಸಿದೆ. ಈಗಿನ ಆಧುನಿಕ ಬದುಕಿಗೆ ವಿದ್ಯುತ್ ಎಷ್ಟು ಅನಿವಾರ್ಯ ಎಂಬುದು ಈ ಮೇಳದಲ್ಲಿ ತಿಳಿಸಿಕೊಡಲಾಗುತ್ತಿದೆ.
ವಿದ್ಯುತ್ ಪ್ರಸ್ತುತ ಮಾಹಿತಿ ತಂತ್ರಜ್ಞಾನ, ವೈಜ್ಞಾನಿಕ ಆವಿಷ್ಕಾರಗಳ ಹಿಂದಿನ ಆಂತರಿಕ ಚೈತನ್ಯ ಹಾಗೂ ತಾಂತ್ರಿಕ ಪರಿಣಿತಗಳ ಹಿಂದಿನ ಜೀವದ್ರವ್ಯವಾಗಿದೆ. ವಿದ್ಯುತ್ ಬಳಕೆಯ ಆಧಾರದ ಮೇಲೆ ದೇಶಮೊಂದರ ಪ್ರಗತಿ ಮಟ್ಟವನ್ನು ತಲಾವಾರು ಅಳೆಯಲಾಗುತ್ತದೆ. ಗ್ರಾಮಾಂತರ ಮತ್ತು ನಗರ ಯಾವುದೇ ಭೇದವಿಲ್ಲದೆ ಎಲ್ಲೆಡೆ ವಿದ್ಯುತ್ ಬೆಳಕು ಆವರಿಸಿದೆ.
ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಸಂಶೋಧನೆ ಸೇರಿದಂತೆ ಎಲ್ಲದಕ್ಕೂ ವಿದ್ಯುತ್ ಅನಿವಾರ್ಯ. ನಿತ್ಯ ಬದುಕಿನಲ್ಲಿ ವಿದ್ಯುತ್ ನಿರ್ಣಾಯಕ ಪಾತ್ರವಹಿಸುತ್ತಿದೆ. ಇಂತಹ ವಿದ್ಯುತ್ ಕ್ಷೇತ್ರದಲ್ಲಿ ಆಗಿರುವ ಹಲವಾರು ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿದ್ಯುತ್ ಮೇಳವನ್ನು ಸೆಸ್ಕ್ ಆಯೋಜಿಸಿದೆ. ವಿದ್ಯುತ್ ಉಳಿತಾಯ ಹಾಗೂ ಅವುಗಳ ಸದುಪಯೋಗಳು ಅನಿವಾರ್ಯವಾಗಿದೆ. ಇದಕ್ಕೆ ಪರ್ಯಾಯವಾಗಿ ಸೌರಶಕ್ತಿ, ಪವನಶಕ್ತಿಯಿಂದ ನಿತ್ಯದ ವಿದ್ಯುತ್ ಉತ್ಪಾದಿಸಿಕೊಳ್ಳುವುದು, ಕೈಗಾರಿಕೆಗಳನ್ನು ನಡೆಸುವುದು, ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುವ ಎಲ್ಇಡಿ ಮತ್ತು ಸಿಎಫ್ಎಲ್ ಬಲ್ಬುಗಳ ಬಳಕೆ ಕುರಿತು ಮೇಳದಲ್ಲಿ ಅರಿವು ಮೂಡಿಸಲಾಗುತ್ತಿದೆ.
ಮೇಳದಲ್ಲಿ ಮಳಿಗೆಗಳು...: ವಿದ್ಯುತ್ ಮೇಳದಲ್ಲಿ 18 ಮಳಿಗೆಗಳಿವೆ. ಎಂಜಿನಿಯರಿಂಗ್ ಕಾಲೇಜುಗಳು, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ವಿದ್ಯುತ್ ಉಪಕರಣಗಳ ಉತ್ಪಾದಕರು, ದುರಸ್ತಿ ಕೇಂದ್ರದವರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಸೆಸ್ಕ್ ಮಳಿಗೆಗಳು ಪ್ರಮುಖವಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯುತ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮಾಹಿತಿ ನೀಡಲಾಗುತ್ತದೆ.
ವಿದ್ಯುತ್ ಬೇಡಿಕೆಯು ಉತ್ಪಾದನೆಯ ಮಟ್ಟಕ್ಕಿಂತಲೂ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಅಮೂಲ್ಯ ವಿದ್ಯುತ್ ಸದುಪಯೋಗಪಡಿಸಿಕೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸುವುದು ಮೇಳದ ಪ್ರಮುಖ ಉದ್ದೇಶ.
ಬಿ. ಶೇಖರ್ ಗೋಪಿನಾಥಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

